ಮಂಗಳೂರು ಯುವತಿಯರೇ ಟಾರ್ಗೆಟ್: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟಕ್ಕೆ ಪತ್ನಿ ಸುಸ್ತು

ಮಂಗಳೂರು ಮತ್ತು ಕರಾವಳಿ ಜಿಲ್ಲೆಗಳ ಯುವತಿಯರನ್ನು ಟಾರ್ಗೆಟ್ ಮಾಡಿ ಮ್ಯಾಟ್ರಿಮೊನಿ, ಫೇಸ್‌ಬುಕ್, ಟಿಕ್‌ಟಾಕ್ ಮೂಲಕ ಪ್ರೀತಿ ನಾಟಕ ಆಡಿ ಹಣ ವಂಚಿಸುತ್ತಿದ್ದ ಒಬ್ಬ ವ್ಯಕ್ತಿಯ ಬಗ್ಗೆ ಈಗ ಆತನ ಪತ್ನಿಯಿಂದಲೇ ದೂರು ಬಂದಿದ್ದು, ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.

ಬಜೆಪೆ ನಿವಾಸಿ ಮನೀಷ್ ವಿರುದ್ಧ ಅವನ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಪ್ರೀತಿ ನಾಟಕ ಆಡಿ ಬ್ಲ್ಯಾಕ್‌ಮೇಲ್ ಮಾಡಿ ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಕರಣದ ವಿವರಗಳು ಪ್ರೀತಿ ಮತ್ತು ಮನೀಷ್ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು. ಪ್ರೀತಿ ಮದುವೆಗೆ ಮೂರು ದಿನಗಳೇ ಇದ್ದಾಗ ಮನೀಷ್ ಆತ್ಮಹತ್ಯೆ ನಾಟಕ ಮಾಡಿ “ಹಣ ಇಲ್ಲ, ಮದುವೆ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದ. ಇದರಿಂದ ಪ್ರೀತಿಯ ಫೋಷಕರು ಎಲ್ಲಾ ಮದುವೆ ಖರ್ಚು ಹೊತ್ತು ಮದುವೆ ಮಾಡಿದ್ದರು. ಮದುವೆಯ ನಂತರ ಪ್ರೀತಿ ಎರಡು ಲಕ್ಷ ರೂಪಾಯಿ ಕೊಟ್ಟು ಮನೀಷ್‌ಗೆ ವಿದೇಶದಲ್ಲಿ ಕೆಲಸ ಕೊಡಿಸಲು ಸಹಾಯ ಮಾಡಿದ್ದಳು.

ದುಬೈಗೆ ಹೋದ ಮನೀಷ್ ನಂತರ ಬಹರೇನ್‌ನಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ಲವ್ ಅಫೇರ್‌ಗೆ ಇಳಿದ್ದಾನೆ ಎಂಬ ಮಾಹಿತಿ ಪ್ರೀತಿಗೆ ಸಿಕ್ಕಿತು. ಇದರ ನಂತರ ಪ್ರೀತಿ ಮನೀಷ್‌ನ ಹಿಂದಿನ ಇತಿಹಾಸ ಕೆದಕಿದಳು. ಅವನು ಮದುವೆಗೂ ಮುನ್ನ ಹಲವು ಯುವತಿಯರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, ಅವರ ಬಳಿಯೂ ಹಣ ಪಡೆದು ಮೋಸ ಮಾಡಿದ್ದಾನೆ ಎಂಬ ಮಾಹಿತಿ ಬಯಲಾಗಿದೆ.

ಹಣ ವಾಪಸ್ ಕೇಳಿದಾಗ “ಬ್ರೈನ್ ಟ್ಯೂಮರ್ ಇದೆ, ಚಿಕಿತ್ಸೆಗೆ ಹಣ ಬೇಕು” ಎಂದು ನಾಟಕ ಮಾಡಿ ಲವ್ ಬ್ರೇಕ್‌ಅಪ್ ಮಾಡುತ್ತಿದ್ದಾನೆ ಎಂದು ಆ ಯುವತಿಯರು ಪ್ರೀತಿಗೆ ತಿಳಿಸಿದ್ದಾರೆ. ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡಿ ಯುವತಿಯರನ್ನು ಆಕರ್ಷಿಸಿ ಮೋಸ ಮಾಡುವುದು ಅವನ ವಿಧಾನವಾಗಿತ್ತು.

ಪ್ರೀತಿಯ ದೂರು “ಇಂತಹ ಗಂಡ ಬೇಡ. ಮತ್ತೆ ಯಾರೂ ಈತನಿಂದ ಮೋಸ ಹೋಗಬಾರದು” ಎಂದು ಪ್ರೀತಿ ತನ್ನ ದೂರಿನಲ್ಲಿ ಹೇಳಿದ್ದಾರೆ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಮನೀಷ್ ವಿರುದ್ಧ ವಂಚನೆ, ಬ್ಲ್ಯಾಕ್‌ಮೇಲ್, ಮಹಿಳೆಯರ ಮೇಲೆ ಮಾನಸಿಕ ಹಿಂಸೆ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.

ಮಂಗಳೂರು ಮತ್ತು ಕರಾವಳಿ ಜಿಲ್ಲೆಗಳ ಯುವತಿಯರು, ವಿದೇಶದಲ್ಲಿರುವ ಕರಾವಳಿ ಹುಡುಗಿಯರು ಇವರನ್ನು ಟಾರ್ಗೆಟ್ ಮಾಡಿ ಮೋಸ ಮಾಡುತ್ತಿದ್ದಾನೆ ಎಂದು ಆರೋಪವಿದ್ದು, ಇನ್ನಷ್ಟು ಯುವತಿಯರು ಮುಂದೆ ಬಂದರೆ ಪ್ರಕರಣಕ್ಕೆ ಹೊಸ ತಿರುವು ಸಿಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version