ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ: ಮಹಿಳೆ ಸ್ಥಳದಲ್ಲೇ ಸಾವು!

ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಆಕ್ಸಿಡೆಂಟ್‌

Befunky collage 2025 03 15t125455.499

ಮಂಡ್ಯದ ಮಳವಳ್ಳಿ ಪಟ್ಟಣದ ಕೊಳ್ಳೆಗಾಲ ರಸ್ತೆಯ ಕುಣಿಗಲ್ ಬಳ್ಳಿ ಹೃದಯವಿದ್ರಾವಕ ಅಪಘಾತ ಸಂಭವಿಸಿದೆ. ಇಬ್ಬರು ಹೆಣ್ಣು ಮಕ್ಕಳನ್ನು ಸ್ಕೂಟರ್‌‌ನಲ್ಲಿ ಕೂರಿಸಿಕೊಂಡು ಸಾಲೆಗೆ ಬಿಡಲು ಹೋಗುತ್ತಿದ್ದಾಗ,ವೇಗದ ಬೊಲೆರೊ ವಾಹನಕ್ಕೆ ಸ್ಕೂಟರ್ ಡಿಕ್ಕಿಯಾಗಿದೆ.

ಕುಂದೂರು ಗ್ರಾಮದ 39 ವರ್ಷದ ಮಹಿಳೆ ಶಿಲ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಕ್ಕಳಾದ 7 ವರ್ಷದ ಅನನ್ಯ ಹಾಗೂ 5 ವರ್ಷದ ಮಾನ್ಯಗೆ ಗಾಯವಾಗಿದೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ವೇಳೆ ದುರ್ಘಟನೆ ಸಂಭವಿಸಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ಶಿಲ್ಪ ಸ್ಥಳದಲ್ಲೇ ಸಾವು ಕಂಡಿದ್ದಾರೆ.ಮಕ್ಕಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ರಸ್ತೆಯಲ್ಲಿ ರಕ್ತದ ಹೊಳೆಯ ನಡುವೆ ಮಕ್ಕಳು ಹೃದಯವಿದ್ರಾವಕವಾಗಿ ಅಳುತ್ತಿದ್ದ ದೃಶ್ಯ ಕಳವಳಕ್ಕೀಡುಮಾಡಿದೆ.

ಘಟನೆ ನಡೆದದ್ದು ಕಣಿಗಲ್ ಹಳ್ಳದ ಬಳಿ. ಎದುರು ದಿಕ್ಕಿನಿಂದ ಬರುತ್ತಿದ್ದ ಬೊಲೆರೊ ವಾಹನದ ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್ಗೆ ಡಿಕ್ಕಿಯಾಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಗಾಯಗೊಂಡ ಮಕ್ಕಳನ್ನು ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ, ಗಂಭೀರ ಸ್ಥಿತಿಯಿಂದಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆಪೊಲೀಸರು ಪ್ರಕರಣವನ್ನು ದಾಖಲಿಸಿ, ಶಿಲ್ಪಾಳ ದೇಹವನ್ನು ಮಳವಳ್ಳಿ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.

Exit mobile version