ಅಕ್ರಮ ಸಂಪತ್ತಿನ ಸರದಾರ ಚಿತ್ರದುರ್ಗದ ಕಾಂಗ್ರೆಸ್ ಶಾಸಕನಿಗೆ ಇಡಿ ಫುಲ್ ಬೆಂಡೆತ್ತಿದೆ. ಕ್ಯಾಸಿನೊ ಹಾಗು ಬೆಟ್ಟಿಂಗ್ ಆ್ಯಪ್ ಗಳಲ್ಲಿ ನೂರಾರು ಕೋಟಿ ದುಡಿದಿದ್ದು ಶಾಸಕನಿಗೆ ಮುಳುವಾಗಿದೆ. ಇಂದಿನಿಂದ ಐದು ದಿನ ಇಡಿ ಕಸ್ಟಡಿಗೆ ಸಿಲುಕಿರೊ ಶಾಸಕ ವೀರೇಂದ್ರ ಪಪ್ಪಿಗೆ ಡ್ರಿಲ್ ನಡೆಯಲಿದೆ.
ಕಳೆದ ಎರಡು ದಿನಗಳ ಹಿಂದೆ ಶಾಸಕ ಕೆ ಸಿ ವೀರೇಂದ್ರ ಒಡೆತನದ ಕ್ಯೆಸಿನೊ , ಬೆಟ್ಟಿಂಗ್ ಆ್ಯಪ್ ಗಳ ಮೇಲೆ ಇಡಿ ದಾಳಿ ನಡೆಸಿತ್ತು. ದೇಶಾದ್ಯಂತ 30 ಕ್ಕು ಹೆಚ್ಚು ಕಡೆ ದಾಳಿ ನಡೆಸಿದ್ದ ಇಡಿಗೆ ಎಂ ಎಲ್ ಎ ವೀರೇಂದ್ರ ಬಳಿ ಕುಬೇರನ ಭಂಡಾರವನ್ನೇ ಪತ್ತೆ ಮಾಡಿದ್ರು. 12 ಕೋಟಿ ನಗದು,1 ಕೋಟಿ ಫಾರಿನ್ ಕರೆನ್ಸಿ, 6 ಕೋಟಿ ಮೌಲ್ಯದ ಚಿನ್ನಾಭರಣ , 17 ಬ್ಯಾಂಕ್ ಅಕೌಂಟ್ ಹಾಗು ಎರಡು ಲಾಕರ್ ಸೀಜ್ ಮಾಡಿದ್ರು. ನಿನ್ನೆಯೇ ಗ್ಯಾಂಗ್ಟಕ್ ನಲ್ಲಿ ಕೆಸಿ ವೀರೇಂದ್ರರನ್ನ ಅರೆಸ್ಟ್ ಮಾಡಿದ್ದ ಇಡಿ ಅಧಿಕಾರಿಗಳು ಟ್ರಾನ್ಸಿಟ್ ವಾರೆಂಟ್ ಪಡೆದು ಮಧ್ಯರಾತ್ರಿ ವೇಳೆಗೆ ಬೆಂಗಳೂರಿಗೆ ಕರೆತಂದು , ಮೆಡಿಕಲ್ ಚೆಕಪ್ ಮಾಡಿಸಿ ಶಾಂತಿನಗರದ ಇಡಿ ಕಚೇರಿಯಲ್ಲಿ ತಂದಿಟ್ಟಿದ್ರು.
ಇಂದು ಮಧ್ಯಾಹ್ನದ ವೇಳೆಗೆ ಕೋರಮಂಗಲದ ಎನ್ ಜಿವಿ ಕ್ವಾಟ್ರಸ್ ನಲ್ಲಿರೊ ಕೋರ್ಟ್ ಹಾಲ್ 35 ರ ನ್ಯಾಯಾಧೀಶರ ಮುಂದೆ ಶಾಸಕ ಕೆಸಿ ವೀರೇಂದ್ರರನ್ನ ಹಾಜರುಪಡಿಸಿ 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ರು. ಓಪನ್ ಕೋರ್ಟ್ ಗೆ ಹಾಜರು ಪಡಿಸಿ ಕಸ್ಟಡಿಗೆ ನೀಡೋದಾಗಿ ನ್ಯಾಯಾಧೀಶರು ಹೇಳಿದಾಗ , ನ್ಯಾಯಾಂಗ ಬಂಧನಕ್ಕೆ ಕೊಟ್ರೆ ಎವಿಡೆನ್ಸ್ ಗಳು ಡೆಸ್ಟ್ರಾಯ್ ಆಗುತ್ತೆ ಅಂತಾ ಇಡಿ ಪರ ವಕೀಲರು ತಕರಾರು ಎತ್ತಿದ್ರು. ಎಲ್ಲವೂ ಡಿಜಿಟಲ್ ಎವಿಡೆನ್ಸ್ ಗಳಾಗಿದ್ದು ಹೇಗೆ ನಾಶ ಪಡಿಸಲು ಸಾಧ್ಯ ಅಂತಾ ನ್ಯಾಯಾಧೀಶರು ಇಡಿ ವಕೀಲರಿಗೆ ಕೇಳಿದ್ರು. ಕೊನೆಗೆ ಇಡಿ ವಕೀಲರ ಮನವಿ ಮೇರೆಗೆ 5 ದಿನಗಳ ಕಾಲ ಅಂದ್ರೆ ಇದೇ ತಿಂಗಳ 28 ನೇ ತಾರೀಖಿನವರೆಗೆ ಕೆಸಿ ವೀರೇಂದ್ರರನ್ನ ಇಡಿ ಕಸ್ಟಡಿಗೆ ನೀಡಿ ಮಾನ್ಯ ನ್ಯಾಯಾಧೀಶರು ಆದೇಶಿಸಿದ್ರು.
ಇಂದಿನಿಂದ ಶಾಸಕ ಕೆಸಿ ವೀರೇಂದ್ರಗೆ ಇಡಿ ಅಧಿಕಾರಿಗಳು ವಿಚಾರಣೆ ಆರಂಭಿಸಲಿದ್ದು, ಅಕ್ರಮಮ ಹಣ ವರ್ಗಾವಣೆ ಸಂಬಂಧ ವಿಚಾರಣೆ ತೀವ್ರಗೊಳಿಸಲಿದ್ದಾರೆ.