ಪ್ರೀತಿಗೆ ಮನೆಯವರ ವಿರೋಧ: ಪ್ರೇಮಿಗಳು ನೇಣಿಗೆ ಶರಣು

Untitled design 2025 03 08t131837.691

ಕಲಬುರಗಿ: ಪ್ರೀತಿಗೆ ಮನೆಯವರು ವಿರೋಧಿಸಿದ್ದಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾಳಪ್ಪಾ (16) ಮತ್ತು ನಸೀಮಾ ಎಂಬ ಪ್ರೇಮಿಗಳು ಒಂದೇ ನೇಣಿನ ಹಗ್ಗದಲ್ಲಿ ಕೊರಳಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಅವರ ಪ್ರೀತಿಗೆ ಕುಟುಂಬದವರ ವಿರೋಧವಿದ್ದ ಕಾರಣ, ಇದರಿಂದ ಈ ತೀರ್ಮಾನಕ್ಕೆ ಬಂದಿರುವುದು ತಿಳಿದು ಬಂದಿದೆ.

 ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Exit mobile version