ವಾತಾವರಣ ಏರಿಳಿತಕ್ಕೆ ವಕ್ಕರಿಸುತ್ತಿದೆ ನೂರಾರು ಕಾಯಿಲೆ..!

Film 2025 04 18t211247.754

ವಾತಾವರಣ ಬದಲಾವಣೆಯ ಜನರನ್ನು ರೋಗಗಳತ್ತ ದೂಕುತ್ತಿದೆ. ಬೇಸಿಗೆ ಮಳೆಯ ಏಫೆಕ್ಟ್ ನಿಂದಾಗಿ ಆಸ್ಪತ್ರೆಗಳತ್ತಾ ಮುಖ‌ ಮಾಡುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು. ಸಾವಿರಾರು ಸಮಸ್ಯೆಗಳ ಮದ್ಯೆ ರೋಗಿಗಳ ಚಿಕಿತ್ಸೆಗೆ ಕಿಂಚಿತ್ತು ಚಿಕ್ಕೆ ಬರದಂತೆ ನೋಡಿಕೊಳ್ಳುವ ಸಾವಲು ಆಸ್ಪತ್ರೆಗಳಿಗೆ ಎದುರಾಗಿದೆ.
ಆದರೆ ಇಷ್ಟು ದಿನ ಬಿಸಿಲಿಗೆ ಬೆಂದು ನಾನ ರೀತಿಯ ಕಾಯಿಲೆಗಳಿಂದ ಬಳಲಿದ್ದ ಜನರಿಗೆ ಸಿಲಿಕಾನ್ ಸಿಟಿಯಲ್ಲಿ ಸುರಿದ ಮಳೆ ಇನ್ನಷ್ಟು ಹೈರಾಣು ಮಾಡಿದೆ. ವಾತಾವರಣ ಕೂಲ್ ಆಯ್ತು ಅಂತಾ ರೀಲೀಫ್ ಆಗಿದ್ದ ಮಂದಿ ಇದೀಗಾ ಮಳೆ ತಂದಿರೋ ಅವಾಂತರ ಹಾಗೂ ರೋಗರುಜಿನಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳ ಬಾಗಿಲಲ್ಲಿ ಕಾದು ಕ್ಯೂ ನಿಲ್ಲೋ‌ ಸ್ಥಿತಿ ನಿರ್ಮಾಣವಾಗಿದೆ.
ಸಿಲಿಕಾನ್ ಸಿಟಿಯ ಸರ್ಕಾರಿ ಆಸ್ಪತ್ರೆಗೆ ಬರುತ್ತಿರೋ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ. ಕಳೆದ ಒಂದು ವಾರದಿಂದ ದಿನನಿತ್ಯ ಸಾವಿರಾರು ರೋಗಿಗಳು ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಹೊರರೋಗಿ ವಿಭಾಗದಲ್ಲಿ ರೋಗಿಗಳಿ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ ಇದರ ಜೊತೆಗೆ ಆಸ್ಪತ್ರೆಗೆ ದಾಖಲಾಗುತ್ತಿರುವ ಒಳರೋಗಿಗಳ ಸಂಖ್ಯೆ  ಕಳೆದ ಒಂದು ವಾರದಿಂದ ಏರಿಕೆಯಾಗಿದ್ದು‌. ಅಲ್ಲಿನ ವೈದ್ಯರು ಹೈರಾಣಗಿದ್ದಾರೆ. ಇನ್ನೂ ಸಮಾನ್ಯವಾಗಿ ಜ್ವರ, ಶೀತ ,ಕೆಮ್ಮು ,ವಾಂತಿ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿದ್ದಾರೆ.
ಇನ್ನೂ ಆಸ್ಪತ್ರೆಯಲ್ಲಿ‌ ಸಾವಿರಾರು ಸಮಸ್ಯೆಗಳು ಎದುರಾಗಿದ್ದು. ಆ ಸಮಸ್ಯೆಗಳ ಮದ್ಯೆ ರೋಗಿಗಳಿಗೆ ಚಿಕಿತ್ಸೆ ನೀಡುವ ಆತಂಕ ಕೂಡ ಮನೆ ಮಾಡಿದೆ. ಒಂದೆಡೆ ನೀರಿನ ಅಭಾವ ಕಾಡುತಿದ್ರೆ.ಮತ್ತೊಂದೆಡೆ ಶೇಕಡಾ 95% ರಷ್ಟು ಬೆಡ್ ಗಳು ಭರ್ತಿ ಯಾಗಿದ್ದು. ರೋಗಿಗಳಿಗೆ ಬೆಡ್ ಹೇಗೆ ಒದಗಿಸುವುದು ಅನ್ನೋ ಆತಂಕ ಶುರುವಾಗಿದೆ. ನಗರದ ಕೆ.ಸಿ ಜನರಲ್, ವಿಕ್ಟೋರಿಯಾ ಆಸ್ಪತ್ರೆಗಳಲ್ಲೂ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು. ವೈದ್ಯರ ಕೊರತೆ ಇನ್ನೂ ಅನೇಕ ಸಮಸ್ಯೆಗಳ ನಡುವೆ ಈ ಸಾಂಕ್ರಾಮಿಕ ರೋಗಗಳಿಗೆ ಬ್ರೇಕ್ ಹಾಕೋ ಸಾವಲನ್ನ ಆಸ್ಪತ್ರೆಗಳು ಎದರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ಬಂದು ಸಾಂಕ್ರಮಿಕ ರೋಗಗಳು ಭುಗಿಲೆದ್ದಿರೊದಂತು ಜನ ಸಾಮಾನ್ಯರನ್ನ ಕಾಡುತಿದ್ರೆ‌.‌ಇತ್ತ ಆಸ್ಪತ್ರೆಗಳು ಮಾತ್ರ ಎಡಬಿದದೇ ಕೆಲಸ ನಿರ್ವಹಿಸಿ ಸಾಂಕ್ರಮಿಕ ರೋಗ ಹಾವಳಿಗೆ ಬ್ರೇಕ್ ಹಾಕುವ ಪಣ ತೊಟ್ಟಿರೊದಂತು ನಿಜ.

Exit mobile version