ಜೈನ ಧರ್ಮದ ಅವಹೇಳನ ಆರೋಪ: ಗಿರೀಶ್ ಮಟ್ಟಣ್ಣವರ್ ವಿರುದ್ಧ ಬೆಳ್ತಂಗಡಿಯಲ್ಲಿ ಎಫ್‌ಐಆರ್

ಧಾರವಾಡದಿಂದ ಬೆಳ್ತಂಗಡಿಗೆ ಪ್ರಕರಣ ವರ್ಗಾವಣೆ!

1 2025 08 26t194536.498

ಮಂಗಳೂರು: ಹೋರಾಟಗಾರ ಗಿರೀಶ್ ಮಟ್ಟಣ್ಣವರ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಧಾರವಾಡದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಇದೀಗ ಬೆಳ್ತಂಗಡಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

ಗಿರೀಶ್ ಮಟ್ಟಣ್ಣವರ್ ಒಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, “ಮದುವೆಯಾದ ಹೆಣ್ಣುಮಗಳು ಜೈನ ರಾಜರೊಂದಿಗೆ ಮೊದಲ ರಾತ್ರಿ ಕಳೆಯಬೇಕಿತ್ತು. ಏಕಶಿಲಾ ಮೂರ್ತಿ ನಿರ್ಮಾಣ ಮಾಡಿದ ಶಿಲ್ಪಿಯ ಕೈ ಕತ್ತರಿಸಲಾಗುತ್ತಿತ್ತು,” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಹೇಳಿಕೆಯ ಬೆನ್ನಲ್ಲೇ, ಮಂಜುನಾಥ್ ಎಂಬುವವರು ಧಾರವಾಡ ಪೊಲೀಸ್ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವರ್ ಮತ್ತು ಯೂಟ್ಯೂಬ್ ಚಾನೆಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಈಗ ಈ ಪ್ರಕರಣವನ್ನು ಬೆಳ್ತಂಗಡಿ ಠಾಣೆಗೆ ವರ್ಗಾಯಿಸಲಾಗಿದ್ದು, ದೂರುದಾರ ಮಂಜುನಾಥ್ ಅವರನ್ನು ಕರೆಸಿ ದಾಖಲೆಗಳನ್ನು ಪಡೆಯಲಾಗಿದೆ. “ಗಿರೀಶ್ ಮಟ್ಟಣ್ಣವರ್ ಕೇವಲ ಕ್ಷಮೆಯಾಚಿಸಿದರೆ ಸಾಲದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಮಂಜುನಾಥ್ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಿರೀಶ್ ಮಟ್ಟಣ್ಣವರ್‌ಗೆ ಕಾನೂನು ತೊಡಕು ಎದುರಾಗಿದೆ.

Exit mobile version