ಗಣಪತಿ ಮೆರವಣಿಗೆಯಲ್ಲಿ ಪಟಾಕಿ ಬಾಕ್ಸ್ ಸ್ಫೋಟಗೊಂಡು ಬಾಲಕ ಸಾ*ವು: ಪೊಲೀಸ್ ಸೇರಿ ಐವರಿಗೆ ಗಾಯ

ದೊಡ್ಡಬಳ್ಳಾಪುರದ ಗಣಪತಿ ಮೆರವಣಿಗೆಯಲ್ಲಿ ದುರಂತ!

Untitled design 2025 08 29t222523.211

ಬೆಂಗಳೂರು: ಬೆಂಗಳೂರು ಗ್ರಾಮಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುತ್ತೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಪಟಾಕಿ ಬಾಕ್ಸ್ ಸ್ಫೋಟಗೊಂಡ ಘಟನೆಯಲ್ಲಿ 15 ವರ್ಷದ ಬಾಲಕ ಸಾವನ್ನಪ್ಪಿದ್ದು, ಪೊಲೀಸ್ ಕಾನ್ಸ್‌ಟೇಬಲ್ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟ ಬಾಲಕನನ್ನು ಮುತ್ತೂರು ನಿವಾಸಿಯಾದ ತನುಷ್ ರಾವ್ (15) ಎಂದು ಗುರುತಿಸಲಾಗಿದೆ. ಫ್ರೆಂಡ್ಸ್ ಯುವಕರ ಬಳಗವು ಆಯೋಜಿಸಿದ್ದ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೆರವಣಿಗೆಯಲ್ಲಿ ಬಳಸಲಾಗಿದ್ದ ಲಿಫ್ಟಿಂಗ್ ವಾಹನದಲ್ಲಿ ಪಟಾಕಿ ಬಾಕ್ಸ್‌ಗಳನ್ನು ಇಡಲಾಗಿತ್ತು. ವಾಹನದ ಸೈಲೆನ್ಸರ್‌ನಿಂದ ಉಂಟಾದ ಬಿಸಿಯಿಂದಾಗಿ ಪಟಾಕಿ ಬಾಕ್ಸ್‌ಗೆ ಬೆಂಕಿ ತಗುಲಿ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಗಾಯಗೊಂಡವರನ್ನು ಗಣೇಶ್ (16), ಯೋಗೇಶ್ (15), ಮುನಿರಾಜು (27), ನಾಗರಾಜು (35), ಮತ್ತು ಕಾನ್ಸ್‌ಟೇಬಲ್ ಜಾಕಿರ್ ಹುಸೇನ್ ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ತಕ್ಷಣವೇ ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸ್ಫೋಟದ ನಿಖರ ಕಾರಣವನ್ನು ತಿಳಿಯಲು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Exit mobile version