500 ರೂ ಗರಿ ಗರಿ ನೋಟು ಪ್ರಿಂಟ್​ ಮಾಡ್ತಿದ್ದ ಆಸಾಮಿ ಅಂದರ್

ಬ್ಯಾಗ್‌ನಲ್ಲಿ ಪ್ರಿಂಟರ್, ಸ್ಕ್ಯಾನರ್‌ ತಂದು ಹೊಟೇಲ್ ನಲ್ಲಿ ಸ್ಟೇ

Web 2025 06 13t232957.116

ಬೆಂಗಳೂರಿನಲ್ಲಿ ಮತ್ತೆ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ.ಕಮರ್ಷಿಯಲ್ ಸ್ಟ್ರೀಟ್ ವ್ಯಾಪ್ತಿಯಲ್ಲಿ ನಕಲಿ ನೋಟುಗಳು ಸೌಂಡ್ ಮಾಡಿದೆ. ಆನ್ ಲೈನ್ ಮೂಲಕ ರೂಮ್ ಬುಕ್ ಮಾಡಿದ್ದ ಯುವಕ 500 ಮುಖಬೆಲೆಯ ನೋಟ್ ಗಳನ್ನ ಪ್ರಿಂಟ್ ಮಾಡಿ ಬಾಡಿಗೆ ಪಾವತಿಸಿದ್ದಾನೆ. ಸದ್ಯ ಸಿಸಿಟಿವಿಗಳ ಆಧಾರದ ಮೇಲೆ ಪೋಲಿಸರು ಅರೆಸ್ಟ್ ಮಾಡಲಾಗಿದೆ.

ಜೂನ್ ನಾಲ್ಕನೇ ತಾರೀಖು ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ವ್ಯಾಪ್ತಿಯಲ್ಲಿ ಬರುವ ಹೈ ಸ್ಟ್ರೀಟ್ ಹೊಟೇಲ್ ನಲ್ಲಿ ಕಿಷ್ ಮಾಲಿ ಅನ್ನೋ ಯುವಕ ಆನ್ ಲೈನ್ ಮೂಲಕ ರೂಮ್ ಬುಕ್ ಮಾಡಿದ್ದ .ನಾಲ್ಕನೇ ಪ್ಲೋರ್ ನ ರೂಮ್ ನಂ 301 ರಲ್ಲಿ ವಾಸ್ತವ್ಯ ಹೂಡಿದ್ದ. ಏಳನೇ ತಾರೀಖು ಚೆಕ್ ಔಟ್ ಆಗುವಾಗ 500 ಮುಖಬೆಲೆಯ ಆರು ನೋಡುಗಳನ್ನ ನೀಡಿದ್ದ, ಅದೇ ನೋಟ್ ಗಳನ್ನ ಹೊಟೇಲ್ ಮ್ಯಾನೇಜರ್ ಮೊಹ್ಮಮದ್ ಶಮೀರ್ ಎಟಿಎಂ ನಲ್ಲಿ ಡೆಪಾಟಿಸ್ ಮಾಡಲು ಹೋದಾಗ ಅದು ನಕಲಿ ನೋಟುಗಳು ಎಂದು ಗೋತ್ತಾಗಿದೆ.

ಇನ್ನೂ ನಕಲಿ ನೋಟ್‌‌‌‌ಗಳನ್ನು ಪೋಲಿಸರ ಗಮನಕ್ಕೆ ತಂದು ರೂಮ್ ಪರಿಶೀಲನೆ ಮಾಡಿದಾಗ ರೂಮ್‌‌‌ನಲ್ಲಿ ಬಂಡಲ್ ಬಂಡಲ್ ಎ4 ಸೈಜ್ ಬಿಳಿ ಹಾಳೆಗಳು, ಕಲರ್ ಪ್ರಿಂಟರ್ ಸೇರಿದಂತೆ ಸ್ಕ್ಯಾನರ್ ಪತ್ತೆಯಾಗಿದೆ. ಸಿಸಿಟಿವಿ ಪರಿಶೀಲನೆ ನಡೆದಿಸಿ, ಹಾಗೂ ಆಧಾರ್ ಕಾರ್ಡ್‌ನಲ್ಲಿದ್ದ ವಿಳಾಸದ ಆಧಾರದ ಮೇಲೆ ಪರಿಶೀಲನೆ ಮಾಡಿ ಕಿಷ್ ಮಾಲಿಯನ್ನು ಅರೆಸ್ಟ್ ಮಾಡಿದ್ದಾರೆ .ಇನ್ನೂ ಈ ಹೊಟೆಲ್ ನಾಲ್ಕು ಅಂತಸ್ತಿನದ್ದಾಗಿದ್ದು 20 ಕ್ಕೂ ಹೆಚ್ಚು ರೂಮ್ ಗಳಿವೆ. ಆಲ್ಲೈನ್ ಹಾಗೂ ನೇರವಾಗಿ ಕೂಡ ಬಂದು ಜನ ರೂಮ್ ಬುಕ್ ಮಾಡ್ತಾರಂತೆ.

ಇನ್ನೂ ಬಂಧಿತ ಆರೋಪಿ ಕ್ರಿಷ್ ಮಾಲಿ ಮನೆಯಲ್ಲಿ ಅಪ್ಪ, ಅಮ್ಮನ ಜೊತೆ ಜಗಳ ಮಾಡಿಕೊಂಡು , ಮನೆ ಬಿಟ್ಟು ಬಂದಿದ್ದನಂತೆ ಹಣದ ಅವಶ್ಯಕತೆ ಬಂದಾಗ ಈ ರೀತಿ ಮಾಡಿದ್ದಾನೆಂದು ಹೇಳಲಾಗುತ್ತಿದೆ.

Exit mobile version