ಬೆಂಗಳೂರು: ಎಂಡಿ ಸಮೀರನನ್ನು ರಕ್ಷಿಸ್ತಿರೋದೇ ಅದೊಂದು ದೂತ ಡಿಸ್ಕ್ಲೇಮರ್. ಎಸ್ಐಟಿ ಎದುರು ಎರಡು ದಿನ ವಿಚಾರಣೆಗೆ ಹಾಜರಾಗಿರುವ ಸಮೀರ್ ಎಂಡಿ, ನೂರಾರು ಪ್ರಶ್ನೆಗಳಿಗೆ ಉತ್ತರಿಸಿದ್ಧಾನೆ. ಸಾವಿರಾರು ಪುಟಗಳ ದಾಖಲೆ ಮುಂದಿಟ್ಟಿದ್ದಾನೆ. ಅರೆಸ್ಟ್ ಆಗಬಹುದು ಎನ್ನುವ ಭಯದಲ್ಲಿ ನಿರೀಕ್ಷಣಾ ಜಾಮೀನು ಕೂಡಾ ಪಡೆದುಕೊಂಡಿದ್ದಾನೆ. ಆದರೆ, ಆತನ ಅತಿ ದೊಡ್ಡ ರಕ್ಷಾಕವಚವಾಗಿರುವುದು ಏನು ಗೊತ್ತೇ..? Disclaimer..!
ನೀವು ಈಗಲೂ ಕೂಡಾ ದೂತ ಯೂಟ್ಯೂಬ್ ಚಾನೆಲ್‌ಗೆ ಹೋಗಿ ನೋಡಿದರೆ. ಒಂದು Disclaimer ಕಾಣಿಸುತ್ತದೆ. ಪ್ರಕರಣದ ಕೇಂದ್ರ ಬಿಂದು, ಕೆಲವೇ ದಿನಗಳಲ್ಲಿ ಕೋಟ್ಯಂತರ ಜನ ವೀಕ್ಷಣೆ ಮಾಡಿದರು ಎಂದು ನಂಬಿಸಲಾದ Who are serial killrs of ಧರ್ಮಸ್ಥಳ ಎಂಬ ವಿಡಿಯೋದಲ್ಲಿಯೂ ಈ Disclaimer ಇದೆ. ಅಷ್ಟೇ ಅಲ್ಲ, Who are serial killrs of ಧರ್ಮಸ್ಥಳ ಎಂಬ head lineನಲ್ಲಿ killrs ಎಂಬ ಪದದಲ್ಲಿ e ಅಕ್ಷರ ಇಲ್ಲ. ಹಾಗಾಗಿ ಅದು killrs ಉಚ್ಚಾರಣೆ ಸರಿಯಾಗುತ್ತದೆಯೇ ಹೊರತು.. killers ಆಗುವುದಿಲ್ಲ.
ಈ ಅಕ್ಷರ ಮಿಸ್ ಆಗಿದ್ದನ್ನೂ ಆತ ಗುರಾಣಿಯಾಗಿ ಬಳಸಿಕೊಂಡಿದ್ಧಾನಾ? ಗೊತ್ತಿಲ್ಲ. ಆದರೆ, ಈ ಡಿಸ್ಕ್ಲೇಮರ್ ತೋರಿಸಿ ಬಚಾವ್ ಆಗುವ ಎಲ್ಲ ತಂತ್ರವನ್ನೂ ಮಾಡಿದ್ಧಾನೆ ಎಂಬ ಮಾಹಿತಿ ಹೊರಬರುತ್ತಿದೆ. ದೂತ ಯೂಟ್ಯೂಬ್ ಚಾನೆಲ್‌ನ ಅತಿ ದೊಡ್ಡ ರಕ್ಷಾ ಕವಚನವೇ ಈ ಡಿಸ್ಕ್ಲೇಮರ್ ಎನ್ನಲಾಗ್ತಾ ಇದೆ.
Disclaimer ನಲ್ಲಿ ಏನಿದೆ..?
Disclaimer ಪ್ರಕಾರ, ಸಮೀರ್ ಯಾವುದೇ ತನಿಖೆ ಮಾಡಿಲ್ಲ. ಪ್ರತ್ಯಕ್ಷದರ್ಶಿಗಳನ್ನು ಸಂಪರ್ಕ ಮಾಡಿಲ್ಲ. ವೃತ್ತಿಪರರ ಜೊತೆ ಮಾತನಾಡಿಲ್ಲ. ಕೇಸಿಗೆ ಸಂಬಂಧಪಟ್ಟವರನ್ನೂ ಮಾತನಾಡಿಸಿಲ್ಲ. ಸ್ಥಳೀಯ ವ್ಯಕ್ತಿಗಳಿಂದ ಕೇಳಿದ, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳನ್ನಷ್ಟೇ ಇಟ್ಟುಕೊಂಡು ಡಾಕ್ಯುಮೆಂಟರಿ ಮಾಡಲಾಗಿದೆ. ಇದನ್ನು ದೂತ ಯೂಟ್ಯೂಬ್ ಎಂಡಿ ಸಮೀರ್ ಆರಂಭದಲ್ಲೇ ಈ ಡಿಸ್ಕ್ಲೇಮರ್ ತೋರಿಸಿ ಬಚಾವ್ ಆಗಬಹುದು ಎಂದುಕೊಂಡಿದ್ಧಾನೆ. ಹಾಗೆಯೇ ಪೊಲೀಸರ ಎದುರು ಉತ್ತರವನ್ನೂ ಕೊಟ್ಟಿದ್ಧಾನೆ.
ಈ ರೀತಿ Disclaimer ತೋರಿಸಿ, ಆರೋಪಗಳಿಂದ ಬಚಾವ್ ಆಗುವುದಕ್ಕೆ ಸಾಧ್ಯ ಇದೆಯೇ.. ಕಾನೂನು ತಜ್ಞರು ಈ ಬಗ್ಗೆ ಮಾಹಿತಿ ನೀಡಬೇಕಿದೆ. ಆದರೆ, ಸದ್ಯಕ್ಕೆ ಎಂಡಿ ಸಮೀರ್‌ನನ್ನು ರಕ್ಷಿಸುತ್ತಿರುವುದು Disclaimer ಎಂಬುದಂತೂ ನಿಜ.