ಧಾರವಾಡ : ಧಾರವಾಡ ಜಿಲ್ಲೆಯ ಕ್ರೀಡಾ ಪ್ರತಿಭೆಗಳ ಹಲವು ವರ್ಷಗಳ ಕನಸು ಈಗ ನನಸಾಗುವ ಕಾಲ ಬಂದಿದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ (Swimming Pool) ಸೇರಿದಂತೆ ಸುಸಜ್ಜಿತ ಕ್ರೀಡಾ ಸಂಕೀರ್ಣ ಉದ್ಘಾಟನೆಗೆ ಸಜ್ಜಾಗಿದ್ದು, ನಾಳೆ ಅಂದರೆ ಮಾರ್ಚ್ 14 ರಂದು ಮಧ್ಯಾಹ್ನ 3-30ಕ್ಕೆ ಕೇಂದ್ರ ಸಚಿವರಾದ ಮನ್ಸುಖ್ ಮಾಂಡವಿಯಾ ಹಾಗೂ ಪ್ರಲ್ಹಾದ ಜೋಶಿ ಅವರಿಂದ ಉದ್ಘಾಟನೆಗೊಳ್ಳಲಿದೆ.
ಧಾರವಾಡ ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಪ್ರತ್ಯೇಕವಾಗಿ ಕ್ರೀಡಾ ಸಂಕೀರ್ಣವಿಲ್ಲದೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳಿಗೆ ನಿರಾಸಕ್ತ ಭಾವ ಮೂಡುತಿತ್ತು. ಈ ಸಮಸ್ಯೆಯನ್ನು ಮನಗಂಡು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಅವರು ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಮತ್ತು ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾದರು ಈ ಕಾರ್ಯಕ್ಕೆ ಶಾಸಕರಾದ ಶ್ರೀ ಅರವಿಂದ ಬೆಲ್ಲದ್ ಅವರು ನಿರಂತರವಾಗಿ ಈ ಬೃಹತ್ ಯೋಜನೆ ಹಾಗೂ ವಿನ್ಯಾಸಕ್ಕೆ ನಿರಂತರ ಪರಿಶ್ರಮ ವಹಿಸಿದ ಫಲವಾಗಿದೆ ಈ ಕಾರ್ಯಕ್ಕೆ ಎಲ್ಲಾ ಸರ್ಕಾರಗಳ ಆರ್ಥಿಕ ಸಹಾಯವಿದೆ. ಕಂಪನಿಗಳನ್ನು ಸಂಪರ್ಕಿಸಿ ಅವುಗಳ CSR ಅನುದಾನ ಪಡೆದು ತನ್ಮೂಲಕ ಈ ಕಾರ್ಯವನ್ನು ಪೂರ್ಣಗೊಳಿಸಿರುವುದು ಜೋಶಿಯವರ ಕ್ರೀಡಾ ಕ್ಷೇತ್ರದ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ.
ಇನ್ನೂ NMDC ಮತ್ತು ONGC ಕಂಪನಿಗಳ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (CSR) ಮೂಲಕ ಸುಮಾರು ₹50 ಕೋಟಿ ವೆಚ್ಚದಲ್ಲಿ 1.6 ಎಕರೆ ವಿಶಾಲ ಜಾಗದಲ್ಲಿ ಸಂಕೀರ್ಣ ನಿರ್ಮಾಣವಾಗಿದೆ. ದೆಹಲಿಯ IIT ಹಾಗೂ ಪ್ರತಿಷ್ಠಿತ School of Planning And Architecture ನ ತಾಂತ್ರಿಕ ಸಲಹೆ ಈ ಯೋಜನೆಗೆ ಲಭಿಸಿರುವುದು ವಿಶೇಷವಾಗಿದೆ. ಸಂಕೀರ್ಣದಲ್ಲಿ ಅಂತರಾಷ್ಟ್ರೀಯ ಮಟ್ಟದ ಈಜುಕೊಳ, ಒಳಾಂಗಣ ಕ್ರೀಡೆಗಳಿಗೆ ವಿಶಾಲ ಜಾಗ ಸೇರಿದಂತೆ ಸಕಲ ಸೌಲಭ್ಯ ಕಲ್ಪಿಸಲಾಗಿದೆ. ಬಹುತೇಕ ಕಟ್ಟಡವನ್ನು ಹೊಸ ತಂತ್ರಜ್ಞಾನ ಬಳಸಿ ಸ್ಟೀಲ್ ರಚನೆಯೊಂದಿಗೆ ನಿರ್ಮಿಸಲಾಗಿದೆ. ಕ್ರೀಡೆಗಳಿಗೆ ಮೀಸಲಾಗಿ ಸುಸಜ್ಜಿತ ಗ್ಯಾಲರಿ, ಕ್ರೀಡಾಪಟುಗಳಿಗೆ ಪ್ರತ್ಯೇಕ ಕೊಠಡಿ ಸೇರಿ ಅನೇಕ ಸೌಲಭ್ಯ ಕಲ್ಪಿಸಲಾಗಿದೆ.
ಪ್ರಮುಖವಾಗಿ ಜಿ+3 ಮಹಡಿಗಳ ಸಂಕೀರ್ಣ ಇದಾಗಿದ್ದು, ಕಾರು ಮತ್ತು ಬೈಕ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕ್ಯಾಂಟೀನ್, ಕ್ರೀಡಾ ಸಾಮಗ್ರಿಗಳ ಮಳಿಗೆ, ವೀಕ್ಷಕರ ಗ್ಯಾಲರಿ, ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಕಬಡ್ಡಿ ಅಂಕಣ, ಬ್ಯಾಡ್ಮಿಂಟನ್, ಜುಡೋ, ಜಿಮ್, ತರಬೇತುದಾರರ ಮತ್ತು ವೈದ್ಯರ ಕೊಠಡಿ ಸೇರಿ ಇನ್ನೂ ಅನೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ನಗರದ ಕ್ರೀಡಾಪಟುಗಳು ಈ ಸಂಕೀರ್ಣ ಉದ್ಘಾಟನೆಗೆ ಕಾತರದಿಂದ ಕಾಯುತ್ತಿದ್ದಾರೆ. ಅವರ ಬಹುದಿನಗಳ ಕನಸು ನನಸಾಗಿ ಸಂತಸ ಮೂಡಿಸಿದೆ.
ಈ ಹಿಂದೆ ದಿನಾಂಕ 2018 ರಲ್ಲಿ ಧಾರವಾಡದ ಕೋರ್ಟ್ ಸರ್ಕಲ್ ಬಳಿಯಿರುವ ಈಜುಕೊಳದ ಶಿಲಾನ್ಯಾಸ ಕಾರ್ಯಕ್ರಮವನ್ನು ಅಂದು ಸಂಸದರೂ ಹಾಗೂ ಲೋಕಸಭೆಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿದ್ದ ಶ್ರೀ ಪ್ರಲ್ಹಾದ ಜೋಶಿ ಹಾಗೂ ಶಾಸಕರಾದ ಶ್ರೀ ಅರವಿಂದ ಬೆಲ್ಲದ ಇವರುಗಳು ನೆರವೇರಿಸಿದ್ದರು.
ಮೊದಲಿದ್ದ ಕ್ರೀಡಾ ಸಂಕೀರ್ಣ ಬಹುತೇಕ ಹಾಳಾಗಿದ್ದು, ಜಿಲ್ಲೆಯ ಎಲ್ಲ ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸುತ್ತಿದ್ದರು. ಶಾಸಕ ಅರವಿಂದ ಬೆಲ್ಲದ ಅವರು ನೂತನ ಈಜುಕೊಳಕ್ಕಾಗಿ ಸತತವಾಗಿ ಸಂಸದ ಜೋಶಿಯವರಲ್ಲಿ ಒತ್ತಾಯಿಸಿದ್ದರ ಫಲವಾಗಿ ಜೋಶಿಯವರು ತಮ್ಮ ಪ್ರಸ್ತಾವನೆ ಮೇರೆಗೆ ಧಾರವಾಡದ ಈ ಕ್ರೀಡಾ ಸಂಕೀರ್ಣಕ್ಕೆ ಅನುದಾನವನ್ನು ಓಎನ್‌ಜಿಸಿ, ಎನ್.ಎಂ.ಡಿ.ಸಿ. ಕಂಪನಿಗಳು ತಮ್ಮ ಸಿಎಸ್‌ಆರ್ ಕಾರ್ಯಚಟುವಟಿಕೆ ಅಡಿ ೧೭ ಕೋಟಿ ರೂಗಳನ್ನು ಒದಗಿಸಲು ಮುಂದೆ ಬಂದು ತಕ್ಷಣಕ್ಕೆ 4 ಕೋಟಿ ರೂಗಳನ್ನು ಬಿಡುಗಡೆ ಮಾಡಿ, ಕ್ರೀಡಾ ಕ್ಷೇತ್ರಕ್ಕೂ ಹಣ ವ್ಯಯಿಸಲು ಮುಂದಾಗಿದೆ ಎಂಬುದು ಸಂತಸಕರ.
ಆದರೆ ಈ ಈಜುಕೊಳವನ್ನು ಅಂತರಾಷ್ಟ್ರೀಯ ಗುಣಮಟ್ಟದ ಒಲಂಪಿಕ್ಸ್ ಮಾದರಿಯ ಈಜುಕೊಳವನ್ನಾಗಿ ನಿರ್ಮಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿದ್ದ ಶ್ರೀ ಪ್ರಲ್ಹಾದ ಜೋಶಿ ಅವರ ಒತ್ತಾಯಕ್ಕೆ ಮಣಿದು ಇದೀಗ 52 ಕೋಟಿ ವೆಚ್ಚದ ಸ್ವಿಮ್ಮಿಂಗ್ ಪೂಲ್ ನಿರ್ಮಾಣಗೊಂಡಿದೆ.
ದೆಹಲಿಯ ಐಐಟಿ ಹಾಗೂ ಪ್ರತಿಷ್ಠಿತ ಸ್ಕೂಲ್‌ಆಫ್ ಪ್ಲಾನಿಂಗ್ ಆಂಡ್ ಆರ್ಕಿಟೆಕ್ಟ್ನ ತಾಂತ್ರಿಕ ಸಲಹೆ ಈ ಯೋಜನೆಗಿದೆ. ಅದನ್ನು ಒಪ್ಪಿರುವ ಓಎನ್‌ಜಿಸಿ ಕಂಪನಿ 50 ಕೋಟಿ ರೂ ವೆಚ್ಚದ ಯೋಜನೆಗೆ ಒಪ್ಪಿಗೆ ನೀಡಿ, ಪ್ರತಿಷ್ಠಿತ ಐಐಆರ್‌ಡಿ ಕಂಪನಿಗೆ ನಿರ್ವಹಣಾ ಜವಾಬ್ದಾರಿ ನೀಡಿತ್ತು.
ಈಜುಕೋಲದ ಕೆಳ ಮಹಡಿಯಲ್ಲಿ ಈಜುಕೊಳದ ನೀರು ಸಂಸ್ಕರಣಾ ಘಟಕ, ಸ್ನಾನಗೃಹ, ಕಾರ್ಯಾಲಯ, ಕೇರಂ, ಚೆಸ್, ಈತರಹದ ಕ್ರೀಡೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.ಮೊದಲ ಮಹಡಿಯಲ್ಲಿ ಕಬ್ಬಡ್ಡಿ, ಕುಸ್ತಿ, ಟಾಯ್ಕೊಂಡ, ಟೇಬಲ್ ಟೆನ್ನಿಸ್, ಜಿಮ್ನಾಸ್ಟಿಕ್, ವೀಕ್ಷಕರಿಗೆ ಗ್ಯಾಲರಿ ಸೇರಿದಂತೆ ಇನ್ನಿತರೆ ಸೌಲಭ್ಯಗಳಾದ ಶೌಚಾಲಯ ವ್ಯವಸ್ಥೆ, ಕ್ರೀಡಾಪಟುಗಳಿಗೆ ಡಾರ್ಮಿಟೆರಿ ಹೀಗೆ ವಿವಿಧ ಕ್ರೀಡೆಗಳಿಗೆ ವ್ಯವಸ್ಥೆ ಇರಲಿದೆ.
ನೆಲಮಹಡಿಯಲ್ಲಿ ಕಾರ್ಯಾಲಯ, ಶೂಟಿಂಗ್ ಆರ್ಚರಿ, ಇದ್ದು ಇದರೊಂದಿಗೆ ಕಾರ್, ಬೈಕ್ ಗಳಿಗೆ ಪ್ರತ್ಯೇಕ ಪಾರ್ಕಿಂಗ್, ಕ್ಯಾಂಟಿನ್ ವ್ಯವಸ್ಥೆ ಇರಲಿದೆ. ಕ್ರೀಡಾಂಗಣದ ಮುಂಭಾಗದ ರಸ್ತೆಗೆ ಹೊಂದಿಕೊAಡು 8 ಮಳಿಗೆಗಳು, ಕ್ರೀಡಾಂಗಣದ ಒಳಗಡೆ ವೀಕ್ಷಕರ ಗ್ಯಾಲರಿ, ದೆÆಡ್ಡವರಿಗಾಗಿ 50×30 ಅಳತೆಯ ಅಂತರ ರಾಷ್ಟಿçÃಯ ಸ್ಪರ್ಧೆಗಳಿಗೂ ಬಳಕೆಯಾಗಬಹುದಾದ ಸ್ವಿಮಿಂಗ್ ಪೂಲ್, ಕಬ್ಬಡ್ಡಿ ಅಂಕಣ ಇರಲಿವೆ ಎಂದು ತಿಳಿಸಿರುವ ಜೋಶಿ ಮೊದಲ ಹಾಗೂ 2ನೇ ಮಹಡಿಯಲ್ಲಿ ಬ್ಯಾಡ್ಮಿಟನ್, ಇತರ ಒಳಾಂಗಣ ಅಂಕಣಗಳು ಜಿಮ್‌ರೂಂ ಇರಲಿವೆ. ಇದಲ್ಲದೇ ಸಿಬ್ಬಂದಿ ವಸತಿ ಗೃಹಗಳು, ಸೆಕ್ಯುರಿಟಿ ಕ್ಯಾಬಿನ್, ಟಿಕೆಟ್ ಕೌಂಟರ್ ಒಳಗೊಂಡಿದೆ. ಒಟ್ಟಾರೆ ಹೆಸರಿಗೆ ತಂಕ್ಕAತೆ ಬಹು ಉಪಯೋಗಿ ಕ್ರೀಡಾ ಕಾಂಪ್ಲೆಕ್ಸ್ ಇದಾಗಲಿದೆ.
ಒಲಂಪಿಕ್ ಮಾನದಂಡದ ಅಳತೆಯ ಅಂತರರಾಷ್ಟ್ರೀಯ ದರ್ಜೆಯ ಈಜುಕೊಳದ (Olympic – Size Swimming Pool) ಪ್ರಮುಖ ಗುಣಲಕ್ಷಣಗಳು ಮತ್ತು ಮಾನದಂಡಗಳು ಈ ಕೆಳಗಿನಂತಿವೆ:
ಉದ್ದ ಮತ್ತು ಅಗಲ :
ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ, ಈಜುಕೊಳವು 51.5 ಮೀಟರ್ ಉದ್ದ ಮತ್ತು 25 ಮೀಟರ್ ಅಗಲವನ್ನು ಹೊಂದಿದ್ದು, 10 ಲೇನ್‌ಗಳನ್ನು ಹೊಂದಿದೆ. ಸ್ಪರ್ಧೆಯ ಸಮಯದಲ್ಲಿ ಮಧ್ಯದ 8 ಲೇನ್‌ಗಳನ್ನು ಬಳಸಲಾಗುತ್ತದೆ ಮತ್ತು ಬದಿಯ ಎರಡು ಲೇನ್‌ಗಳನ್ನು ಅಲೆಗಳ ತಡೆಗಾಗಿ ಬಿಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಲೇನ್ 2.5 ಮೀಟರ್ ಅಗಲವಿದ್ದು, ಅಂತರಾಷ್ಟ್ರೀಯ ಗುಣಮಟ್ಟದ ಪ್ರಕಾರ 2 ಮೀಟರ್ ಆಳ ಹೊಂದಿದ್ದು, ನೀರಿನ ತಾಪಮಾನ 25 ಡಿಗ್ರಿ ಸೆಂಟಿಗ್ರೇಡ್ ನಿಂದ 28 ಡಿಗ್ರಿ ಸೆಂಟಿಗ್ರೇಡ್ ನಡುವೆ ಇರುವ ವ್ಯವಸ್ಥೆ ಹೊಂದಿದೆ. ಕನಿಷ್ಠ 1500 ಲಕ್ಸ್ ತೀವ್ರತೆಯ ಬೆಳಕಿನ ವ್ಯವಸ್ಥೆಯನ್ನೂ ಹೊಂದಿದರುವದು ಈ ಈಜುಕೊಳದ ವಿಶೇಷ.
ಇದೊಂದು ಅತ್ಯಂತ ಸುಸಜ್ಜಿತ ಮತ್ತು ಆಧುನಿಕ ತಂತ್ರಜ್ಞಾನದೊAದಿಗೆ ನಿರ್ಮಿಸಲಾದ ಕ್ರೀಡಾ ಸಂಕಿರ್ಣವಾಗಿದೆ.
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಭಾರತೀಯ ರೈಲ್ವೆಯ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸುವ ಒಂದು ಸಾರ್ವಜನಿಕ ವಲಯದ ಉದ್ದಿಮೆಯಾಗಿದ್ದು ಈ ಸಂಸ್ಥೆಯು ನಿರ್ಮಾಣದ ಜವಾಬ್ದಾರಿ ನೀಡಲಾಗಿತ್ತು. ಆರ್.ವಿ.ಎನ್.ಎಲ್. ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ಮೂಲಕ ಈ ಈಜುಕೊಳವನ್ನು ನಿರ್ಮಿಸಿದೆ. ಇಡೀ ಉತ್ತರ ಕರ್ನಾಟಕದಲ್ಲೆ ಇಂತಹ ಕ್ರೀಡಾ ಸಂಕಿರ್ಣ ತಲೆ ಎತ್ತಲು ಸಹಕರಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ ಅವರುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
