ಮಂಗಳೂರು: ಧರ್ಮಸ್ಥಳ ಶವ ಸಮಾಧಿ ಆರೋಪ ಪ್ರಕರಣದಲ್ಲಿ ಬಂಧಿತನಾದ ‘ಮಾಸ್ಕ್ ಮ್ಯಾನ್’ ಚಿನ್ನಯ್ಯ, ಎಸ್‌ಐಟಿ ವಿಚಾರಣೆಯಲ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾನೆ.
ತಮಿಳುನಾಡಿನಿಂದ ಧರ್ಮಸ್ಥಳಕ್ಕೆ ತನ್ನನ್ನು ಹಣದ ಆಮಿಷಕ್ಕೆ ಕರೆತಂದ ಗುಂಪು ಈ ಕಥೆಯನ್ನು ರಚಿಸಿತು ಎಂದು ಒಪ್ಪಿಕೊಂಡಿದ್ದಾನೆ.
ಡಿಸೆಂಬರ್ 2024ರ ಕೊನೆಯ ವಾರದಲ್ಲಿ ಧರ್ಮಸ್ಥಳ ವಿರೋಧಿ ಗುಂಪು ತನ್ನನ್ನು ಭೇಟಿಯಾಗಿ, “ನೀನೇ ಈ ಪ್ರಕರಣದ ಮುಖ್ಯ ವ್ಯಕ್ತಿ,” ಎಂದು ಹೇಳಿ 2 ಲಕ್ಷ ರೂಪಾಯಿ ನೀಡಿತ್ತು. ಬೆಂಗಳೂರಿನಲ್ಲಿ ತರಬೇತಿ ನೀಡಿ, ಆರೋಪಗಳಿಗೆ ಉತ್ತರಿಸುವ ರೀತಿಯನ್ನು ಕಲಿಸಲಾಗಿತ್ತು. “ಸುಜಾತಾ ಭಟ್ ದೂರು ನೀಡಿದ ಬಳಿಕ ಧೈರ್ಯ ಬಂತು,” ಎಂದು ಚಿನ್ನಯ್ಯ ತಿಳಿಸಿದ್ದಾನೆ.