ತುಮಕೂರು: ಧರ್ಮಸ್ಥಳ ಶವ ಸಮಾಧಿ ಆರೋಪ ಪ್ರಕರಣದಲ್ಲಿ ‘ಮಾಸ್ಕ್ ಮ್ಯಾನ್’ ಬಂಧನಕ್ಕೆ ಸಂಬಂಧಿಸಿ ಕೇಂದ್ರ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
“ಧರ್ಮಸ್ಥಳವು ಸಾವಿರಾರು ವರ್ಷಗಳ ಇತಿಹಾಸವಿರುವ ಪವಿತ್ರ ಕ್ಷೇತ್ರ. ಮಾಸ್ಕ್ ಮ್ಯಾನ್‌ನ ಆರೋಪಗಳು ಸುಳ್ಳು ಎಂದು ನಾನು ಮೊದಲೇ ಹೇಳಿದ್ದೆ. ಎಸ್‌ಐಟಿಯ ತನಿಖೆಯಿಂದ ಸತ್ಯ ಬಯಲಾಗಿದೆ,” ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸಚಿವ ಸೋಮಣ್ಣ ಅವರು, “ಸತ್ಯ ಎಷ್ಟೇ ಕಹಿಯಾದರೂ ಗೆಲ್ಲುತ್ತದೆ. ಈ ಸುಳ್ಳಿನ ಕಂತೆಯನ್ನು ವಿಶ್ವವೇ ನೋಡಿತು. ಆದರೆ, ಈ ಷಡ್ಯಂತ್ರಕ್ಕೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಣೆ.
ಇದು ಕರ್ನಾಟಕದ 6 ಕೋಟಿ ಜನರ ಭಾವನೆಗೆ ಧಕ್ಕೆ ತಂದಿದೆ. ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ದರ್ಶನ ಪಡೆದು ಕ್ಷಮೆ ಕೇಳಬೇಕು,” ಎಂದು ಒತ್ತಾಯಿಸಿದ್ದಾರೆ. ಎಸ್‌ಐಟಿಯ ತನಿಖೆಯನ್ನು ಮೆಚ್ಚಿಕೊಂಡ ಅವರು, ಈ ಆರೋಪಗಳು ವ್ಯವಸ್ಥಿತ ಷಡ್ಯಂತ್ರ ಎಂದು ಬಹಿರಂಗಗೊಂಡಿದೆ ಎಂದಿದ್ದಾರೆ.