ಬೆಂಗಳೂರು: ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂಧನದ ಬಗ್ಗೆ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಎಸ್ಐಟಿಯ ಉತ್ತಮ ಹೆಜ್ಜೆಯನ್ನಿಟ್ಟಿದೆ. ತನಿಖೆಯು ನರ‍್ಣಾಯಕ ಹಂತದಲ್ಲಿದ್ದು ಈಗ ಅನಾಮಿಕ ಎಂದು ಕರೆಸಿಕೊಂಡಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಕೂಡಾ ಈಗ ಅರೆಸ್ಟ್ ಆಗಿದ್ದಾನೆ. ಇದರ ಬಗ್ಗೆ ಮುಂಚೆ ಸದನದಲ್ಲಿ ಮಾತನಾಡಿದ್ದ ಡಿಕೆಶಿ, ಇದು ರ‍್ಮಸ್ಥಳದ ಬಗ್ಗೆ ನಡೆದ ಷಡ್ಯಂತ್ರ ಎಂದಿದ್ದರು. ಈಗ ಚಿನ್ನಯ್ಯನ ಬಂಧನದ ಕುರಿತೂ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, “ಎಸ್‌ಐಟಿ ರಚನೆಯಾದಾಗ ಬಿಜೆಪಿಯವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ನಾವು ಪ್ರಸ್ತಾವನೆ ಮುಂದಿಟ್ಟ ಮೇಲೆ ಈಗ ಮಾತನಾಡುತ್ತಿದ್ದಾರೆ,” ಎಂದು ಕಿಡಿಕಾರಿದ್ದಾರೆ.
“ನನಗೆ ಮೊದಲಿನಿಂದಲೂ ರ‍್ಮಸ್ಥಳದ ಮೇಲೆ ವಿಶ್ವಾಸವಿತ್ತು. ರ‍್ಮಸ್ಥಳದವರು ತನಿಖೆಯನ್ನು ಸ್ವಾಗತಿಸಿದ್ದಾರೆ. ಅವರ ಕುಟುಂಬದವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದಿದ್ದಾರೆ,” ಎಂದು ಶಿವಕುಮಾರ್ ಹೇಳಿದ್ದಾರೆ.
“ಯಾರೇ ತಪ್ಪು ಮಾಡಿದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಕೂಡ ಇದನ್ನೇ ಹೇಳಿದ್ದಾರೆ. ರ‍್ಮದಲ್ಲಿ ರಾಜಕಾರಣ ಮಾಡಬಾರದು. ನಾನು ಯಾವ ರ‍್ಮದ ಪರವೂ ಇಲ್ಲ, ನಾನು ನ್ಯಾಯದ ಪರ,” ಎಂದು ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ರ‍್ಮಸ್ಥಳದಲ್ಲಿ ವಿಶೇಷ ತನಿಖಾ ದಳ (SIಖಿ) ದೂರುದಾರನನ್ನು ಸುಳ್ಳು ಮಾಹಿತಿ ನೀಡಿ ತನಿಖೆಗೆ ಅಡ್ಡಿಪಡಿಸಿದ ಆರೋಪದಡಿ ಬಂಧಿಸಿದೆ. ಈತನ ವಿರುದ್ಧ ಹೊಸ ಎಫ್‌ಐಆರ್ ದಾಖಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕರ‍್ಟ್‌ಗೆ ಎಸ್‌ಐಟಿ ಅಧಿಕಾರಿಗಳು ಆತನನ್ನು ಹಾಜರುಪಡಿಸಿದ್ದಾರೆ.