ದಕ್ಷಿಣಕನ್ನಡ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ತನಿಖೆಯ ಭಾಗವಾಗಿ, ಇಂದು 6ನೇ ಗುಂಡಿಯನ್ನು ಅಗೆಯುವ ಸಂದರ್ಭದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಮೂಳೆಗಳನ್ನು ಪತ್ತೆ ಮಾಡಿದೆ. ಈ ಮೂಳೆಗಳು ಮನುಷ್ಯರಿಗೆ ಸಂಬಂಧಿಸಿದ್ದೋ ಅಥವಾ ಪ್ರಾಣಿಗಳಿಗೆ ಸಂಬಂಧಿಸಿದ್ದೋ ಎಂಬುದರ ಬಗ್ಗೆ ಎಸ್ಐಟಿ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ.
ಕಳೆದ ಎರಡು ದಿನಗಳಿಂದ ನಡೆದ ತನಿಖೆಯಲ್ಲಿ 5 ಗುಂಡಿಗಳನ್ನು ಅಗೆದರೂ ಯಾವುದೇ ಮೂಳೆಗಳು ಪತ್ತೆಯಾಗಿರಲಿಲ್ಲ. ಆದರೆ, ಇಂದು ಮೂರನೇ ದಿನದಂದು 6ನೇ ಗುಂಡಿಯಲ್ಲಿ ಮೂಳೆಗಳು ಕಂಡುಬಂದಿವೆ, ಇದು ತನಿಖೆಯ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಈಗ ಉಳಿದ 7 ಗುಂಡಿಗಳ ಅಗೆತವು ಮತ್ತಷ್ಟು ಕುತೂಹಲಕಾರಿಯಾಗಿದ್ದು, ತನಿಖಾ ತಂಡವು ಈ ಪ್ರಕರಣದ ರಹಸ್ಯವನ್ನು ಭೇದಿಸಲು ತೀವ್ರ ಪ್ರಯತ್ನ ನಡೆಸುತ್ತಿದೆ.
ADVERTISEMENT
ADVERTISEMENT