ದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಕ್ರಿಮಿನಲ್ ಹಿನ್ನೆಲೆಯ ಮತೀಯ ಗೂಂಡಾಗಳು ಹಿಂದೂ ಕುಟುಂಬಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಪುರುಷರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹಿಂದೂ ಸುರಕ್ಷಾ ಸಮಿತಿ ಆರೋಪಿಸಿದೆ. ಈ ಘಟನೆಯು ಕಾಶ್ಮೀರದ ಸಾಮುದಾಯಿಕ ಘರ್ಷಣೆಗಳನ್ನು ನೆನಪಿಸುವಂತಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹಿಂದೂ ಸುರಕ್ಷಾ ಸಮಿತಿ ಮುಖಂಡ ಸಿದ್ದಲಿಂಗ ಸ್ವಾಮಿ ಅವರು ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಮತ್ತು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯನ್ನು ತೀವ್ರವಾಗಿ ಟೀಕಿಸಿದರು.
ಕಾರ್ಲ್ ಮಾರ್ಕ್ಸ್ ನಗರದಲ್ಲಿ ಮತಾಂಧ ಗೂಂಡಾಗಳು ಹಿಂದೂ ಕುಟುಂಬಗಳ ಮನೆಗಳಿಗೆ ನುಗ್ಗಿ, ಕಲ್ಲು ತೂರಿ, ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಒಂದು ಯುವತಿಯನ್ನು ಪೊಲೀಸ್‌ಗಳಿಂದ ಹೊಡೆದು, ಕಾಲುಗಳಿಂದ ತುಳಿದಿದ್ದಾರೆ ಎಂದು ಆರೋಪಿಸಲಾಗಿದೆ. ಕುಟುಂಬಕ್ಕೆ ರಕ್ಷಣೆ ನೀಡಬೇಕಾದ ಪೊಲೀಸರು, ಸಂತ್ರಸ್ಥರ ಸಹೋದರನನ್ನೇ ಬಂಧಿಸಿದ್ದಾರೆ. ಸಿದ್ದಲಿಂಗ ಸ್ವಾಮಿ ಅವರು, “ಹಿಂದೂಗಳ ಮೇಲೆ ಪೊಲೀಸರ ದರ್ಪ, ಕಲ್ಲು ತೂರಿದವರ ಮೇಲೆ ಏಕಿಲ್ಲ?” ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದಲಿಂಗ ಸ್ವಾಮಿ, “ಮುಸ್ಲಿಮರ ತುಷ್ಟೀಕರಣಕ್ಕಾಗಿ ಹಿಂದೂಗಳು ಕಡಿಮೆ ಜನಸಂಖ್ಯೆ ಇರುವ ಕಡೆಗಳಲ್ಲಿ ಬದುಕುವುದೇ ಕಷ್ಟವಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳು ವೋಟು ಹಾಕಿಲ್ಲವೇ?” ಎಂದು ಕಿಡಿಕಾರಿದರು. ಸಿದ್ದರಾಮಯ್ಯ ಸರ್ಕಾರ ಕೇಸ್ ಹಿಂಪಡೆದಿದ್ದು, ನಗರ, ಜಿಲ್ಲೆ ಮತ್ತು ರಾಜ್ಯದಲ್ಲಿ ಮುಸ್ಲಿಂ ಗೂಂಡಾಗಳ ಅತಿರೇಕವಾಗಿ ವರ್ತಿಸಲು ಕಾರಣವಾಗಿದೆ ಎಂದು ಟೀಕಿಸಿದರು. “ಐ ಲವ್ ಮಹಮ್ಮದ್” ಬ್ಯಾನರ್‌ಗಳಿಂದ ಉಂಟಾದ ಅಹಿತಕರ ಘಟನೆಗಳು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ತಿಳಿದಿರುವುದು ಸ್ಪಷ್ಟ ಎಂದು ಹೇಳಿದರು.
ಹಿಂದೂ ಕಾರ್ಯಕರ್ತರು ಸಂತ್ರಸ್ಥರಿಗೆ ಸಾಂತ್ವನ ಹೇಳಲು ಸ್ಥಳಕ್ಕೆ ತೆರಳಿದ್ದಾಗ, ಪೊಲೀಸರು ಅವರನ್ನೇ ಬೆದರಿಸಿ ಕಳುಹಿಸಿದ್ದಾರೆ. ಕಲ್ಲು ತೂರಾಟ ಮಾಡಿದವರ ಮುಂದೆ ಧೈರ್ಯ ತೋರದೆ, ಹಿಂದೂಗಳ ಮನೆಗಳ ಮೇಲೆ ಕಲ್ಲುಗಳು ಬಿದ್ದಿದ್ದರೂ “ನೀವೇ ಸುಮ್ಮನೇ ಇದನ್ನೆಲ್ಲಾ ಸೃಷ್ಟಿ ಮಾಡುತ್ತಿದ್ದೀರಿ” ಎಂದು ಹಿಂದೂ ಕಾರ್ಯಕರ್ತರನ್ನು ದಬಾಯಿಸಿದ್ದಾರೆ ಎಂದು ಆರೋಪಿಸಿದರು. “ಘಟನೆಯ ಬಗ್ಗೆ ಮುಸ್ಲಿಂ ಸಮಾಜದ ಜವಾಬ್ದಾರಿ ಏನು? ಕೆಲವೇ ಹಿಂದೂಗಳನ್ನು ಒಕ್ಕಲೆಬ್ಬಿಸಿ ಲ್ಯಾಂಡ್ ಜಿಹಾದ್ ಮಾಡಲು ಹೊರಟಿರುವುದು ಸ್ಪಷ್ಟ” ಎಂದು ಸಿದ್ದಲಿಂಗ ಸ್ವಾಮಿ ಕಿಡಿಕಾರಿದರು.
ಛತ್ರಪತಿ ಶಿವಾಜಿ ಮಹಾರಾಜರ ಫ್ಲೆಕ್ಸ್ ವಿಚಾರಕ್ಕೆ ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಿಂದೂ ಕಾರ್ಯಕರ್ತರಿಗೆ ಹೀಯಾಳಿಸಿದ್ದರು. ಈಗ ಕಾರ್ಲ್ ಮಾರ್ಕ್ಸ್ ನಗರದ ಬಗ್ಗೆ ಏನು ಹೇಳುತ್ತಾರೆ ಎಂದು ಹಿಂದೂ ಸಮಾಜ ಕಾಯುತ್ತಿದೆ. ಹಿಂದೂ ಕಾರ್ಯಕರ್ತ ಸತೀಶ ಪೂಜಾರಿ ವಿರುದ್ಧ ಕ್ರಮಕ್ಕೆ ತೋರಿಸುವ ಜಾಣ್ಮೆ ಮುಸ್ಲಿಂ ಗೂಂಡಾ ಬಗ್ಗೆ ಯಾಕೆ ತೋರಲಿಲ್ಲ? ಎಂದು ಪ್ರಶ್ನಿಸಿದರು.





