ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳಿಗೆ ಇಂದು ಮಹತ್ವದ ದಿನ. ಸಿಸಿಹೆಚ್ 57ನೇ ಕೋರ್ಟ್ ನಲ್ಲಿ ಚಾರ್ಜ್ ಫ್ರೇಮ್ ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ ಆರೋಪಿಗಳು ಹಾಜರಾಗುವ ನಿರೀಕ್ಷೆಯಿದೆ.
ಕಳೆದ ವಿಚಾರಣೆಯಲ್ಲಿ ಗೈರಾಗಿದ್ದ ಕೆಲವು ಆರೋಪಿಗಳು ಈ ಬಾರಿ ಹಾಜರಾಗುವ ಸಾಧ್ಯತೆ ಹೆಚ್ಚಾಗಿದೆ. ಚಾರ್ಜ್ ಫ್ರೇಮ್ ನಂತರ, ನ್ಯಾಯಾಲಯ ಟ್ರಯಲ್ ಆರಂಭದ ದಿನಾಂಕವನ್ನು ನಿಗದಿ ಮಾಡುವ ಸಾಧ್ಯತೆ ಇದೆ.
ಇನ್ನೊಂದೆಡೆ, ಸುಪ್ರೀಂ ಕೋರ್ಟ್ ನಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಏಳು ಆರೋಪಿಗಳ ಜಾಮೀನು ಮೇಲ್ಮನವಿಗೆ ಸಂಬಂಧಿಸಿದ ಆದೇಶ ಕಾಯ್ದಿರಿಸಲಾಗಿದೆ. ಕಳೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, “ಟ್ರಯಲ್ ಎಷ್ಟು ಬೇಗ ಆರಂಭವಾಗುತ್ತದೆ?” ಎಂದು ಪ್ರಶ್ನಿಸಿತ್ತು. ಸರ್ಕಾರದ ಪರ ವಕೀಲರು “ಆರು ತಿಂಗಳಲ್ಲಿ ವಿಚಾರಣೆ ಮುಗಿಸುತ್ತೇವೆ” ಎಂದು ಭರವಸೆ ನೀಡಿದ್ದರು.
ಹೀಗಾಗಿ, ಒಂದು ಕಡೆ ಸೆಷನ್ಸ್ ಕೋರ್ಟ್‌ನಲ್ಲಿ ಟ್ರಯಲ್ ದಿನಾಂಕ ನಿಗದಿ, ಇನ್ನೊಂದು ಕಡೆ ಸುಪ್ರೀಂ ಕೋರ್ಟ್‌ನಲ್ಲಿ ಬೇಲ್ ಭವಿಷ್ಯದ ತೀರ್ಪು ಎರಡೂ ಒಟ್ಟಿಗೆ ಎದುರಾಗಿರುವುದರಿಂದ, ದರ್ಶನ್ ಮತ್ತು ತಂಡ ಈ ವಾರ ಡಬಲ್ ಟೆನ್ಷನ್ ಎದುರಿಸುತ್ತಿದ್ದಾರೆ.