ರೇಣುಕಾಸ್ವಾಮಿ ಮಗುವಿನ ನಾಮಕರಣ: 8 ತಿಂಗಳ ಬಳಿಕ ಇಂದು ಮೊದಲ ಶುಭಕಾರ್ಯ!

Befunky collage (30)

ರೇಣುಕಾಸ್ವಾಮಿ ಹತ್ಯೆ ಕೇಸಿನ ನೆನಪುಗಳೊಂದಿಗೆ, ಅವರ ಮನೆಯಲ್ಲಿ ಇಂದು ಸಂಭ್ರಮದ ಶುಭಕಾರ್ಯ ನಡೆಯುತ್ತಿದೆ. ನಗರದ ವಿಆರ್ಎಸ್  ಬಡಾವಣೆಯಲ್ಲಿರುವ ರೇಣುಕಾಸ್ವಾಮಿಯ ನಿವಾಸದಲ್ಲಿ ಅವರ 5 ತಿಂಗಳ ಮಗುವಿನ ನಾಮಕರಣ ಶಾಸ್ತ್ರವನ್ನು ಕುಟುಂಬಸ್ಥರು ಕಣ್ಣೀರಿನ ನಡುವೆ ಆಚರಿಸಿದ್ದಾರೆ. ಮಗುವಿಗೆ “ಶಶಿಧರ ಸ್ವಾಮಿ” ಎಂದು ನಾಮಕರಣ ಮಾಡಲಾಗಿದೆ.

ರೇಣುಕಾಸ್ವಾಮಿಯನ್ನು 8 ತಿಂಗಳ ಹಿಂದೆ ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್‌ನ ಸಹವರ್ತಿಗಳು ಕೊಲೆ ಮಾಡಿದ್ದಾರೆ ಎಂಬ ಆರೋಪದಿಂದ ಚಿತ್ರದುರ್ಗ ಪೊಲೀಸರು 17 ಮಂದಿಯನ್ನು ಬಂಧಿಸಿದ್ದರು. ಈ ದುಃಖದ ನೆನಪುಗಳು ಇನ್ನೂ ಹಸಿಯಾಗಿದ್ದಾಗ, ರೇಣುಕಾಸ್ವಾಮಿಯ ಪೋಷಕರು ಮತ್ತು ಸಂಬಂಧಿಗಳು ಮಗುವಿನ ಜೊತೆ ಮೊದಲ ಬಾರಿಗೆ ಶುಭಕಾರ್ಯದಲ್ಲಿ ಭಾಗಿಯಾಗಿದ್ದಾರೆ. ರೇಣುಕಾಸ್ವಾಮಿಯ ತಂಗಿ ಸುಚೇತಾ ಅವರು ಮಗುವಿನ ಕಿವಿಯಲ್ಲಿ “ಶಶಿಧರ ಸ್ವಾಮಿ” ಎಂದು ಮೂರು ಸಾರಿ ಹೇಳಿ ಹೆಸರಿಟ್ಟರು.

ADVERTISEMENT
ADVERTISEMENT

ಸಾಂಪ್ರದಾಯಿಕವಾಗಿ ನಡೆದ ಈ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಮತ್ತು ನಿಕಟ ಸಂಬಂಧಿಗಳು ಮಾತ್ರ ಪಾಲ್ಗೊಂಡಿದ್ದರೂ, ಸಂಭ್ರಮಕ್ಕೆ ದುಃಖದ ಛಾಯೆ ಹರಡಿತ್ತು. ರೇಣುಕಾಸ್ವಾಮಿಯ ತಾಯಿ ರತ್ನಪ್ರಭಾ ಅವರು ಮಗನ ಮುಖ ನೋಡಿ ಕಣ್ಣೀರು ಸುರಿಸಿದರೆ, ತಂದೆ ಶಿವಗೌಡ್ರು “ನಮ್ಮ ಮಗನ ನೆನಪುಗಳು ಈ ಮಗುವಿನಲ್ಲಿ ಮುಖದಲ್ಲಿ ನೋಡುತ್ತೇವೆ ” ಎಂದು ಸಂಕಟವನ್ನು ಹಂಚಿಕೊಂಡರು. ಪೊಲೀಸ್ ತನಿಖೆ ಇನ್ನೂ ನಡೆಯುತ್ತಿರುವ ಸಂದರ್ಭದಲ್ಲಿ, ಕುಟುಂಬವು ಮಗುವಿನ ಭವಿಷ್ಯಕ್ಕಾಗಿ ಆಶಾಪೂರ್ವಕವಾಗಿ ನೋಡುತ್ತಿದೆ.

Exit mobile version