ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ವೈದ್ಯ ಸಾವು

ಕರ್ನಾಟಕ ಬಜೆಟ್ 2025 26 (13)

ಚಿತ್ರದುರ್ಗ: ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಜಯರಾಂ ಎಂಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕುರುಬರಹಳ್ಳಿ ಗ್ರಾಮದ ವೈದ್ಯ ಡಾ. ಜಯರಾಂ (53) ಎಂಬ ವ್ಯಕ್ತಿ ಸಾವನ್ನಪ್ಪಿದ ದುರ್ದೈವಿ. 

ಘಟನೆ ವಿವರ

ಹೊಸದುರ್ಗ ಪಟ್ಟಣದಲ್ಲಿ ಹಿರಿಯ ವೈದ್ಯರಾಗಿದ್ದ ಡಾ. ಜಯರಾಂ ಅವರು ತಮ್ಮ ತೋಟಕ್ಕೆ ಬೆಳಿಗ್ಗೆ ಭೇಟಿ ನೀಡಿದ್ದರು. ಕೃಷಿ ಹೊಂಡದ ಸಮೀಪ ತೆರಳಿದ ವೇಳೆ ಆಯತಪ್ಪಿ ಹೊಂಡಕ್ಕೆ ಬಿದ್ದಿದ್ದಾರೆ. ಮೇಲೆ ಬರಲಾಗದೇ ವೈದ್ಯ ಜಯರಾಂ ಅವರು ಸಾವನ್ನಪ್ಪಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೊಸದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 


Exit mobile version