ಬೆಂಗಳೂರು: ಬುರುಡೆ ಗ್ಯಾಂಗ್ ವೀರರು ಖತರ್ನಾಕ್ ಪ್ಲಾನ್ ಮಾಡಿದ್ದರು. ಆ ಪ್ರಕಾರ PLAN A, PLAN B, PLAN C ಕೂಡಾ ರೆಡಿ ಮಾಡಿಕೊಂಡಿದ್ದರಂತೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಿದ್ದ ಚಿನ್ನಯ್ಯ. ಅದಾದ ಮೇಲೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ, ಚಿನ್ನಯ್ಯ ತೋರಿಸಿದ್ದ ಕಡೆ ಎಲ್ಲ ಗುಂಡಿ ತೋಡಿಸಿ ಹೆಣಗಳನ್ನು ಹುಡುಕಾಡುತ್ತಿದ್ದರಲ್ಲ, ಅದು ಅಂದರೆ, ಚಿನ್ನಯ್ಯನಿಂದ ಶವಗಳ ಕಥೆ ಹೇಳಿಸಿ ಪೊಲೀಸರಿಂದ ಹುಡುಕಾಟ ಮಾಡಿಸುವುದು PLAN A.
ಇನ್ನು PLAN B ಪ್ರಕಾರ, ಚಿನ್ನಯ್ಯ ಅರೆಸ್ಟ್ ಆದರೆ, ಮಾಸ್ಕ್ ತೆಗಿಸಿ ಸಂದರ್ಶನ ಮಾಡಿಸುವುದು. ಅದೂ ಕೂಡಾ ಈಗಾಗಲೇ ಆಗಿದೆ. ಅತ್ತ ಎಸ್ಐಟಿಯವರು ಚಿನ್ನಯ್ಯನ ಮೇಲೆ ಅನುಮಾನ ಪಟ್ಟು ಅರೆಸ್ಟ್ ಮಾಡಿಸುತ್ತಿದ್ದಂತೆಯೇ ರೆಡಿ ಮಾಡಿಟ್ಟುಕೊಂಡಿದ್ದ ಕೆಲವು ಸಂದರ್ಶನಗಳು ಹೊರಬಿದ್ದವು. ಈ ಸಂದರ್ಶನಗಳನ್ನೆಲ್ಲ ಚಿನ್ನಯ್ಯ ಅರೆಸ್ಟ್ ಆಗುವುದಕ್ಕೆ ಮೊದಲೆ ಮಾಡಿಸಿದ್ದು, ಚಿನ್ನಯ್ಯ ಅರೆಸ್ಟ್ ಆದ ಮೇಲೆ ಹೊರಬಿದ್ದವು. ಇದು ಪ್ಲಾನ್ ಪ್ರಕಾರವಾಗಿಯೇ ನಡೆದಿತ್ತು. ಇದು ಪ್ಲಾನ್ ಬಿ ಎನ್ನಲಾಗಿದೆ.
ಇನ್ನು PLAN C ಎಂದರೆ, ಅಕಸ್ಮಾತ್ ಚಿನ್ನಯ್ಯ ತಪ್ಪಿಸಿಕೊಂಡು ಪರಾರಿಯಾದರೆ, ಎಸ್ಕೇಪ್ ಆದರೆ, ಓಡಿ ಹೋದರೆ ಆಗ ಬೆದರಿಕೆ ಆರೋಪದ ವಿಡಿಯೋ ಬಿಡುವುದು. ಅಂದರೆ ಸಮೀರ್, ತಿಮರೋಡಿ ಮತ್ತು ಮಟ್ಟಣ್ಣವರ್ ಸೇರಿದಂತೆ ಈ ಬುರುಡೆ ಗ್ಯಾಂಗ್ ಏನಿದೆ, ಅವರು ಆರೋಪಿಸಿದ್ದ ವ್ಯಕ್ತಿಗಳ ಹೆಸರನ್ನು ಹೇಳಿಸುವುದು. ಅವರು ಹೆದರಿಸಿದರು ಎಂಬ ಕಾರಣಕ್ಕಾಗಿ, ಚಿನ್ನಯ್ಯ ಪರಾರಿಯಾದ ಎಂದು ಕಥೆ ಕಟ್ಟುವುದು. ಇದು ಪ್ಲಾನ್ ಸಿ ಆಗಿತ್ತು ಎನ್ನಲಾಗಿದೆ.
ಆದರೆ, ಮೂರೂ ಮಾದರಿಯ ಪ್ಲಾನ್ ಸಿದ್ಧಮಾಡಿಟ್ಟುಕೊಂಡಿದ್ದ ಬುರುಡೆ ಮಾಸ್ಟರ್ ಗ್ಯಾಂಗ್‌ಗೆ ದೊಡ್ಡ ಏಟು ಬಿದ್ದಿದ್ದು, ತಿಮರೋಡಿ ಮನೆಯಲ್ಲಿ 25ಕ್ಕೂ ಹೆಚ್ಚು ಸಿದ್ಧ ವಿಡಿಯೋಗಳು. ಮೂಲಗಳ ಪ್ರಕಾರ ಈ 25ಕ್ಕೂ ಹೆಚ್ಚು ವಿಡಿಯೋಗಳಲ್ಲಿ ಇವರೆಲ್ಲರ ಹೆಸರಿದ್ದು, ಅದರ ಪ್ರಕಾರ ಈ ಸಂಚು ಬಯಲಾಗಿದೆ.
ಈ ಹಿಂದೆ ಮಟ್ಟಣ್ಣವರ್, ತಿಮರೋಡಿ ಆರೋಪಗಳಿಗೂ ಚಿನ್ನಯ್ಯ ಹೇಳಿಕೆಯೇ ಸಾಕ್ಷಿಗಳು ಎನ್ನಲಾಗಿದ್ದು, ತಾವು ಈ ಹಿಂದೆ ಕಟ್ಟಿದ್ದ ಕಟ್ಟುಕಥೆಗಳಿಗೆಲ್ಲ ಚಿನ್ನಯ್ಯ ಹೇಳಿದ್ದುದೇ ಕಾರಣ ಎಂದು ಬಿಂಬಿಸಲು ಪ್ಲಾನ್ ಸಿದ್ಧವಾಗಿತ್ತಂತೆ. ಚಿನ್ನಯ್ಯನ ಹೇಳಿಕೆಗಳನ್ನೇ ತೋರಿಸಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳೋ ಪ್ಲಾನ್ ಬಹಿರಂಗವಾಗಿದೆ ಎನ್ನಲಾಗಿದೆ.