ಬಿಎಂಟಿಸಿ ಬಸ್ ಚಾಲಕರಿಗೆ ಇಂದಿನಿಂದಲೇ ಹೊಸ ರೂಲ್ಸ್: 2 ಸಲ ಅಪಘಾತವೆಸಗಿದ್ರೆ ಕೆಲಸದಿಂದಲೇ ವಜಾ

1 (13)

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಬಸ್‌ಗಳಿಂದ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಈ ಅಪಘಾತಗಳಿಂದ ವಾಹನ ಸವಾರರು, ಪಾದಾಚಾರಿಗಳು, ಮತ್ತು ಪ್ರಯಾಣಿಕರು ಪ್ರಾಣ ಕಳೆದುಕೊಂಡ ಘಟನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.

ಈ ಹಿನ್ನೆಲೆಯಲ್ಲಿ, ಬಿಎಂಟಿಸಿ ಸಂಸ್ಥೆಯು ಚಾಲಕರಿಗೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಎರಡು ಬಾರಿ ಅಪಘಾತಕ್ಕೆ ಕಾರಣರಾದ ಚಾಲಕರನ್ನು ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಘೋಷಿಸಿದೆ. ಈ ಹೊಸ ನಿಯಮಗಳು ಇಂದಿನಿಂದಲೇ (ಆಗಸ್ಟ್ 22) ಜಾರಿಗೆ ಬಂದಿವೆ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಭಾಕರ್ ರೆಡ್ಡಿ, “ಮೊದಲ ಬಾರಿ ಅಪಘಾತಕ್ಕೆ ಕಾರಣರಾದ ಚಾಲಕರನ್ನು 6 ತಿಂಗಳ ಕಾಲ ಅಮಾನತುಗೊಳಿಸಲಾಗುವುದು. ಅಮಾನತು ಅವಧಿ ಮುಗಿದ ನಂತರ, ತರಬೇತಿಯನ್ನು ನೀಡಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು. ಜೊತೆಗೆ, ಮೊದಲ ಅಪಘಾತದ ಸಂದರ್ಭದಲ್ಲಿ ಚಾಲಕರ ಮೂರು ಇನ್‌ಕ್ರಿಮೆಂಟ್‌ಗಳನ್ನು ಕಡಿತಗೊಳಿಸಲಾಗುವುದು. ಆದರೆ, ಎರಡನೇ ಬಾರಿ ಅಪಘಾತಕ್ಕೆ ಕಾರಣರಾದರೆ, ಚಾಲಕರನ್ನು ಬಿಎಂಟಿಸಿಯಿಂದ ವಜಾಗೊಳಿಸಲಾಗುವುದು,” ಎಂದು ಸ್ಪಷ್ಟಪಡಿಸಿದರು.

ಇದರ ಜೊತೆಗೆ, ಚಾಲನೆ ವೇಳೆ ಮೊಬೈಲ್ ಫೋನ್‌ನಲ್ಲಿ ಮಾತನಾಡುವ ಚಾಲಕರನ್ನು ಕೂಡಲೇ ಅಮಾನತುಗೊಳಿಸಲಾಗುವುದು. ಎಲೆಕ್ಟ್ರಿಕ್ ಬಸ್ ಚಾಲಕರು ಫೋನ್ ಬಳಸಿದರೆ, 5,000 ರೂಪಾಯಿ ದಂಡ ಮತ್ತು 15 ದಿನಗಳ ಅಮಾನತು ವಿಧಿಸಲಾಗುವುದು.

ಬಿಎಂಟಿಸಿ ಚಾಲಕರಿಗೆ ಸುರಕ್ಷಿತ ಚಾಲನೆಗೆ ವಿಶೇಷ ತರಬೇತಿಯನ್ನು ಸೋಮವಾರದಿಂದ ಆರಂಭಿಸಲಾಗುವುದು. ಈ ತರಬೇತಿಯಲ್ಲಿ ಯೋಗ ತರಗತಿಗಳೂ ಸೇರಿವೆ, ಇದರಿಂದ ಚಾಲಕರ ಒತ್ತಡವನ್ನು ಕಡಿಮೆ ಮಾಡಿ, ಗಮನವನ್ನು ಹೆಚ್ಚಿಸಲಾಗುವುದು. ತರಬೇತಿಯ ಮೂಲಕ ಚಾಲಕರಿಗೆ ಸಂಚಾರ ನಿಯಮಗಳು, ವಾಹನ ನಿರ್ವಹಣೆ, ಮತ್ತು ಸುರಕ್ಷಿತ ಚಾಲನಾ ತಂತ್ರಗಳ ಬಗ್ಗೆ ಅರಿವು ಮೂಡಿಸಲಾಗುವುದು.

ಬೆಂಗಳೂರು ಮಹಾನಗರವು ಭಾರೀ ಸಂಚಾರ ದಟ್ಟಣೆಯಿಂದ ಕೂಡಿದೆ. ಲಕ್ಷಾಂತರ ಜನರು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣಿಕರ ಸುರಕ್ಷತೆ ಜೊತೆಗೆ, ರಸ್ತೆಯಲ್ಲಿರುವ ಪಾದಾಚಾರಿಗಳು ಮತ್ತು ಇತರ ವಾಹನ ಸವಾರರ ಸುರಕ್ಷತೆಯು ಸಂಸ್ಥೆಯ ಆದ್ಯತೆಯಾಗಿದೆ.

ಮಳೆಗಾಲದಲ್ಲಿ ರಸ್ತೆ ಗುಂಡಿಗಳು, ಜಲಾವೃತ ರಸ್ತೆಗಳು, ಮತ್ತು ಇತರ ಕಾರಣಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ದ್ವಿಚಕ್ರ ವಾಹನ ಸವಾರರು, ಪಾದಾಚಾರಿಗಳು, ಮತ್ತು ಬಸ್‌ಗೆ ಹತ್ತುವ-ಇಳಿಯುವ ಪ್ರಯಾಣಿಕರು ಈ ಅಪಘಾತಗಳಲ್ಲಿ ಭಾಗಿಯಾಗಿದ್ದಾರೆ.

ಸುರಕ್ಷಿತ ಚಾಲನೆಗೆ ಸೂಚನೆಗಳು:

ಬಿಎಂಟಿಸಿ ಸಂಸ್ಥೆಯು ಚಾಲಕರಿಗೆ ಈ ಕೆಳಗಿನ ಸುರಕ್ಷಿತ ಚಾಲನಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶಿಸಿದೆ:

ಸಂಸ್ಥೆಯ ಕ್ರಮಗಳು:

ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು, ಮತ್ತು ಘಟಕ ವ್ಯವಸ್ಥಾಪಕರು ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ, ಮತ್ತು ಸಾಯಂಕಾಲ ಸಭೆಗಳ ಮೂಲಕ ಚಾಲಕರಿಗೆ ಸುರಕ್ಷಿತ ಚಾಲನೆಯ ಬಗ್ಗೆ ಅರಿವು ಮೂಡಿಸಲಿದ್ದಾರೆ. ಬಸ್ ನಿಲ್ದಾಣಗಳಲ್ಲಿ ಸಂಚಾರ ಸಿಬ್ಬಂದಿಗಳು ಬಸ್‌ನ ಬಾಗಿಲು ತೆರೆಯುವ ಮತ್ತು ಮುಚ್ಚುವ ಕಾರ್ಯವನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.

Exit mobile version