ಬೆಂಗಳೂರು: ಧಾರ್ಮಿಕ ಭಕ್ತರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ‘ದಿವ್ಯ ದರ್ಶನ’ ಎಂಬ ಹೊಸ ವಿಕೇಂಡ್ ಟೆಂಪಲ್ ಟೂರ್ ಪ್ಯಾಕೇಜ್ ಘೋಷಿಸಿದೆ. ಈ ಯೋಜನೆಯಡಿ, ಒಂದೇ ದಿನದಲ್ಲಿ ಬೆಂಗಳೂರಿನ 8 ಪ್ರಸಿದ್ಧ ದೇವಾಲಯಗಳನ್ನು ಎಸಿ ಬಸ್ ಮೂಲಕ ಭೇಟಿ ಮಾಡಬಹುದು. ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಈ ಯೋಜನೆಗೆ ನಿನ್ನೆ (ಮೇ 28) ದಿನ ಚಾಲನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಯೋಜನೆಗೆ ಭಾರೀ ಬೆಂಬಲ ವ್ಯಕ್ತವಾಗಿದೆ.
‘ದಿವ್ಯ ದರ್ಶನ’ ಟೂರ್‌ನಲ್ಲಿ ಯಾವ ದೇವಾಲಯಗಳಿವೆ?
ಈ ಟೂರ್ ಪ್ಯಾಕೇಜ್‌ನಲ್ಲಿ ಈ ಕೆಳಗಿನ ಪ್ರಸಿದ್ಧ ದೇವಾಲಯಗಳನ್ನು ಭೇಟಿಮಾಡಿಸಲಾಗುತ್ತದೆ:
-
ಗಾಳಿ ಆಂಜನೇಯ ಸ್ವಾಮಿ ದೇಗುಲ (ಮೈಸೂರು ರಸ್ತೆ)
-
ರಾಜರಾಜೇಶ್ವರಿ ದೇವಸ್ಥಾನ (ಆರ್.ಆರ್. ನಗರ)
-
ಶೃಂಗಗಿರಿ ಷಣ್ಮುಖ ದೇವಾಲಯ (ಆರ್.ಆರ್. ನಗರ)
-
ಕರುಮಾರಿ ಅಮ್ಮ ದೇವಾಲಯ (ಆರ್.ಆರ್. ನಗರ)
-
ಓಂಕಾರ ಹೀಲ್ಸ್ (ಉತ್ತರಹಳ್ಳಿ)
-
ಇಸ್ಕಾನ್ ದೇವಸ್ಥಾನ (ವಸಂತಪುರ)
-
ಆರ್ಟ್ ಆಫ್ ಲಿವಿಂಗ್ (ಕನಕಪುರ ರಸ್ತೆ)
-
ಬನಶಂಕರಿ ದೇವಾಲಯ (ಬನಶಂಕರಿ)
🚍 On May 28, 2025, Hon’ble Minister Sri Ramalinga Reddy inaugurated a new route under the Divya Darshana package tour.
The event was attended by senior officials from @BMTC_BENGALURU & @TransportDeptGoK including Dr. N. V. Prasad, Sri Ramachandran R., & Sri Abdul Ahad. pic.twitter.com/4xOY9h9dN2— BMTC (@BMTC_BENGALURU) May 28, 2025
ಟೂರ್ ವೇಳಾಪಟ್ಟಿ
-
ದಿನಾಂಕ: ಪ್ರತಿ ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾದಿನಗಳಲ್ಲಿ
-
ಸಮಯ: ಬೆಳಗ್ಗೆ 8:30ಕ್ಕೆ ಮೆಜೆಸ್ಟಿಕ್ನಿಂದ ಪ್ರಯಾಣ ಆರಂಭ, ಸಂಜೆ 5:30ಕ್ಕೆ ವಾಪಸ್
-
ವಾಹನ: ಎಸಿ ಬಸ್ನಲ್ಲಿ 8 ದೇವಾಲಯಗಳಿಗೆ ಭೇಟಿ, ಮೆಜೆಸ್ಟಿಕ್ಗೆ ವಾಪಸಾತಿ
ಟಿಕೆಟ್ ದರ
-
ವಯಸ್ಕರಿಗೆ: 450 ರೂ.
-
ಮಕ್ಕಳಿಗೆ: 350 ರೂ.
ಈ ಯೋಜನೆಯು ಭಕ್ತರಿಗೆ ಆರಾಮದಾಯಕ ಮತ್ತು ಆಧ್ಯಾತ್ಮಿಕ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಒಂದೇ ದಿನದಲ್ಲಿ ಬೆಂಗಳೂರಿನ ಪ್ರಮುಖ ದೇವಾಲಯಗಳ ದರ್ಶನವನ್ನು ಸುಲಭವಾಗಿ ಪಡೆಯಬಹುದು. ಈ ಯೋಜನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ದೊರಕಿದ್ದು, ಧಾರ್ಮಿಕ ಪ್ರವಾಸಿಗರಿಗೆ ಒಂದು ಉತ್ತಮ ಅವಕಾಶವಾಗಿದೆ.
