ರಸ್ತೆ ಬದಿ ನಿಂತಿದ್ದ ಯುವತಿಗೆ ಬಸ್ ಡಿಕ್ಕಿ ಸ್ಥಳದಲ್ಲೇ ಸಾವು..!

Web 2025 07 18t233717.629

ಬಿಎಂಟಿಸಿ ನಿರ್ವಾಹಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಒಂದು ಬಲಿಯಾಗಿದೆ. ಚಾಲಕನ ಬದಲು ಕಂಡಕ್ಟರ್ ಬಸ್ ಓಡಿಸಲು ಹೋಗಿ ಅಪಘಾತ ಮಾಡಿ ಯುವತಿ ಸಾವಿಗೆ ಕಾರಣವಾಗಿದ್ದಾನೆ. ಇದು ಅಪಘಾತವಲ್ಲ ಕೊಲೆ ಎಂದು ಮೃತರು ಆಕ್ರೋಶ ಮುಗಿಲು ಮುಟ್ಟಿದೆ.

ಆ ಯುವತಿ ಬೆಳಗ್ಗೆ ಕೆಲಸಕ್ಕೆ ಹೋಗೋಕೆ ಅಂತ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ. ನಿಲ್ದಾಣದ ಪಕ್ಕದಲ್ಲೇ ಇದ್ದ ರಸ್ತೆ ಬದಿಯ ಹೊಟೇಲ್ ಒಂದರಲ್ಲಿ ತಿಂಡಿ ಪಾರ್ಸೆಲ್ ತೆಗೆದುಕೊಳ್ಳಲು ಹೋದಾಗ ಯಮನ ರೂಪದಲ್ಲಿ ಬಂದ ಬಿಎಂಟಿಸಿ, ಬಾಳಿ ಬದುಕಬೇಕಿದ್ದ ಯುವತಿಯನ್ನ ಬಲಿ ಪಡೆದಿದೆ.ಹೌದು ಈ ಘಟನೆ ನಡೆದಿರೋದು ಪೀಣ್ಯ ಎರಡನೇ ಹಂತದಲ್ಲಿ. ಬೆಳಗ್ಗೆ 8.45 ರ ಸುಮಾರಿಗೆ ಯುವತಿ ಸುಮ ಕೆಲಸಕ್ಕೆ ಹೋಗುವ ಸಂಬಂಧ ಬಸ್ ನಿಲ್ದಾಣಕ್ಕೆ ಬಂದು ತಿಂಡಿ ಪಾರ್ಸೆಲ್ ತೆಗೆದುಕೊಳ್ಳುವಾಗ ದುರಂತ ಸಂಭವಿಸಿದೆ.

ಮೆಜೆಸ್ಟಿಕ್ ಟು ಪೀಣ್ಯ ಮಾರ್ಗದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಪೀಣ್ಯ ಸೆಕೆಂಡ್ ಸ್ಟೇಜ್ ಬಳಿ ಬಂದು ನಿಂತಾಗ ಚಾಲಕ ದಿಲೀಪ್ ಬಸ್ ನಿಂದ ಕೆಳಗೆ ಇಳಿದು ಹೋಗಿದ್ದಾನೆ‌. ಈ ವೇಳೆ ಬಸ್ ನಲ್ಲಿದ್ದ ಕಂಡಕ್ಟರ್ ರಮೇಶ್, ಚಾಲಕ ಇಲ್ಲ ಅಂತ ತಾನೇ ಬಸ್ ನ್ನ ತೆಗೆಯಲು ಮುಂದಾಗಿದ್ದಾನೆ ಈ ವೇಳೆ ಬಸ್ ನಿಯಂತ್ರಣ ತಪ್ಪಿದ್ದು, ಎದುರುಗಡೆ ಇದ್ದ ಪುಟ್ಪಾತ್ ಹತ್ತಿ ಹೊಟೇಲ್ ಒಂದಕ್ಕೆ ಗುದ್ದಿದೆ. ಇದೇ ವೇಳೆ ಯುವತಿ ಕೂಡ ತಿಂಡಿ ಪಾರ್ಸೆಲ್ ತೆಗೆದುಕೊಳ್ಳಲು ಬಂದಿದ್ದು, ಬಸ್ ಗುದ್ದಿದ ಪರಿಣಾಮ ತೀವ್ರಗಾಯಗೊಂಡಿದ್ದಾಳೆ, ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದು , ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ.

ಇನ್ನೂ ದುರಂತ ನಡೆದ ಸ್ಥಳದಲ್ಲಿದ ಹೊಟೇಲ್ ಬಸ್ ಗುದ್ದಿದ ರಭಸಕ್ಕೆ ಸಂಪೂರ್ಣ ಚೆಲ್ಲಾಪಿಲ್ಲಿಯಾಗಿದೆ. ಇನ್ನೂ ಘಟನೆ ವೇಳೆ ಭಾರಿ ದುರಂತವು ಕೂಡ ತಪ್ಪಿದೆ. ಬಸ್ ಗುದ್ದಿದಾಗ ಹೊಟೇಲ್ ನಲ್ಲಿದ್ದ ಸಿಲಿಂಡರ್ ಗೂ ಬೆಂಕಿ ತಗುಲಿದೆ. ಸ್ಥಳದಲ್ಲಿದ್ದವರು ಸಮಯ ಪ್ರಜ್ಞಯಿಂದ ಶೀಘ್ರ ಬೆಂಕಿ ನಂದಿಸಿದ್ದು, ಭಾರಿ ದುರಂತ ತಪ್ಪಿದೆ.

ಮಂಡ್ಯದ ತರೀಕೇರೆ ಮೂಲದ ಸುಮಾ ಮೃತ ದುರ್ದೈವಿ ಯುವತಿ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಹೆಬ್ಬಾಳದ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಕೆ ಎಂದಿನಂತೆ ಕೆಲಸಕ್ಕೆ ಹೋಗಲು ಬಂದಾಗ ದುರಂತ ಸಂಭವಿಸಿದೆ. ಇನ್ನೂ ಘಟನೆ ಬಳಿಕ ಆಸ್ಪತ್ರೆ ಬಳಿ ಮೃತಳ ಕುಟುಂಬಸ್ಥರು, ಬಿಎಂಟಿಸಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸಾವಿಗೆ ಹೊಣೆಯಾರು. ಇದು ಅಪಘಾತ ಅಲ್ಲ, ಕೊಲೆ ಅಂತ ಕಿಡಿ ಕಾರಿದ್ರು

ಬಿಎಂಟಿಸಿ ಕಂಡಕ್ಟರ್ ಮಾಡಿದ ತಪ್ಪಿಂದ ತನ್ನದಲ್ಲದ ತಪ್ಪಿಗೆ ಅಮಾಯಕ ಜೀವ ಬಲಿಯಾಗಿದೆ. ಇತ್ತ ಬಿಎಂಟಿಸಿ ಮಾತ್ರ ಈ ಪ್ರಕಣಕ್ಕೂ ನಮಗೂ ಸಂಭಂದವಿಲ್ಲಾ ಅಂತಾ ಚಾಲಕನ ತಪ್ಪು ಇಲ್ಲಾ‌ ಅಂತಾ ಹೇಳಿ ಕೈ ತೊಳೆದುಕೊಂಡಿರುವುದು ವಿಪರ್ಯಾಸವೆ ಸರಿ.

Exit mobile version