ಬಿಎಂಟಿಸಿ ಬಸ್‌ನಲ್ಲಿ ಮಹಿಳಾ ಶಕ್ತಿಗಳ ಜಗಳ: ಕಿತ್ತಾಟ ನೋಡಿ ಕಂಡಕ್ಟರ್ ಹೈರಾಣು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳಲ್ಲಿ ಪ್ರಯಾಣಿಕರ ನಡುವೆ ಜಗಳ ಸಾಮಾನ್ಯವಾಗಿದ್ದರೂ, ಇತ್ತೀಚೆಗೆ ಮಹಿಳಾ ಪ್ರಯಾಣಿಕರ ನಡುವಿನ ಜಗಳಗಳು ಹೆಚ್ಚಾಗುತ್ತಿವೆ. ನಾಯಂಡನಹಳ್ಳಿ-ಸುಮ್ಮನಹಳ್ಳಿ ಮಾರ್ಗದ ಬಸ್‌ನಲ್ಲಿ ನಡೆದ ಇತ್ತೀಚಿನ ಘಟನೆಯಲ್ಲಿ ಇಬ್ಬರು ಮಹಿಳೆಯರು ಜಗಳಕ್ಕೆ ಇಳಿದರು. ರಶ್‌ನಲ್ಲಿ ಕುಳಿತಿದ್ದ ಮಹಿಳೆಯ ಕಾಲು ತುಳಿದ ಆರೋಪದಿಂದ ಆರಂಭವಾದ ಜಗಳ ತೀವ್ರಗೊಂಡಿತು.

ಬಸ್ ಒಳಗೆ ಇಬ್ಬರು ಮಹಿಳೆಯರು ಜೋರಾಗಿ ವಾದಿಸುತ್ತಾ ಕಿತ್ತಾಡಿದರು. ಜಗಳ ನೋಡಿ ಬೇಸತ್ತ ಕಂಡಕ್ಟರ್ ಜಗಳ ಬಿಡಿಸಲು ಪರದಾಡಿದರು. ಆದರೆ ಮಹಿಳೆಯರು ಕಿವಿ ಕೊಡದೆ ಜಗಳ ಮುಂದುವರೆಸಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಬೆಂಗಳೂರಿನಲ್ಲಿ ರಶ್ ಅವರ್‌ನಲ್ಲಿ ಬಸ್‌ಗಳಲ್ಲಿ ಸೀಟ್‌ಗಳ ಕೊರತೆ, ದಟ್ಟಣೆಯಿಂದಾಗಿ ಇಂತಹ ಘಟನೆಗಳು ಪದೇಪದೇ ನಡೆಯುತ್ತಿವೆ. ಮಹಿಳಾ ಪ್ರಯಾಣಿಕರ ನಡುವೆ ಜಗಳಗಳು ಹೆಚ್ಚಾಗುತ್ತಿರುವುದು ಕಂಡಕ್ಟರ್‌ಗಳಿಗೆ ಹೊರೆಯಾಗಿದೆ ಎಂದು ಸಾರಿಗೆ ಸಿಬ್ಬಂದಿ ಹೇಳುತ್ತಿದ್ದಾರೆ.

ಪೊಲೀಸ್ ಅಥವಾ ಬಿಎಂಟಿಸಿ ಇಲಾಖೆಯಿಂದ ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಇಂತಹ ಘಟನೆಗಳನ್ನು ತಡೆಗಟ್ಟಲು ಹೆಚ್ಚಿನ ಜಾಗ್ರತೆ ಮತ್ತು ಸೌಜನ್ಯತೆ ಅಗತ್ಯ ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

Exit mobile version