ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
ಬೆಂಗಳೂರಿನಲ್ಲಿ ಟೆಲಿಗ್ರಾಂ ಆ್ಯಪ್ ಮೂಲಕ ಉದ್ಯೋಗದ ನೆಪದಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ವಂಚನೆಯೊಂದು ಬೆಳಕಿಗೆ ಬಂದಿದೆ. ‘ರೇಟಿಂಗ್ ಜಾಬ್’ ಎಂಬ ಹೆಸರಿನಲ್ಲಿ ಆಕರ್ಷಕ ಕೆಲಸದ ಆಫರ್‌ಗಳನ್ನು ನೀಡಿ, ನಂಬಿಕೆ ಗಳಿಸಿ, ಹಣ ಹೂಡಿಕೆಗೆ ಪ್ರೇರೇಪಿಸಿ, ನಂತರ ಹಣ ವಾಪಸ್ ನೀಡದೆ ಮೋಸ ಮಾಡುವ ಪ್ರಕರಣಗಳು ಬಹಿರಂಗವಾಗಿವೆ.
ಪರಮೇಶ್ ಎಂಬ ಯುವಕ ಟೆಲಿಗ್ರಾಂ ಆ್ಯಪ್‌ನಲ್ಲಿ ‘ರೇಟಿಂಗ್ ಜಾಬ್’ ಎಂಬ ಉದ್ಯೋಗ ಆಫರ್‌ಗಾಗಿ ಮೊದಲಿಗೆ 150 ರೂಪಾಯಿಯಂತೆ 8 ಬಾರಿ ಪಾವತಿಸಿದ್ದ. ಒಟ್ಟು 2,000 ರೂಪಾಯಿಗಳನ್ನು ಹೂಡಿಕೆ ಮಾಡಿದ್ದ ಅವನನ್ನು, ಸೈಬರ್ ವಂಚಕರು ಹಂತಹಂತವಾಗಿ 3.5 ಲಕ್ಷ ರೂಪಾಯಿಗಳವರೆಗೆ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಹಣ ವಾಪಸ್ ಕೇಳಿದಾಗ, ‘ಟ್ಯಾಕ್ಸ್ ಕಟ್ಟಬೇಕು’ ಎಂಬ ನೆಪದಲ್ಲಿ ಮತ್ತೆ 1 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಒತ್ತಾಯಿಸಲಾಗಿದೆ. ಇದರಿಂದ ಯುವಕ ಗಂಭೀರ ಮೋಸಕ್ಕೆ ಒಳಗಾಗಿದ್ದಾನೆ.
ಈ ವಂಚನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಟೆಲಿಗ್ರಾಂ ಆ್ಯಪ್‌ನ ಮೂಲಕ ನಡೆದಿರುವ ಈ ವಂಚನೆಯ ಹಿಂದಿನ ಆರೋಪಿಗಳನ್ನು ಪತ್ತೆಹಚ್ಚಲು ತಾಂತ್ರಿಕ ತನಿಖೆ ನಡೆಯುತ್ತಿದೆ.
ಟೆಲಿಗ್ರಾಮ್ ಅಥವಾ ಇತರ ಸಾಮಾಜಿಕ ಮಾಧ್ಯಮ ಆ್ಯಪ್‌ಗಳಲ್ಲಿ ಉದ್ಯೋಗದ ಹೆಸರಿನಲ್ಲಿ ಹಣ ಕೇಳುವವರಿಂದ ಎಚ್ಚರ ಇರಬೇಕು.ಯಾವುದೇ ರೀತಿಯ ಹೂಡಿಕೆ ಮಾಡುವ ಮುನ್ನ ಸರಿಯಾದ ಪರಿಶೀಲನೆ ಮಾಡುವುದು ಅಗತ್ಯ.ಲಾಭದ ಆಸೆಯಲ್ಲಿ ಹಣ ಹೂಡಿಸದೇ, ಸೂಕ್ತ ಸಂಸ್ಥೆ ಅಥವಾ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯುವುದು ಉತ್ತಮ.
ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
| Reported by: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ