ಏನೂ ಅರಿಯದ ಮೂಕ ಪ್ರಾಣಿಯನ್ನು ಎತ್ತಿ ಎಸೆದು ಮಹಿಳೆ ಕೊಲೆ ಮಾಡಿದ್ದಾಳೆ. ಏನೂ ಅರಿಯದ ಶ್ವಾನದ ಉಸಿರು ನಿಲ್ಲಿಸಿ ಹಾರ್ಟ್ ಅಟ್ಯಾಕ್ ಅಂತಾ ನಾಟಕವಾಡಿದ್ರೆ ಇತ್ತ ಸಿಸಿಟಿವಿ ಪೂಟೇಜ್ ಆಕೆಯ ಬಣ್ಣ ಬಯಲುಗೊಳಿಸಿದೆ. ಶ್ವಾನ ಕಳೆದುಕೊಂಡ ಮಾಲೀಕರು ಕಣ್ಣೀರಾಕುತ್ತಿದ್ದಾರೆ ಈ ಕುರಿತ “ಕಂಪ್ಲಿಟ್ ಡಿಟೈಲ್ಸ್ ಇಲ್ಲಿದೆ”
ನಿಯತ್ತಿಗೆ ಇನ್ನೋಂದು ಹೆಸರು ನಾಯಿ.ಸಾಕಷ್ಟು ಜನರು ಇತ್ತೀಚಿಗೆ ಮನುಷ್ಯರ ಜೊತೆ ಸ್ನೇಹ ಮಾಡುವುದಕ್ಕಿಂತ ಹೆಚ್ಚಾಗಿ ಶ್ವಾನಗಳ ಜೊತೆ ಬಾಂಧವ್ಯ ಹೊಂದಿರುತ್ತಾರೆ.ಆದ್ರೆ ಇಲ್ಲೊಬ್ಬಳು ಪಾಪಿ ಏನೂ ಅರಿಯದ ಮುಗ್ದ ಶ್ವಾನದ ಪ್ರಾಣ ತೆಗೆದಿದ್ದಾಳೆ. ನಿಯತ್ತಾಗಿ ಮನೆ ಮಾಲಕೀ ಜೊತೆ ಇದ್ದ ಶ್ವಾನವನ್ನು ನಿಯತ್ತು ಇಲ್ಲದ ಪಾಪಿ ಮಹಿಳೆ ಕೊಂದಿದ್ದಾಳೆ.
ಈ ವಿಡಿಯೋ ಒಮ್ಮೆ ನೋಡಿ ಎರಡು ಶ್ವಾನಗಳನ್ನ ಲಿಪ್ಟ್ ಒಳಗೆ ಕರೆತಂದು ಅದರಲ್ಲಿ ಒಂದು ಶ್ವಾನವನ್ನ ಬಟ್ಟೆ ಒಗೆದಂತೆ ನೆಲಕ್ಕೆ ಬಡಿದು ಮಹಿಳೆಯೊಬ್ಬಳು ಸಾಯಿಸಿದ ದೃಶ್ಯ. ಒಮ್ಮೆ ಎದೆ ಝಲ್ಲೆನಿಸಿ ರಕ್ತ ಕುದಿಯುತ್ತೆ. ಇನ್ನೂ ಈ ಮಹಾಪಾಪಿಯ ಹೆಸರು ಪುಷ್ಪಾಲತ. ರಾಶಿಪೂಜಾರಿ ಎಂಬುವವರು ಕಳೆದ ನಾಲ್ಕು ವರ್ಷದ ಹಿಂದೆ ದೆಹಲಿಯಿಂದ ಈ ಶ್ವಾನದ ಮರಿಯನ್ನ ತಂದಿದ್ರು. ಬಹಳ ಮುದ್ದಿನಿಂದ ಆ ಶ್ವಾನಕ್ಕೆ ಗೂಫಿ ಅಂತ ಹೆಸರಿಟ್ಟು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ರು. ಕಳೆದ ಒಂದುವರೆ ತಿಂಗಳ ಹಿಂದೆ ಶ್ವಾನವನ್ನ ನೋಡಿಕೊಳ್ಳೋದಕ್ಕೆ ಅಂತಲೇ ಏಜೆನ್ಸಿ ಮೂಲಕ ಈ ಪುಷ್ಪಲತಾಳನ್ನ ಕೆಲಸಕ್ಕೆ ನೇಮಿಸಿಕೊಂಡಿದ್ರು. ಆದ್ರೆ ಪುಷ್ಪಾಲತ ಕಳೆದ ಅಕ್ಟೋಬರ್ 31 ನೇ ತಾರೀಖು ಬಾಗಲೂರಿ ಅಪಾರ್ಟ್ಮೆಂಟ್‌ನ ಲಿಪ್ಟ್‌ನಲ್ಲಿ ನಾಯಿಯನ್ನ ನೆಲಕ್ಕೆ ಬಡಿದು ಸಾಯಿಸಿದ್ದಾಳೆ.
ಪುಷ್ಪಲತಾ ಮನೆಯವರ ಜೊತೆ ಬಹಳ ಚನ್ನಾಗಿ ಇದ್ರಂತೆ..ಯಾವತ್ತು ಕೂಡ ಎರಡು ಶ್ವಾನಗಳ ಜೊತೆನೂ ಈ ರೀತಿ ನಡೆದುಕೊಂಡಿರಲಿಲ್ಲವಂತೆ..ಶ್ವಾನ ಏಕಾಏಕಿ ಸಾವನ್ನಪ್ಪಿದಾಗ ಪುಪ್ಪಲತಾ ಹಾರ್ಟ್ ಅಟ್ಯಾಕ್ ಅಂತಾ ಕಥೆಕಟ್ಟಿದ್ದಾಳೆ ಶ್ವಾನ ನಿಜವಾಗಿಯೂ ಹಾರ್ಟ್ ಅಟ್ಯಾಕ್ ನಿಂದ ಸಾವನಪ್ಪಿದೆ ಅಂತಾ ಮನೆ ಮಂದಿ ನಂಬಿಕೊಂಡಿದ್ರು. ಅದ್ರೆ ಎಲ್ಲೋ ಒಂದು ಕಡೆಯಲ್ಲಿ ಮನೆ ಕೆಲಸದಾಕೆ ಅನುಮಾನಸ್ಪದವಾಗಿ ಓಡಾಡುತಿದದ್ದು ರಾಶಿ ಪೂಜಾರಿ ಹಾಗೂ ಅವರ ಕುಟುಂಬದವರಿಗೆ ಡೌಟ್ ತರಿಸಿದೆ. ಶ್ವಾನದ ಕೊನೆಯ ಕ್ಷಣ ಹೇಗಿತ್ತು ಕೊನೆಕ್ಷಣದಲ್ಲಿ ಏನಾಯ್ತು ಅನ್ನೋದನ್ನ ನೋಡ್ಬೇಕು ಅನ್ನೋ ಕಾರಣದಿಂದಾಗಿ ಲಿಪ್ಟ್ ಸಿಸಿಟಿವಿ ಚೆಕ್ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ವಿಕೃತಿ ಬಟಬಯಲಾಗಿದೆ.
ಸದ್ಯ ಈ ಪ್ರಕರಣದ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು.ಪೊಲೀಸರು ಪುಷ್ಪಲತಾಳ ವಿಚಾರಣೆ ನಡೆಸುತ್ತಿದ್ದಾರೆ ವಿಚಾರಣೆ ಬಳಿಕ ಶ್ವಾನದ ಮೇಲೆ ಆ ರೀತಿಯಾ ವಿಕೃತಿ ತೋರಲು ಕಾರಣವೇನು.ಯಾಕಾಗಿ ಕೊಲೆ ಮಾಡಿದ್ಲು ಅನ್ನೋದರ ಸತ್ಯಾಸತ್ಯತೆ ತಿಳಿಯಬೇಕಿದೆ.





