ಬಾಯಿ ಬಿಟ್ರೆ ಈಗಿನ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಅನ್ನೋ ಟೈಟಲ್ ಕಾರ್ಡ್ ಬಳಕೆ ಮಾಡುತ್ತೆ, ಆದ್ರೆ ಅಸಲಿಗೆ ಐಟಿಸಿಟಿಯಲ್ಲಿ ಗುಂಡಿಮುಕ್ತ ರಸ್ತೆಗಳನ್ನ ಹುಡುಕಿದ್ರು ಸಿಗೋದು ಕಷ್ಟ ಅನ್ನುವ ಸಿಚುಯೇಷನ್ ನಲ್ಲಿದೆ ನಮ್ಮ ಬೆಂಗಳೂರು. ಏನಿದು ಗುಂಡಿಗಂಡಿ ಸ್ಟೋರಿ ಅಂತೀರಾ..?
ಹೀಗೆ ದೊಡ್ಡ ದೊಡ್ಡ ಗುಂಡಿಯಲ್ಲಿ ಜಪಿಂಗ್ ಜಪಾಂಗ್ ಮಾಡ್ತಿರೋ ವಾಹನಗಳು. ಭಯದಲ್ಲಿ ವಾಹನ ಚಲಾಯಿಸೋ ವಾಹನ ಸವಾರರು.ಈ ದೃಶ್ಯಗಳು ಕಂಡು ಬರೋದು ಆರ್ ಆರ್ ನಗರ ವಲಯದ ನಾಗರಭಾವಿ ಸೆಕೆಂಡ್ ಸ್ಟೇಜ್ ,ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗೊ ರಸ್ತೆಯಲ್ಲಿ.ಕಳೆದ ಐದಾರು ತಿಂಗಳಿಂದ ಇಲ್ಲಿಯ ಜನ್ರು ಅವ್ಯವಸ್ಥೆ ಜೊತೆ ಆತಂಕ ಪಡಬೇಕಾದ ಅನಿವಾರ್ಯತೆ ಬಂದಿದೆ. ಕಾರಣ ಇಲ್ಲಿಯ ರಸ್ತೆಯಲ್ಲಿ ಬಿದ್ದಿರೋ ಗುಂಡಿಗಳು.
ಆರು ತಿಂಗಳಿಂದ ಈ ರಸ್ತೆಯಲ್ಲಿ ಅದೆಷ್ಟು ಜನ ಬಿದ್ರು ಎದ್ರು ಅನ್ನೋದು ಲೆಕ್ಕವಿಲ್ವಂತೆ.ಸಾರಿ ಸಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ರು. ಅಧಿಕಾರಿಗಳು ಖ್ಯಾರೆ ಅಂತಿಲ್ಲವಂತೆ. ಅದ್ರಲ್ಲೂ ರಾಜಕೀಯ ಕಿತ್ತಾಟಕ್ಕೆ ಜನ್ರು ಅವ್ಯವಸ್ಥೆ ಪಡ್ಬೇಕಾಗಿದೆ. ಇಲ್ಲಿಯ ಜನ್ರು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಕೂಡ ನಡೆದಿದೆ.ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಇಲಾಖೆಗೆ ರಸ್ತೆ ಸಂಬಂಧಿತ ದೂರು ಕೂಡ ದಾಖಲು ಮಾಡಲಾಗಿತ್ತು. ಈ ಗುಂಡಿಯಲ್ಲಿ ಸಾಕಷ್ಟು ಜನರು ಬಿದ್ದು ಏಟು ಮಾಡಿಕೊಂಡಿದ್ದಾರೆ ಜೊತೆ ಜೊತೆಗೆ ಕೈ ಕಾಲು ಮುರಿದುಕೊಂಡವರು ಇದ್ದಾರೆ. ಆದ್ರೆ ಅಧಿಕಾರಿಗಳಾಗ್ಲಿ ಅಥವಾ ಸರಕಾರವಾಗ್ಲಿ ಕ್ಯಾರೇ ಅಂತಿಲ್ಲ.
ಒಟ್ಟಾರೆಯಾಗಿ ಈ ಸ್ಟೋರಿ ನೋಡಿದ ಮೇಲೆ ಆದ್ರೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚತ್ತುಕೊಂಡು, ಇನ್ನೂ ಮುಂದೆ ಆದ್ರೂ ಇಲ್ಲಿಯ ಜನ್ರ ಗೋಳಿಗೆ ಮುಕ್ತಿ ಕೊಡ್ತಾರಾ ಅನ್ನೊದನ್ನ ಕಾದು ನೋಡೊಣ.