ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
ಬೆಂಗಳೂರು ನಗರದ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 52 ಗ್ರಾಮಗಳನ್ನು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಸೇರಿಸಿ ಆದೇಶ ಹೊರಡಿಸಿದೆ. ಈ ಗ್ರಾಮಗಳು ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‌ಪಿ ವ್ಯಾಪ್ತಿಗೆ ಸೇರಿದ್ದವು. ರಾಜ್ಯಪಾಲರ ಅಧೀನ ಕಾರ್ಯದರ್ಶಿ ಕೆ.ಎನ್. ವನಜಾ ಅವರು ಈ ಕುರಿತು ಅಧಿಕೃತ ಆದೇಶವನ್ನು ಜಾರಿಗೊಳಿಸಿದ್ದಾರೆ.
ಪೊಲೀಸ್ ಠಾಣೆಗಳಿಗೆ ಸೇರ್ಪಡೆಗೊಂಡ ಗ್ರಾಮಗಳು:
ಸೇರ್ಪಡೆಗೊಂಡ ಗ್ರಾಮಗಳನ್ನು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ವಿಂಗಡಿಸಲಾಗಿದೆ. ಅವುಗಳ ವಿವರ ಈ ಕೆಳಗಿನಂತಿದೆ:
ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಗೆ: ಹೆನ್ನಾನಗರ, ಯಾರಂಡಹಳ್ಳಿ, ಕಾಚನಾಯಕನಹಳ್ಳಿ, ಕಿತ್ತಿಗಾನಹಳ್ಳಿ, ಎಚ್.ಹೊಸಹಳ್ಳಿ
ಬಾಗಲೂರು ಠಾಣೆ: ಜೋನಹಳ್ಳಿ, ಭಟ್ರಮಾರನಹಳ್ಳಿ, ಮಂಚಪ್ಪನಹಳ್ಳಿ
ಕೆಐಎ ಠಾಣೆ: ರಾಮನಹಳ್ಳಿ
ಯಲಹಂಕ ನ್ಯೂ ಟೌನ್: ಸಿಂಗನಾಯಕನಹಳ್ಳಿ, ಅವಲಹಳ್ಳಿ, ಹೊನ್ನೇನಹಳ್ಳಿ, ಸುಬೇದಾರ್‌ಪಾಳ್ಯ
ಚಿಕ್ಕಜಾಲ ಠಾಣೆ: ಮುದ್ದನಹಳ್ಳಿ, ನಾಗದಾಸನಹಳ್ಳಿ, ಕೆಂಪತಿಮ್ಮನಹಳ್ಳಿ, ಜೋಗಹಳ್ಳಿ, ಇಂದ್ರಸನಹಳ್ಳಿ, ಸಿಂಗರಹಳ್ಳಿ, ನಾಗಮಂಗಲ, ಚೌಡನಹಳ್ಳಿ, ಭೋವಿಪಾಳ್ಯ, ಹೆಗ್ಗನಹಳ್ಳಿ
ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ: ಚಿಕ್ಕಕುಕ್ಕನಹಳ್ಳಿ, ಕನಕನಗರ, ತೋಟಗೆರೆ, ಗೋಪಾಲಪುರ, ಗೋವಿಂದಪುರ, ಅಗ್ರಹಾರಪಾಳ್ಯ, ಹೊಸಹಳ್ಳಿಪಾಳ್ಯ
ಬಾಗಲಗುಂಟೆ ಠಾಣೆ ಪೊಲೀಸ್ ಠಾಣೆಗೆ: ಹೆಗ್ಗಡದೇವನಪುರ, ಆಲೂರು, ಕುದುರೆಗೆರೆ, ತಮ್ಮೇನಹಳ್ಳಿ, ಮಾದನಾಯಕನಹಳ್ಳಿ, ಹನಮಂತಸಾಗರ, ಹನುಮಂತೇಗೌಡನಪಾಳ್ಯ, ಅಂಚೆಪಾಳ್ಯ, ತೋಟದಗುಡ್ಡದಹಳ್ಳಿ
ಪೀಣ್ಯ ಪೊಲೀಸ್ ಠಾಣೆ: ಚಿಕ್ಕಬಿದರಕಲ್ಲು, ಸಿದ್ದನಹೊಸಹಳ್ಳಿ, ದೊಂಬರಹಳ್ಳಿ, ಗಂಗೊಂಡನಹಳ್ಳಿ, ಕೆ.ಜಿ.ಲಕ್ಕೇನಹಳ್ಳಿ, ಲಕ್ಷ್ಮೀಪುರ, ಬೈಲಪ್ಪನಪಾಳ್ಯ, ಹೊಟ್ಟಪ್ಪನಪಾಳ್ಯ, ಮಾದವಾರ, ರವಿ ಕಿರ್ಲೋಸ್ಕರ್ ಲೇಔಟ್, ಬುದ್ಧ ಜ್ಯೋತಿ ನಗರ, ಗಂಗೊಂಡನಹಳ್ಳಿ
ಈ ಮೂಲಕ, ಗ್ರಾಮಗಳಲ್ಲಿನ ಕಾನೂನು-ಸುವ್ಯವಸ್ಥೆ ನಿರ್ವಹಣೆಯನ್ನು ಈಗಿನಿಂದಲೇ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ನಿರ್ವಹಿಸುವ ಮೂಲಕ, ನಗರ ವ್ಯಾಪ್ತಿಗೆ ಮತ್ತಷ್ಟು ವ್ಯಾಪ್ತಿ ಸಿಕ್ಕಂತಾಗಿದೆ.
ವಿಶೇಷವಾಗಿ ಪ್ರತಿವರ್ಷವೂ ಇಡೀ ರಾಜ್ಯದಲ್ಲಿ ಅಪರಾಧ ಪ್ರಕರಣಗಳಲ್ಲಿ ನಂಬರ್ ಒನ್ ಎನ್ನಿಸಿಕೊಂಡಿದ್ದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಹೆಸರು ಇಲ್ಲದಂತೆ ಮಾಯವಾಗಿದೆ.ಮಾದನಾಯಕನಹಳ್ಳಿ ವ್ಯಾಪ್ತಿಯನ್ನ ಬಾಗಲಗುಂಟೆ ಪೊಲೀಸ್ ಠಾಣೆ ಹಾಗೂ ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿಸಲಾಗಿದೆ.
ಮಾಹಿತಿ ಪ್ರಕಾರ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಗರಕ್ಕೆ ಹೊಂದಿಕೊಂಡಂತೆ 77 ಹಳ್ಳಿಗಳು, 35ಕ್ಕೂ ಹೆಚ್ಚು ಲೇಔಟ್‌ಗಳು, 10ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು ವಾಸಿಸುವ ಐಷಾರಾಮಿ ಅಪಾರ್ಟೆಂಟ್‌ಗಳು ಸೇರಿದಂತೆ ಸುಮಾರು 5ಲಕ್ಷಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ.
ಇನ್ನೂ ಪೊಲೀಸ್ ಠಾಣೆ ನಿರ್ಮಾಣ ಮಾಡಲು ನಿರ್ದಿಷ್ಟ ಜನಸಂಖ್ಯೆಯು ಭಾರತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಆದಾಗ್ಯೂ, ಭಾರತ ಸರ್ಕಾರವು ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಸಾಮಾನ್ಯ ಮಾರ್ಗಸೂಚಿಗಳನ್ನು ನೀಡಿದೆ.ಇದರ ಬೆನ್ನಲ್ಲೇ ಬೆಂಗಳೂರಿನ ಪೊಲೀಸ್ ಠಾಣೆ ವ್ಯಾಪ್ತಿಯೂ ಕಮಿಷನರ್ ವ್ಯಾಪ್ತಿಗೆ ವಿಸ್ತರಣೆಯಾಗಿದೆ.
ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
| Reported by: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ





