IPL 2026: ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗೋ ಮುನ್ನ ಈ ಪಾರ್ಕಿಂಗ್ ಲಿಸ್ಟ್ ನೋಡಿ-ಇಲ್ಲದಿದ್ರೆ ದಂಡ ಫಿಕ್ಸ್

Untitled design 2026 03 24T215055.665

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ (IPL) ಅಬ್ಬರ ಶುರುವಾಗಿದೆ. ಮಾರ್ಚ್ 28 ಮತ್ತು ಏಪ್ರಿಲ್ 4 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತ ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬೆಂಗಳೂರು ಸಂಚಾರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಸ್ಟೇಡಿಯಂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ 

ಪಂದ್ಯ ನಡೆಯುವ ದಿನಗಳಂದು ಕ್ರೀಡಾಂಗಣದ ಸುತ್ತಮುತ್ತಲಿನ ಈ ಕೆಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ:

ವಾಹನ ನಿಲುಗಡೆಗೆ ಎಲ್ಲಿ ಅವಕಾಶವಿದೆ ? 

ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗ್ಗೆ 11ರಿಂದ ರಾತ್ರಿ 9ರ ವರೆಗೆ ಈ ಕೆಳಗಿನ ಸ್ಥಳಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ:

  1. ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ (ಸಿದ್ದಲಿಂಗಯ್ಯ ವೃತ್ತದ ಬಳಿ).

  2. ಸೇಂಟ್ ಜೋಸೆಫ್ ಯುರೋಪಿಯನ್ ಸ್ಕೂಲ್ ಮೈದಾನ (ಮ್ಯೂಸಿಯಂ ರಸ್ತೆ).

  3. ಫ್ರೀಡಂ ಪಾರ್ಕ್ ಎಂಎಲ್‌ಸಿಪಿ (ಬಹುಮಡಿ ವಾಹನ ನಿಲುಗಡೆ ಸಂಕೀರ್ಣ).

  4. ಗರುಡ ಮಾಲ್ ಮತ್ತು ಯುಬಿಸಿಟಿ (UB City) ಪಾರ್ಕಿಂಗ್ ಸ್ಥಳಗಳು.

  5. ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿ.

ಸ್ಟೇಡಿಯಂ ಪ್ರವೇಶಕ್ಕೆ ಯಾವ ಗೇಟ್ ಬಳಸಬೇಕು ?

ಪಂದ್ಯ ನೋಡಲು ಬರುವ ಅಭಿಮಾನಿಗಳು ಸಂಚಾರ ಪೊಲೀಸರೊಂದಿಗೆ ಸಹಕರಿಸಲು ಮತ್ತು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಯನ್ನು (ಮೆಟ್ರೋ/ಬಸ್) ಬಳಸಲು ಮನವಿ ಮಾಡಲಾಗಿದೆ.

Exit mobile version