ಕಲಬುರಗಿಯಲ್ಲಿ ವರುಣನ ಅಟ್ಟಹಾಸ: ಸಿಡಿಲು ಬಡಿದು ರೈತ ಸಾ*ವು

Untitled design 2026 03 24T231328.539

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಕೆಲವು ಗಂಟೆಗಳಿಂದ ಸುರಿಯುತ್ತಿರುವ ಭೀಕರ ಗುಡುಗು ಸಹಿತ ಮಳೆಗೆ ಮೊದಲ ಬಲಿ ಸಂಭವಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಬೆನ್ನಲ್ಲೇ ಕಲಬುರಗಿಯ ಹಲವೆಡೆ ವರುಣನ ಆರ್ಭಟ ಜೋರಾಗಿದ್ದು, ಸಿಡಿಲು ಬಡಿದು ಯುವ ರೈತನೊಬ್ಬ ಸಾವನ್ನಪ್ಪಿದ್ದಾರೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಾದಿಪುರ ತಾಂಡಾದಲ್ಲಿ ಈ ಕರುಣಾಜನಕ ಘಟನೆ ನಡೆದಿದೆ. ಮೃತಪಟ್ಟ ರೈತನನ್ನು ಮಹೇಶ್ ಚವ್ಹಾಣ (24) ಎಂದು ಗುರುತಿಸಲಾಗಿದೆ. ಎಂದಿನಂತೆ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ, ಹಠಾತ್ ಆಗಿ ಕಾಣಿಸಿಕೊಂಡ ಗುಡುಗು-ಮಿಂಚಿನ ನಡುವೆ ಸಿಡಿಲು ಅಪ್ಪಳಿಸಿದೆ. ಇದರ ತೀವ್ರತೆಗೆ ಮಹೇಶ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತ ಮತ್ತು ಸುಳಿಗಾಳಿಯ ಪರಿಣಾಮವಾಗಿ ಕರ್ನಾಟಕದಲ್ಲಿ ಮುಂದಿನ 4 ರಿಂದ 5 ದಿನಗಳ ಕಾಲ ಸತತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಸಿದೆ. ಮಾರ್ಚ್ 28ರ ವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಕೇವಲ ಮಳೆಯಷ್ಟೇ ಅಲ್ಲದೆ, ಆಲಿಕಲ್ಲು ಮಳೆಯಾಗುವ ಸಾಧ್ಯತೆಯೂ ದಟ್ಟವಾಗಿದೆ. ಗಾಳಿಯ ವೇಗ ಹೆಚ್ಚಿರಲಿದ್ದು, ಗುಡುಗು ಮತ್ತು ಮಿಂಚಿನ ಆರ್ಭಟ ತೀವ್ರವಾಗಿರಲಿದೆ ಎಂದು ವರದಿಯಾಗಿದೆ.

ಎಲ್ಲೆಲ್ಲಿ ಮಳೆಯಾಗಲಿದೆ ? 

ಹವಾಮಾನ ಇಲಾಖೆಯು ರೈತರಿಗೆ ಮತ್ತು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ. ಗುಡುಗು ಸದ್ದು ಕೇಳಿದ ಕೂಡಲೇ ಮರಗಳ ಕೆಳಗೆ ಅಥವಾ ಬಯಲು ಪ್ರದೇಶದಲ್ಲಿ ನಿಲ್ಲದೆ ಸುರಕ್ಷಿತ ಕಟ್ಟಡಗಳ ಆಶ್ರಯ ಪಡೆಯುವಂತೆ ಮನವಿ ಮಾಡಲಾಗಿದೆ.

Exit mobile version