ಮುಸ್ಲಿಂನಲ್ಲಿ ಮುಂದಿನ ಜನ್ಮ ಇಲ್ಲಾರೀ, ಇಲ್ಲಿ ಬಾಂಬ್ ಹಾಕಿ ಹೋದ್ರೆ ಸ್ವರ್ಗದಲ್ಲಿ ಸುಂದರಿಯರು ಸಿಗ್ತಾರಂತೆ: ಯತ್ನಾಳ್‌

ಮುಸ್ಲಿಂ ಸಮುದಾಯ, ಕಾಂಗ್ರೆಸ್ ವಿರುದ್ಧ ಯತ್ನಾಳ್‌ ಆಕ್ರೋಶ!

Your paragraph text (1)

ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ಶಾಸಕ ಸಂಗಮೇಶ್‌ರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಧರ್ಮ, ರಾಜಕೀಯ ಮತ್ತು ಆಡಳಿತದ ವಿರುದ್ಧ ತೀಕ್ಷ್ಣವಾಗಿ ಕಿಡಿಕಾರಿರುವ ಯತ್ನಾಳ್, ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯತ್ನಾಳ್, ಕಾಂಗ್ರೆಸ್ ಶಾಸಕ ಸಂಗಮೇಶ್‌ರ “ಮುಂದಿನ ಜನ್ಮ” ಕುರಿತ ಹೇಳಿಕೆಯನ್ನು ಟೀಕಿಸಿದ್ದು, “ಮುಸ್ಲಿಂ ಧರ್ಮದಲ್ಲಿ ಮುಂದಿನ ಜನ್ಮದ ನಂಬಿಕೆ ಇಲ್ಲ. ಇಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮಾಡಿ, ಬಾಂಬ್ ಹಾಕಿದರೆ ಸ್ವರ್ಗದಲ್ಲಿ 72 ಸುಂದರ ಕನ್ಯೆಯರು ಸಿಗುತ್ತಾರೆ ಎಂಬ ನಂಬಿಕೆ ಇದೆ. ಈ ಕನ್ಯೆಯರು 34 ಅಡಿ ಎತ್ತರ ಇರುತ್ತಾರೆ, ಇವರನ್ನು ಕತ್ತೆತ್ತಿ ನೋಡಬೇಕು. ಸಂಗಮೇಶ್ ಈಗಲೇ ಇಸ್ಲಾಂ ಧರ್ಮಕ್ಕೆ ಸೇರಿಕೊಳ್ಳಲಿ, ಸಲಾದ್ದುನ್ ಖಿಲ್ಜಿ ಅಥವಾ ಸಲ್ಮಾನ್ ಖಾನ್ ಎಂದು ಹೆಸರು ಬದಲಾಯಿಸಿಕೊಳ್ಳಲಿ. ಸಿಎಂ ಸಿದ್ದರಾಮಯ್ಯ ಕೂಡ ಇಸ್ಲಾಂಗೆ ಸೇರಿಕೊಂಡರೆ, ಹಿಂದೂ ಸಮಾಜ ಶಾಂತವಾಗಿರುತ್ತದೆ,” ಎಂದು ವ್ಯಂಗ್ಯವಾಡಿದ್ದಾರೆ.

ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶ:

ಯತ್ನಾಳ್ ತಮ್ಮ ಭಾಷಣದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ, “ಮುಸ್ಲಿಂ ಗುಂಪುಗಳು ಕಲ್ಲು ತೂರಾಟ ನಡೆಸಿವೆ, ಮಕ್ಕಳು ಸಹ ಅಸಭ್ಯ ವರ್ತನೆ ತೋರಿದ್ದಾರೆ. ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ತಪ್ಪು ಅವರದಾದರೂ, ಕ್ರಮಗಳು ಹಿಂದೂಗಳ ವಿರುದ್ಧವೇ ಇವೆ. ರಾಜ್ಯದಲ್ಲಿ ಔರಂಗಜೇಬನ ಆಡಳಿತ ಇರುವಂತಾಗಿದೆ, ಇದು ಶೀಘ್ರದಲ್ಲಿ ಕೊನೆಗೊಳ್ಳಲಿದೆ,” ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಸಿ.ಟಿ. ರವಿ ಪ್ರಕರಣದ ಕುರಿತು:

ತಮ್ಮ ಮೇಲಿನ ಕಾನೂನು ಕ್ರಮಗಳ ಬಗ್ಗೆ ಮಾತನಾಡಿದ ಯತ್ನಾಳ್, “ನನ್ನ ಮೇಲೆ 70ಕ್ಕೂ ಹೆಚ್ಚು ಕೇಸ್‌ಗಳಿವೆ. ಆದರೆ, ನಾನು ಭಯಪಡುವುದಿಲ್ಲ, ಅಂಜಿಕೊಳ್ಳುವುದಿಲ್ಲ. ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡದಿರುವ ಪ್ರಶ್ನೆಯೇ ಇಲ್ಲ,” ಎಂದು ಸ್ಪಷ್ಟಪಡಿಸಿದರು.

ಮದ್ದೂರಿನ ಹೋರಾಟ:

ಮದ್ದೂರಿನಲ್ಲಿ ನಡೆಯಲಿರುವ ಹೋರಾಟದ ಬಗ್ಗೆ ಮಾತನಾಡಿದ ಯತ್ನಾಳ್, “ಕರ್ನಾಟಕದ ಜನತೆ ಬಿಜೆಪಿಯ ಹೊಂದಾಣಿಕೆ ರಾಜಕಾರಣವನ್ನು ಒಪ್ಪುತ್ತಿಲ್ಲ. ಯೆಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಜನರ ಬೆಂಬಲ ಇದೆ ಎಂದು ಭಾವಿಸಲಾಗಿತ್ತು. ಆದರೆ, ಜನರು ಈಗ ಅವರ ಹಿಂದೆ ಇಲ್ಲ ಎಂಬುದು ಸ್ಪಷ್ಟ. ಬಿಜೆಪಿ ಹೈಕಮಾಂಡ್ ಇದನ್ನು ಅರಿತುಕೊಂಡಿದೆ. ಹೊಂದಾಣಿಕೆ ರಾಜಕಾರಣವನ್ನು ಬಿಟ್ಟು ನೈಜ ಹೋರಾಟ ನಡೆಸಬೇಕು,” ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ವಿರುದ್ಧ ಟೀಕೆ:

ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಯತ್ನಾಳ್, “ಕಾಂಗ್ರೆಸ್ ಮನೆ-ಮಠಗಳನ್ನು ಹಾಳುಮಾಡುತ್ತಿದೆ. ಹಿಂದೂಗಳನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಅಸ್ಥಿರತೆ ಸೃಷ್ಟಿಸುತ್ತಿದೆ. ಇಸ್ಲಾಂ ಎಂದರೆ ಶಾಂತಿ ಎಂದು ಸಿಎಂ ಹೇಳುತ್ತಾರೆ. ಹಾಗಾದರೆ, ಸಿಎಂ ಇಸ್ಲಾಂಗೆ ಸೇರಿಕೊಳ್ಳಲಿ, ಆಗ ಹಿಂದೂ ಸಮಾಜ ಶಾಂತವಾಗಿರುತ್ತದೆ,” ಎಂದು ಮತ್ತೊಮ್ಮೆ ವಿವಾದಾತ್ಮಕವಾಗಿ ಹೇಳಿದ್ದಾರೆ.

Exit mobile version