ವಿಶ್ವ ವಿಖ್ಯಾತ ಬೆಂಗಳೂರು ಕರಗ ಇಂದಿನಿಂದಲೇ ಆರಂಭವಾಗ್ತಿದೆ. ಇಂದಿನಿಂದ ಏಪ್ರಿಲ್ 14ರ ವರೆಗೆ ನಡೆಯಲಿರುವ ಕರಗಕ್ಕೆ ಎಲ್ಲ ತಯಾರಿ ಕೂಡ ಕರಗ ಸಮಿತಿಯಿಂದ ಆಗಿದೆ. ಇನ್ನೊಂದು ಕಡೆ ವೈಟ್ ಟ್ಯಾಪಿಂಗ್ ಹೆಸರಲ್ಲಿ ಬಿಬಿಎಂಪಿ ಆರಂಭಿಸಿರುವ ಎಸ್ಪಿ ರೋಡ್ ಕಾಮಗಾರಿ ಇನ್ನು ಕೂಡ ಮುಕ್ತಾಯವಾಗದೇ ದಿನ ಲೆಕ್ಕ ಹಾಕ್ತಿದೆ ಬಿಬಿಎಂಪಿ.
ವಿಶ್ವ ವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದಲೇ ಏಪ್ರಿಲ್ 14ರ ವರೆಗೆ ಕರಗ ಮಹೋತ್ಸವ ಹಾಗೂ ಮೆರವಣಿಗೆ ನಡೆಯಲಿದ್ದು, ಬೆಂಗಳೂರಿನ ಎಸ್ಪಿ ರೋಡ್‌ನ ಧರ್ಮರಾಯ ಮತ್ತು ದ್ರೌಪದಿ ದೇವಿಯ ನಿಮಿತ್ತ ಪ್ರತಿ ವರ್ಷವು ಈ ಕರಗ ಮಹೋತ್ಸವವು ನಡೆಯುತ್ತೆ, ಈಗಾಗಲೇ ಇಂದಿನಿಂದ ಆರಂಭವಾಗಿರುವ ಕರಗಕ್ಕೆ ಸಂಬಂಧಿಸಿದಂತೆ ತಯಾರಿ ಕೂಡ ಜೋರಾಗಿಯೇ ನಡೆಯುತ್ತಿದ್ದು, ಇನ್ನು ಬಿಬಿಎಂಪಿಯ ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣ ಕಾರ್ಯ ಇನ್ನು ಸಂಪೂರ್ಣವಾಗದೇ ಇರೋದು ಕರಗಕ್ಕೆ ಅಡ್ಡಿ ಆಗುತ್ತಾ ಅನ್ನುವ ಪ್ರಶ್ನೆ ನಿರ್ಮಾಣವಾಗಿದೆ.
ಕರಗ ಮೆರವಣಿಗೆ ಹೋಗುವ ಎಸ್ಪಿ ರೋಡ್ ಇನ್ನು ಕೂಡ ಬಿಬಿಎಂಪಿಯ ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣದಲ್ಲಿಯೇ ನಿರತವಾಗಿದೆ. ಇದರಿಂದ ಈ ಬಾರಿ ಕರಗಕ್ಕೆ ಬಿಬಿಎಂಪಿಯೇ ಅಡ್ಡಿ ಆಗುತ್ತಾ..? ಅನಾಹುತ ತಂದೋಡ್ಡುತ್ತಾ..? ಅನ್ನುವ ಪ್ರಶ್ನೆ ಎಲ್ಲರಲ್ಲೂ ಮುಡಿದೆ. ಈ ಬಗ್ಗೆ ಮಾತನಾಡಿದ ಕರಗ ಸಮಿತಿ ಅಧ್ಯಕ್ಷ ಸತೀಶ್ ಕೂಡ ಬಿಬಿಎಂಪಿ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 2 ತಿಂಗಳ ಹಿಂದೆಯೇ ರಸ್ತೆ ಕಾಮಗಾರಿ ಕುರಿತು ಬಿಬಿಎಂಪಿಯನ್ನು ಎಚ್ಚರಿಸಿದ್ದರು, ಬಿಬಿಎಂಪಿ ಕಾಮಗಾರಿ ಮುಗಿಸಿಲ್ಲ. ಇದರಿಂದ ಕರಗ ಮೆರವಣಿಗೆ ಸಮಯದಲ್ಲಿ ಆಗುವ ಅನಾಹುತಕ್ಕೆ ಬಿಬಿಎಂಪಿ ನೆರಹೊಣೆ ಆಗುತ್ತೆ ಎಂದು ಕಿಡಿಕಾರಿದ್ದಾರೆ.
ಇನ್ನು ಒಂದ್ ಕಡೆ ರಸ್ತೆ ಕಾಮಗಾರಿಯಿಂದ ಕರಗಕ್ಕೆ ಅಡ್ಡಿ ಆಗಿರುವ ಬಿಬಿಎಂಪಿ, ಇನ್ನೊಂದು ಕಡೆಯಿಂದ ಚರಂಡಿ ವ್ಯವಸ್ಥೆಯ ಎಡವಟ್ಟಿನ ಕೆಲಸ ಮಾಡಿದೆ. ಎಸ್ಪಿ ರೋಡ್‌ನ ವೈಟ್ ಟ್ಯಾಪಿಂಗ್ ಕಾಮಗಾರಿ ಮುಗಿಸುವ ಗಡಿಬಿಡಿಯಲ್ಲಿ ಬಿಬಿಎಂಪಿಯ ದಾಸಪ್ಪ ಆಸ್ಪತ್ರೆಯ ಸ್ಯಾನಿಟರಿ ನೀರು ಹೋಗುವ ವ್ಯವಸ್ತೆಯನ್ನು ಸರಿಯಾಗಿ ಮಾಡದೇ, ಆಸ್ಪತ್ರೆಯ ಸ್ಯಾನಿಟರಿ ನೀರು ಲೀಕೆಜ್ ಆಗಿ ರಸ್ತೆ ತುಂಬೆಲ್ಲಾ ಹರಿದಾಡುವ ರೀತಿ ಆಗಿದೆ.
ಒಟ್ಟಾರೆಯಾಗಿ ಇಂದಿನಿಂದ ಆರಂಭ ಆಗಿರುವ ಬೆಂಗಳೂರು ಕರಾಗಕ್ಕೆ ಬಿಬಿಎಂಪಿ ರಸ್ತೆ ಮತ್ತು ಚರಂಡಿ ಕಾಮಗಾರಿಯ ಎಡವಟ್ಟಿನಿಂದ ವಿಶ್ವ ವಿಖ್ಯಾತ ಕರಗ ಸಂಪ್ರಾದಯಕ್ಕೆ ಯಾವುದೇ ತೊಂದರೆ ಆಗದೇ ಇರುವ ರೀತಿಯಲ್ಲಿ ಕರಗ ಸಮಿತಿ ಮತ್ತು ಬೆಂಗಳೂರಿನ ಜಿಲ್ಲಾಧಿಕಾರಿ ಇದರ ಬಗ್ಗೆ ಗಮನ ಹರಿಸಿ, ಕರಗ ಮಹೋತ್ಸವದಲ್ಲಿ ಯಾವುದೇ ಅನಾಹುತ ಆಗದೇ ಇರಲಿ ಅನ್ನೋದು ನಮ್ಮ ಗ್ಯಾರಂಟಿ ನ್ಯೂಸ್ನ ಆಶಯ.