ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.
ಬೆಂಗಳೂರಿನ ಹೃದಯಭಾಗದಲ್ಲಿ ಇರುವ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆ ಯಾಗಿದೆ. 2023ರ ವಿಧಾನಸಭಾ ಫಲಿತಾಂಶವನ್ನು ನೋಡುವುದಾದರೆ ಬಿಜೆಪಿಯ ಅಶ್ವತ್ಥ್ ನಾರಾಯಣ 80,606 (63.72%) ಮತ ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ನ ಅಭ್ಯರ್ಥಿ ಅನೂಪ್ ಅಯ್ಯಂಗಾರ್ 39,304 (31.07%), ಜೆಡಿಎಸ್ ನ ಉತ್ಕರ್ಷ್ -2640 (01.28%) ಮತ ಗಳಿಸಿದ್ದರು.
ಮಲ್ಲೇಶ್ವರಂ ಕ್ಷೇತ್ರದ ಚಿತ್ರಣ..
ಬಿಜೆಪಿ ರಾಜ್ಯ ಕಚೇರಿ ಇರುವ ಕ್ಷೇತ್ರವಾಗಿರುವುದರಿಂದ ಇಲ್ಲಿ ಬಿಜೆಪಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಜೊತೆಗೆ ಬೆಂಗಳೂರಿನ ಹೃದಯಭಾಗ ಇದಾಗಿದೆ. ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಗೆಲುವು ಸಾಧಿಸುತ್ತ ಬಂದಿದ್ದು, ಶಾಸಕ ಅಶ್ವತ್ಥ್ ನಾರಾಯಣ ಕ್ಷೇತ್ರದಲ್ಲಿ ಜನಮನ್ನಣೆ ಪಡೆದಿದ್ದರೆ. ಇವರಿಗೆ ಕಾಂಗ್ರೆಸ್ ನಿಂದ ಪ್ರಬಲ ಅಭ್ಯರ್ಥಿಗಳ ಕೊರತೆ ಇದ್ದು, ಪದೇ ಪದೇ ಕೈ ಅಭ್ಯರ್ಥಿಗಳ ಬದಲಾವಣೆ ಬಿಜೆಪಿಗೆ ಲಾಭವಾಗಿ ಪರಿಣಮಿಸಿದೆ.
ಮಲ್ಲೇಶ್ವರಂನಲ್ಲಿ ಹೇಗಿದೆ ಮೂಡ್.?
ಮಾಜಿ ಡಿಸಿಎಂ ಆಗಿರುವ ಅಶ್ವತ್ಥ್ ನಾರಾಯಣರವರು ರಾಜಕೀಯವಾಗಿ ಪ್ರಾಬಲ್ಯ ಹೊಂದಿದ್ದು ವಿರೋಧ ಪಕ್ಷಗಳಿಗೆ ಸದನದಲ್ಲಿ ಮತ್ತು ಹೊರಗೂ ನಿರಂತರ ಧ್ವನಿ ಎತ್ತಿ ಪಕ್ಷವನ್ನು ಸಮರ್ಥಿಸಿಕೊಳ್ಳುತ್ತಾರೆ. ವಿವಾದಗಳಿಂದ ದೂರ ಇರುವ ಅಶ್ವತ್ಥ್ ನಾರಾಯಣ, ಹಿಂದುತ್ವದ ವಿಚಾರ ಬಂದರೆ ಯಾವುದೇ ರಾಜಿ ಆಗುವಿದಿಲ್ಲ. ಜೊತೆ ತಮ್ಮ ಹೋರಾಟಗಳಿಂದಲೇ ಮತದಾರರನ್ನು ಸೆಳೆಯುತ್ತಾರೆ. ಬಿಜೆಪಿ – ಜೆಡಿಎಸ್ ಮೈತ್ರಿ ಮುಂದುವರೆದರೆ ಬಿಜೆಪಿಗೆ ಹೆಚ್ಚು ಲಾಭವಾಗಲಿದೆ. ಮಲ್ಲೇಶ್ವರಂ ಜನರಿಗೆ ಕಾಂಗ್ರೆಸ್ ಮಳೆ ಅಷ್ಟು ಒಲವು ಇಲ್ಲ. ಕೈ ನಾಯಕರ ನಡುವಿನ ಟಿಕೆಟ್ ಕಿತ್ತಾಟದಿಂದ ಮತಬ್ಯಾಂಕ್ ನ ಕೊರತೆ ಸಹ ಇಲ್ಲಿ ನೋಡಬಹುದು.
ಗ್ಯಾರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ ಸರ್ವೆ ಪ್ರಕಾರ ಈಗಲೂ ಮಲ್ಲೇಶ್ವರಂ ಕ್ಷೇತ್ರದ ಜನ ಬಿಜೆಪಿ ಪರ ಒಲವು ಹೊಂದಿದ್ದಾರೆ.
ಮಲ್ಲೇಶ್ವರಂ ಕ್ಷೇತ್ರದ ಆಕಾಂಕ್ಷಿಗಳು ಯಾರು.?
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳನ್ನೂ ನೋಡುವುದಾದರೆ ಬಿಜೆಪಿಯಿಂದ ಹಾಲಿ ಶಾಸಕ ಅಶ್ವತ್ಥ್ ನಾರಾಯಣ, ಕಾಂಗ್ರೆಸ್ ಪಕ್ಷದಿಂದ ಬಿ.ಕೆ. ಶಿವರಾಂ ಹಾಗೂ ಅನೂಪ್ ಅಯ್ಯಂಗಾರ್ ನಡುವೆ ಪೈಪೋಟಿ ಇದೆ. ಜೆಡಿಎಸ್ ಸರ್ಧೆ ಮಾಡಿದರೆ ಕಳೆದ ಬಾರಿ ಸರ್ಧೆ ಮಾಡಿ ಸೋಲು ಕಂಡಿದ್ದ ಉತ್ಕರ್ಷ್ ಮತ್ತೆ ಕಣಕ್ಕೆ ಇಳಿಯಲು ಸಿದ್ಧತೆ ನಡೆಸುತ್ತಿದ್ದಾರೆ.
