ಭಾರತದ ಪ್ರೆಸೆಂಟ್ ರೆವೆಲ್ಯೂಷನರಿ ಲೀಡರ್‌ಗಳಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಬುಲ್ಡೋಜರ್ ಬಾಬಾ ಅಂತಲೇ ಖ್ಯಾತಿ ಪಡೆದಿರೋ ಯೋಗಿ ಕುರಿತ ಸಿನಿಮಾವೊಂದು ಇದೀಗ ಬೆಳ್ಳಿತೆರೆ ಬೆಳಕೋಗೆ ಸಜ್ಜಾಗಿದೆ.
ಬೆಳ್ಳಿತೆರೆಗೆ ಕ್ರಾಂತಿಕಾರಿ ನಾಯಕ ಬುಲ್ಡೋಜರ್ ಬಾಬಾ ಕಥೆ
ಇದು ಹಿಂದೂ ಮಾಂಕ್ ಸಿಎಂ ಆದ ಡೇರ್ ಡೆವಿಲ್ ಜರ್ನಿ
ಸದ್ಯ ಪ್ರಪಂಚದಲ್ಲಿಯೇ ಭಾರತ ಒನ್ ಆಫ್ ದಿ ಪವರ್‌ಫುಲ್ ನೇಷನ್. ನಾವು ದಶಕಗಳಿಂದ ಮುಂದುವರೆಯುತ್ತಿರುವ ದೇಶ ಅಂತ ಹೇಳಿ ಹೇಳಿ, ಡೆವೆಲಪ್ ಆದ ಬಳಿಕವೂ ಅದನ್ನೇ ಹೇಳ್ತಿದ್ದೀವಿ. ಆದ್ರೆ ರಾಜಕೀಯವಾಗಿ, ಆರ್ಥಿಕವಾಗಿ, ತಾಂತ್ರಿಕವಾ ಗಿ, ಡಿಫೆನ್ಸ್ ಸೇರಿದಂತೆ ಸಾಕಷ್ಟು ದೊಡ್ಡ ಮಟ್ಟಕ್ಕೆ ದೈತ್ಯವಾಗಿ ಬೆಳೆದು ನಿಂತಿದ್ದೇವೆ. ಎಲ್ಲಕ್ಕಿಂತ ಮಿಗಿಲಾಗಿ ಮೋದಿ ಸಿಕ್ಕಾಪಟ್ಟೆ ಪವರ್‌ಫುಲ್ ಲೀಡರ್ ಆಗಿ ವಿಶ್ವದಲ್ಲಿ ಬಹುದೊಡ್ಡ ಛಾಪು ಮೂಡಿಸುತ್ತಿದ್ದಾರೆ. ಅವ್ರ ಹಿಂದಿನ ಶಕ್ತಿಗಳಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೂಡ ಒಬ್ರು.
ADVERTISEMENT
ADVERTISEMENT
ಹೌದು, ಮೋದಿ ಬಳಿಕ ಪಿಎಂ ಯಾರಾಗ್ತಾರೆ ಅಂತ ಕೇಳಿದ್ರೆ ಯೋಗಿ ಆದಿತ್ಯನಾಥ್ ಕಡೆ ಬೆರಳು ತೋರಿಸ್ತಾರೆ ಜನ. ಅಷ್ಟರ ಮಟ್ಟಿಗೆ ಜನ ಮನ್ನಣೆ ಪಡೆದಿದ್ದಾರೆ ಯೋಗಿ. ಅದಕ್ಕೆ ಕಾರಣ ಆತನ ಸಿದ್ದಾಂತಗಳು, ಬೆಳೆದು ಬಂದ ಹಾದಿ, ಡೇರ್ ಡೆವಿಲ್ ಐಡಿಯಾಗಳು ಹಾಗೂ ಅದನ್ನ ಎಕ್ಸಿಕ್ಯೂಟ್ ಮಾಡ್ತಿರೋ ಪರಿ. ಉತ್ತರಖಂಡ್‌ನ ಗಡ್ವಾಲಿ ರಜಪೂರ್ ಕುಟುಂಬದಲ್ಲಿ ಜನಿಸಿದ ಯೋಗಿಯ ಮೂಲ ಹೆಸರು ಅಜಯ್ ಸಿಂಗ್ ಬಿಷ್ಟ್. ಬಿಎಸ್ಸಿ ಪದವೀಧರ ಯೋಗಿ, 22ನೇ ವಯಸ್ಸಿಗೆ ಮನೆ ತೊರೆದು ಬಂದು ಗೋರಖ್‌ಪುರದಲ್ಲಿ ಸನ್ಯಾಸತ್ವ ಸ್ವೀಕರಿಸಿದ್ರು. ಅಯೋಧ್ಯೆಯ ರಾಮಜನ್ಮ ಭೂಮಿ ಚಳವಳಿಯಲ್ಲಿ ಭಾಗಿಯಾಗಿ, ತನ್ನ ಪ್ರಚೋದನಾತ್ಮಕ ಭಾಷಣಗಳಿಂದ ಯೋಗಿ ಹೊಸ ಅಧ್ಯಾಯ ಶುರು ಮಾಡ್ತಾರೆ. ಸದ್ಯ ಸಿಎಂ ಆಗಿದ್ದು, ಮುಂದೆ ಪಿಎಂ ಆಗುವ ಎಲ್ಲಾ ಲಕ್ಷಣಗಳಿವೆ.
ಯುಪಿನಲ್ಲಿ ರೌಡಿಸಂನ ಬುಡ ಸಮೇತ ಕಿತ್ತು ಎಸೆಯಲು ಯೋಗಿ ಡೇರಿಂಗ್ ನಿರ್ಧಾರಗಳನ್ನು ತೆಗೆದುಕೊಂಡರು. ಯಾರಾದ್ರೂ ದಾರಿ ತಪ್ಪಿದ್ರೆ, ಕಾನೂನಿನ ಚೌಕಟ್ಟು ಮೀರಿದ್ರೆ, ಬುಲ್ಡೋಜರ್‌ನಲ್ಲಿ ನೆಲಸಮ ಮಾಡಿಬಿಡ್ತಾರೆ ಈ ಬುಲ್ಡೋಜರ್ ಬಾಬಾ. ಸದ್ಯ ಇಂತಹ ಪವರ್‌ಫುಲ್ ವ್ಯಕ್ತಿಯ ಕುರಿತ ಬಯೋಪಿಕ್ ಬೆಳ್ಳಿತೆರೆ ಬೆಳಗಲು ಸಜ್ಜಾಗಿದೆ. ಅದೇ ‘ಅಜೇಯ್- ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ’. ರವೀಂದ್ರ ಗೌತಮ್ ನಿರ್ದೇಶನದ ಈ ಸಿನಿಮಾ, ಇದೇ ಆಗಸ್ಟ್ 1ಕ್ಕೆ ತೆರೆಗೆ ಬರ್ತಿದ್ದು, ಟೀಸರ್ ಸಂಚಲನ ಮೂಡಿಸುತ್ತಿದೆ. ಅನಂತ್ ಜೋಶಿ ಯೋಗಿ ಆದಿತ್ಯನಾಥ್ ಪಾತ್ರದಲ್ಲಿ ಕಾಣಸಿಗ್ತಿದ್ದು, ಪರೇಶ್ ರಾವಲ್ ಯೋಗಿಯ ಗುರುಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಿಂದೂ ಮಾಂಕ್ ಒಬ್ಬ ತನ್ನ ಬೋಲ್ಡ್ ನಿರ್ಧಾರಗಳು, ನಾಯಕತ್ವದಿಂದ ಮುಖ್ಯಮಂತ್ರಿಯಾದ ಸ್ಫೂರ್ತಿದಾಯಕ ಕಥೆ ಸಿನಿಮಾ ಥಿಯೇಟರ್‌ಗೆ ಬರ್ತಿರೋದು ಮತ್ತಷ್ಟು ಮಂದಿಗೆ ಪ್ರೇರಣೆ ಆಗಲಿದೆ.