ಪುಷ್ಪ ಅಂದ್ರೆ ಫ್ಲವರ್ ಅಲ್ಲ.. ಯಶ್‌ಗಿಂತ ದೊಡ್ಡ ಫೈಯರ್

ಅಣ್ಣಾವ್ರ ಪುಣ್ಯಭೂಮಿಯಿಂದ ಕೊತ್ತಲವಾಡಿ ಪ್ರಮೋಷನ್ಸ್

Untitled design (68)

ಪುಷ್ಪ ಅಂದ್ರೆ ಫ್ಲವರ್ ಅಂದ್ಕೊಂಡ್ರಾ..? ಫೈಯರ್ ಅನ್ನೋದು ಅಲ್ಲು ಅರ್ಜುನ್ ಡೈಲಾಗ್. ಆದ್ರೀಗ ಸ್ಯಾಂಡಲ್‌ವುಡ್ ಪ್ರೊಡ್ಯೂಸರ್ ಪುಷ್ಪ, ರಾಕಿಭಾಯ್ ಯಶ್‌‌ಗಿಂತ ದೊಡ್ಡ ಫೈಯರ್ ಗುರು ಅಂತಿದೆ ಸೋಶಿಯಲ್ ಮೀಡಿಯಾ. ಅದಕ್ಕೆ ಕಾರಣ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್. ಕೊತ್ತಲವಾಡಿ ಪ್ರಮೋಷನ್ಸ್ ಕಿಕ್‌‌ಸ್ಟಾರ್ಟ್‌ ಮಾಡಿರೋ ಪುಷ್ಪ ಅವರ ಮಾತಿನ ಶೈಲಿ ಬೆಂಕಿಯಂತಿದೆ.

ಕೊತ್ತಲವಾಡಿ, ಟೀಸರ್ ಹಾಗೂ ಸಾಂಗ್ಸ್‌ನಿಂದಲೇ ನಿರೀಕ್ಷೆ ಮೂಡಿಸಿರೋ ಸಿನಿಮಾ. ದಿಯಾ ಫೇಮ್ ಪೃಥ್ವಿ ಅಂಬರ್ ಹಾಗೂ ಕಾವ್ಯ ಶೈವಾ ಜೋಡಿಯ ಈ ಸಿನಿಮಾ ಪಕ್ಕಾ ಹಳ್ಳಿ ಬ್ಯಾಕ್‌ಡ್ರಾಪ್‌‌ನಲ್ಲಿ ತಯಾರಾಗಿದೆ. ಶ್ರೀರಾಜ್ ನಿರ್ದೇಶನದ ಈ ಸಿನಿಮಾನ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಇದು ಯಶ್ ತಾಯಿ ಚೊಚ್ಚಲ ನಿರ್ಮಾಣದ ಚಿತ್ರವಾಗಿದ್ದು, ಡಾ. ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಅಂಬರೀಶ್ ಸ್ಮಾರಕಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಅಲ್ಲದೆ, ಅಪ್ಪು ಸಮಾಧಿಗೂ ನಮಸ್ಕರಿಸಿ, ಭಾವುಕರಾದ್ರು. ಯಶ್ ತಾಯಿಗೆ ನಟ ಪೃಥ್ವಿ ಅಂಬರ್ ಹಾಗೂ ನಟಿ ಕಾವ್ಯ ಶೈವಾ ಕೂಡ ಸಾಥ್ ನೀಡಿದ್ರು.

ನಟ ಯಶ್ ರೀತಿ ಇವರಿಗೂ ಒಂದು ಕ್ಲಾರಿಟಿ ಇದೆ. ಸಿನಿಮಾರಂಗದ ಮೇಲೆ ಅತೀವ ಭಕ್ತಿ, ಗೌರವ ಇದೆ. ಮುಂದಿನ ದಿನಗಳಲ್ಲಿ ಅಣ್ಣಾವ್ರ ಕುಟುಂಬದ ಬ್ಯಾನರ್‌‌ಗಳಂತೆ ಸಾಮಾಜಿಕ ಕಳಕಳಿಯ ಸಿನಿಮಾಗಳನ್ನ ನಿರ್ಮಿಸೋ ಯೋಜನೆಯಿದೆ. ಕೊತ್ತಲವಾಡಿ ಆಗಸ್ಟ್ 1ಕ್ಕೆ ತೆರೆಗೆ ಬರ್ತಿದ್ದು, ಪುಷ್ಪ ಅರುಣ್ ಕುಮಾರ್ ಚೊಚ್ಚಲ ಸಿನಿಮಾಗೆ ಯಶ್ ಗೆ ಮಾಡಿದಂತೆ ಸಪೋರ್ಟ್‌ ಮಾಡಿದ್ರೆ, ಅವರ ಸಿನಿಮೋತ್ಸಾಹ ಮತ್ತಷ್ಟು ಇಮ್ಮಡಿಯಾಗಲಿದೆ.

Exit mobile version