ವಿಕಟಕವಿ ಯೋಗರಾಜ್ ಭಟ್ ಬತ್ತಳಿಕೆಯಿಂದ ಶೃಂಗಾರದ ಹಾಡೊಂದು ಹೊರಬಂದಿದೆ. ಥೇಟ್ ರಾಕಿಂಗ್ ಸ್ಟಾರ್ ಯಶ್‌ರನ್ನ ಹೋಲುವ ಪ್ರತಿಭೆಯೊಂದನ್ನ ನೀಲಿ ಸಾಂಗ್ ಮೂಲಕ ಪರಿಚಯಿಸಿರೋ ಭಟ್ರು, ನಿಧಿ ಸುಬ್ಬಯ್ಯ ಸೌಂದರ್ಯ ಗಣಿಯನ್ನೂ ಇಂಟ್ರಡ್ಯೂಸ್ ಮಾಡಿದ್ದಾರೆ. ಇಷ್ಟಕ್ಕೂ ಹಾಡು ಹೇಗಿದೆ..? ಯಾರು ಆ ನ್ಯೂ ಟ್ಯಾಲೆಂಟ್ ಅನ್ನೋದಕ್ಕೆ ಉತ್ತರ ಇಲ್ಲಿದೆ.
- ಭಟ್ರ ಗರಡಿಯಲ್ಲಿ ಸಂಜನ್ ಕಜೆ-ನಿಧಿ ಸುಬ್ಬಯ್ಯ ಮೋಹದಾಟ
- ವಿಕಟಕವಿಯ ಮತ್ತೊಂದು ಶೃಂಗಾರ ಗೀತೆ.. VP ಗಾಯನ..!
- ಅಬ್ಬಬ್ಬಾ ನಿಧಿ ಸುಬ್ಬಯ್ಯ ಸಖತ್ ಹಾಟ್.. ಪಡ್ಡೆ ಹುಡುಗ್ರು ಫಿದಾ
- ರಾಕಿಂಗ್ ಸ್ಟಾರ್‌ನ ಹೋಲುವ ಈ ನ್ಯೂ ಟ್ಯಾಲೆಂಟ್ ಯಾರು..?
ಇದು ಹದಿಹರೆಯದ ಹುಡುಗನ ಮನಸ್ಸಿನ ಪೋಲಿ ಬಯಕೆಗಳ ನೀಲಿ ಸಾಂಗ್. ನಿನ್ನ ಕಣ್ಣು ನೀಲಿ.. ನನ್ನ ಕನಸು ನೀಲಿ ಅನ್ನೋ ಅದ್ಭುತ ಪದಪುಂಜವಿರೋ ಈ ಹಾಡಿನಲ್ಲಿ ರಾಕಿಂಗ್ ಸ್ಟಾರ್ ಯಶ್‌ನ ಹೋಲುವ ಸ್ಫುರದ್ರೂಪಿ ಅಚ್ಚ ಕನ್ನಡದ ಹುಡುಗ ಇಂಟ್ರಡ್ಯೂಸ್ ಆಗಿದ್ದಾನೆ. ಅಂದಹಾಗೆ ಆತನ ಹೆಸರು ಸಂಜನ್ ಕಜೆ. ನಿಧಿ ಸುಬ್ಬಯ್ಯ ಜೊತೆಗಿನ ರೊಮ್ಯಾಂಟಿಕ್ ಗೀತೆ ಇದಾಗಿದ್ದು, ಪಂಚರಂಗಿ ಚೆಲುವೆ ಮದ್ವೆ ಆದ್ಮೇಲೆ ಮತ್ತಷ್ಟು ಹಾಟ್ ಆಗಿ ಕಾಣ್ತಿದ್ದಾರೆ.
ಅಂದಹಾಗೆ ನೀಲಿ ಅನ್ನೋ ಈ ಶೃಂಗಾರ ಗೀತೆಯ ಸೂತ್ರಧಾರಿ ಒನ್ ಅಂಟ್ ಓನ್ಲಿ ವಿಕಟಕವಿ ಯೋಗರಾಜ್ ಭಟ್. ಹೌದು.. ಭಟ್ರು ಸಾಹಿತ್ಯ ಬರೆದು, ಅನಿರುದ್ದ್ ಶಾಸ್ತ್ರಿ ಸಂಗೀತ ಸಂಯೋಜಿಸಿರೋ ಈ ಹಾಡಿಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಗಾಯನವಿದೆ. ಇನ್ನು ಇದಕ್ಕೆ ಸಾಹಿತ್ಯ ಒದಗಿಸುವುದರ ಜೊತೆಗೆ ಇದನ್ನ ಸ್ವತಃ ತಾವೇ ನಿರ್ದೇಶನ ಕೂಡ ಮಾಡಿದ್ದಾರೆ ಭಟ್ರು.
ಮತ್ತೆ ಮೊದಲಿಂದ ಅನ್ನೋ ಟೈಟಲ್‌ನಲ್ಲಿ ನಾಲ್ಕು ಬಣ್ಣಗಳ ಅಚ್ಚ ಕನ್ನಡದ ಆಲ್ಬಮ್ ಅನ್ನೋ ಅಡಿಬರಹದೊಂದಿಗೆ ಈ ಹಾಡು ಹೊರಬಂದಿದೆ. ಸಂಜನ್ ಕಜೆ ಅನ್ನೋ ಅಪ್‌ಕಮಿಂಗ್ ಪ್ರಾಮಿಸಿಂಗ್ ಹುಡ್ಗನನ್ನು ಹೀರೋ ಆಗಿ ಲಾಂಚ್ ಮಾಡೋಕೂ ಮುನ್ನ ಮತ್ತೆ ಮೊದಲಿಂದ ಆಲ್ಬಮ್ ಗುಚ್ಚದೊಂದಿಗೆ ಇಂಟ್ರಡ್ಯೂಸ್ ಮಾಡ್ತಿದ್ದಾರೆ ಯೋಗರಾಜ್ ಭಟ್. ಮೊದಲ ಸಾಂಗ್ ನೀಲಿಯಲ್ಲಿ ನಿಧಿ ಸುಬ್ಬಯ್ಯ ಜೊತೆ ರೊಮ್ಯಾನ್ಸ್ ಮಾಡಿರೋ ಸಂಜನ್, ನೆಕ್ಸ್ಟ್ ಬರ್ತಿರೋ ವಿ ಮನೋಹರ್ ಸಂಗೀತದ ಹಾಡಿನಲ್ಲಿ ಯಾರೊಟ್ಟಿಗೆ ಮಿಂಚುತ್ತಾರೆ ಅನ್ನೋದು ನಿರೀಕ್ಷಿಸಬೇಕಿದೆ.
ನೀಲಿ ಥೀಮ್‌ನ ನೀಲಿ ಸಾಂಗ್‌ನಲ್ಲಿ ನೀಲಿ ಬಣ್ಣವೇ ಪ್ರಧಾನವಾಗಿದ್ದು, ನಿಧಿ ಬೋಲ್ಡ್ ಬ್ಯೂಟಿ ನೋಡಿ ಪಡ್ಡೆ ಹುಡುಗರು ಅಕ್ಷರಶಃ ಫಿದಾ ಆಗಿದ್ದಾರೆ. ಒಂದಲ್ಲ ಎರಡೆರಡು ಶೇಡ್‌ಗಳಲ್ಲಿ ಮಿಂಚಿರೋ ಸಂಜನ್ ಒಮ್ಮೆ ಚಾಕ್ಲೆಟ್ ಬಾಯ್, ಮತ್ತೊಮ್ಮೆ ಲೈಟ್ ಆಗಿ ಗಡ್ಡ ಬಿಟ್ಟಿರೋ ರಾಕಿಂಗ್ ಸ್ಟಾರ್ ರೀತಿ ಕಾಣಸಿಗ್ತಾರೆ. ಒಟ್ಟಾರೆ ಒಂದೊಳ್ಳೆ ಫೀಲ್ ಗುಡ್ ರೊಮ್ಯಾಂಟಿಕ್ ನಂಬರ್ ಇದಾಗಿದ್ದು, ಹೀರೋ ಆಗಿ ಲಾಂಚ್ ಆಗೋಕೆ ಸಂಜನ್ ರೆಡಿಯಾದಂತಿದೆ.
ದೊಡ್ಡ ದೊಡ್ಡ ಸ್ಟಾರ್‌ಗಳಿಗಷ್ಟೇ ಅಲ್ಲದೆ, ಬಿಡುವಿನ ಸಮಯದಲ್ಲಿ ಭಟ್ರು ಹೀಗೆ ಹೊಚ್ಚ ಹೊಸ ಪ್ರತಿಭೆಗಳಿಗೂ ಸಾಥ್ ನೀಡುವುದು ನಿಜಕ್ಕೂ ಗ್ರೇಟ್. ಹಣ ಒಂದೇ ಭಟ್ರ ಉದ್ದೇಶವಲ್ಲ. ಟ್ಯಾಲೆಂಟ್ಸ್‌ನ ಗುರ್ತಿಸಿ, ಅವರುಗಳಿಗೆ ಒಂದು ವೇದಿಕೆ ಮಾಡಿಕೊಡುವ ಗುಣ ಇದೆಯಲ್ಲಾ ಅದು ನಿಜಕ್ಕೂ ಮೆಚ್ಚುವಂಥದ್ದು ಅಂತಿದ್ದಾರೆ ಚಿತ್ರ ರಸಿಕರು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್