ಯಶ್ ಫ್ಯಾನ್ಸ್‌ಗೆ ಡಬಲ್ ಧಮಾಕ. ರಾಮಾಯಣ ಹಾಗೂ ಟಾಕ್ಸಿಕ್ ಟ್ರೈಲರ್‌ಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿದ್ದು, ನಿತ್ಯ ನಿರಂತರವಾಗಿರಲಿದೆ ರಾಕಿಂಗ್ ಸೆಲೆಬ್ರೇಷನ್. ಯೆಸ್.. ರಾಮಾಯಣ ಟ್ರೈಲರ್‌ಗೇನೋ ಮುಹೂರ್ತ ಫಿಕ್ಸ್ ಆಗಿ ಆಯ್ತು. ಅದೇ ರೀತಿ ಟಾಕ್ಸಿಕ್ ಟ್ರೈಲರ್ ಲಾಂಚ್ ಇವೆಂಟ್‌ಗೂ ಡೇಟ್ ಫೈನಲ್ ಆಗಿದೆ. ಅದು ಯಾವಾಗ..? ಎಲ್ಲಿ..? ಯಾರೆಲ್ಲಾ ಬರ್ತಾರೆ ಅನ್ನೋದ್ರ ಎಕ್ಸ್‌ಕ್ಲೂಸಿವ್ ಖಬರ್ ಇಲ್ಲಿದೆ.
- ಆ-8ಕ್ಕೆ ಟಾಕ್ಸಿಕ್ ಟ್ರೈಲರ್.. ಇವೆಂಟ್ ಎಲ್ಲಿ ಯಾರೆಲ್ಲಾ ಬರ್ತಾರೆ?
- ಕನ್ನಡ ಮಣ್ಣಿನತ್ತ ಹಾಲಿವುಡ್, ಬಾಲಿವುಡ್ ಆರ್ಟಿಸ್ಟ್, ತಂತ್ರಜ್ಞರು
- ಆ-26ಕ್ಕೆ ಗ್ಲೋಬಲ್ ಟೆರಿಟರಿಗೆ ರಾಕಿಂಗ್ ಸ್ಟಾರ್ ಟಾಕ್ಸಿಕ್ ವರ್ಲ್ಡ್
- ಪ್ಯಾಲೇಸ್ ಗ್ರೌಂಡ್‌ನಲ್ಲಿ ಪ್ರೀ-ರಿಲೀಸ್ ಇವೆಂಟ್‌ಗೆ ಕೌಂಟ್ಡೌನ್
ಕನ್ನಡ ಚಿತ್ರರಂಗದ ಮೊನಾರ್ಕ್ ಮಿಸ್ಟರ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಎರಡೆರಡು ಗ್ಲೋಬಲ್ ಸಿನಿಮಾಗಳ ಟ್ರೈಲರ್‌ಗಳು ಬ್ಯಾಕ್ ಟು ಬ್ಯಾಕ್ ರಂಜಿಸೋಕೆ ಬರ್ತಿವೆ. ಯೆಸ್.. ನಿನ್ನೆ ನಾವು ನಮ್ಮ ಗ್ಯಾರಂಟಿ ಪಿಚ್ಚರ್ ಕಾರ್ಯಕ್ರಮದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಹೇಳಿದಂತೆ ಸ್ಪೈಡರ್‌ಮ್ಯಾನ್ ಚಿತ್ರದ ಜೊತೆ ಜೊತೆಗೆ ರಾಮಾಯಣ ಸಿನಿಮಾ ಟ್ರೈಲರ್ ಅನಾವರಣಗೊಳ್ಳಲಿದೆ. ನಾವು ಹೇಳಿದ ಬಳಿಕ ಖುದ್ದು ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಅಫಿಶಿಯಲಿ ಇದೇ ಜುಲೈ 30ರ ಮುಂಜಾನೆ 4.15ರ ಬ್ರಹ್ಮ ಮುಹೂರ್ತದಲ್ಲಿ ರಿಲೀಸ್ ಆಗಲಿದೆ ಅಂತ ಅನೌನ್ಸ್ ಮಾಡಿದ್ದಾರೆ.
ಇದೀಗ ರಾಮಾಯಣ ಟ್ರೈಲರ್ ಝಲಕ್ ನ್ಯೂಸ್ ಬೆನ್ನಲ್ಲೇ ಮತ್ತೊಂದು ಬಿಗ್ ಬ್ರೇಕಿಂಗ್ ಸುದ್ದಿ ಹೊರಬೀಳುತ್ತಿದೆ. ಅದೇನಪ್ಪಾ ಅಂದ್ರೆ ಇದೇ ಆಗಸ್ಟ್ 26ಕ್ಕೆ ತೆರೆಗೆ ಬರ್ತಿರೋ ಪಕ್ಕಾ ಯೂತ್‌ಫುಲ್ & ಅಡಲ್ಟ್ ಮೂವಿ ಟಾಕ್ಸಿಕ್ ಟ್ರೈಲರ್‌ಗೂ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 8ರಂದು ಟಾಕ್ಸಿಕ್ ಹೈ ವೋಲ್ಟೇಜ್ ಟ್ರೈಲರ್ ರಿವೀಲ್ ಆಗಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ಯಶ್ ಸಹ ನಿರ್ಮಾಣ ಮಾಡಿರೋ ಟಾಕ್ಸಿಕ್ ಎಲ್ಲಾ ದಾಖಲೆಗಳನ್ನ ಸರಿಗಟ್ಟಿ ಸಾರ್ವಕಾಲಿಕ ಐತಿಹಾಸಿಕ ದಾಖಲೆ ನಿರ್ಮಿಸಲು ಕಾತರಗೊಂಡಿದೆ.
ಅಂದಹಾಗೆ ಟಾಕ್ಸಿಕ್ ಟ್ರೈಲರ್ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ರಿಲೀಸ್ ಆಗಲಿದೆ. ಯಶ್ ಈ ಹಿಂದೆ ನುಡಿದಂತೆ.. ತಮ್ಮ ಮಾತನ್ನ ಉಳಿಸಿಕೊಳ್ತಿದ್ದಾರೆ. ನಾನು ಎಲ್ಲೂ ಹೋಗಲ್ಲ. ಎಲ್ಲರನ್ನೂ ಇಲ್ಲಿಗೇ ಕರೆಸ್ತೀನಿ ಅಂದಿದ್ರು. ಆ ಮಾತು ನಿಜವಾಗೋ ಸಮಯ ಸನಿಹವಾಗ್ತಿದೆ. ಆಗಸ್ಟ್ 8ರ ಟ್ರೈಲರ್ ಲಾಂಚ್ ಹಾಗೂ ಪ್ರೀ ರಿಲೀಸ್ ಇವೆಂಟ್‌ಗೆ ಬಾಲಿವುಡ್ ಹಾಗೂ ಹಾಲಿವುಡ್‌ನ ಸ್ಟಾರ್‌ಗಳು, ಸ್ಟಾರ್ ಟೆಕ್ನಿಷಿಯನ್ಸ್ ಆಗಮಿಸ್ತಿದ್ದಾರೆ. ಅವರೆಲ್ಲಾ ನಮ್ಮ ಕನ್ನಡದ ಮಣ್ಣಿನಲ್ಲಿ ನಿಂತು ಟಾಕ್ಸಿಕ್ ಅಂತಹ ಬಿಗ್ ಕ್ಯಾನ್ವಾಸ್ ಸಿನಿಮಾದ ಭಾಗವಾಗಿರೋದ್ರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಲಿದ್ದಾರೆ.
- ಪ್ಯಾಲೇಸ್ ಗ್ರೌಂಡ್ಸ್ ಅಥ್ವಾ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಇವೆಂಟ್
- ಹೆಮ್ಮೆಯ ಕನ್ನಡಿಗ ಯಶ್‌ಗೆ ಎರಡೂ ಫೇವರಿಟ್ ಲೊಕೇಷನ್ಸ್..!
- ಆಗಸ್ಟ್ 8 ಶನಿವಾರ ಸಂಜೆ 6 ಗಂಟೆಗೆ ಮೆಗಾ ಗ್ರ್ಯಾಂಡ್ ಫಂಕ್ಷನ್
ಟಾಕ್ಸಿಕ್ ಇವೆಂಟ್ ಎಲ್ಲಿ ನಡೆಯಲಿದೆ ಅನ್ನೋದಕ್ಕೆ ಉತ್ತರ ಪ್ಯಾಲೇಸ್ ಗ್ರೌಂಡ್ಸ್ ಅಥ್ವಾ ನಂದಿ ಲಿಂಕ್ಸ್ ಗ್ರೌಂಡ್. ಹೌದು.. ಈ ಹಿಂದೆ ಯಶ್ ಕೆಜಿಎಫ್ ಚಾಪ್ಟರ್-1 ಚಿತ್ರದ ಬಳಿಕ ತಮ್ಮ ಬರ್ತ್ ಡೇನ ಪ್ಯಾನ್ ಇಂಡಿಯಾ ಫ್ಯಾನ್ಸ್ ಜೊತೆಗೆ ಅದೇ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ರು. ಸಾವಿರಾರು ಮಂದಿ ಅದಕ್ಕೆ ಸಾಕ್ಷಿ ಕೂಡ ಆಗಿದ್ರು. ಈಗ ಟಾಕ್ಸಿಕ್ ಇವೆಂಟ್ ಅದೇ ನಾಯಂಡಹಳ್ಳಿ ಜಂಕ್ಷನ್ ಬಳಿ ಇರೋ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಗ್ರ್ಯಾಂಡ್ ಆಗಿ ಆಯೋಜನೆ ಮಾಡೋ ಸಾಧ್ಯತೆಯಿದೆ.
ಮತ್ತೊಂದೆಡೆ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಇವೆಂಟ್ ಮಾಡೋ ಸಾಧ್ಯತೆಯೂ ಜೋರಿದೆ. ಹೌದು.. ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಲಕ್ಷಾಂತರ ಮಂದಿ ಫ್ಯಾನ್ಸ್ ಬಂದರೂ ಮ್ಯಾನೇಜ್ ಮಾಡುವಷ್ಟು ಪಾರ್ಕಿಂಗ್ ಹಾಗೂ ಆಸನಗಳ ವ್ಯವಸ್ಥೆ ಮಾಡಬಹುದಾಗಿದೆ. ಅಲ್ಲದೆ, ಮಿಸ್ಟರ್ & ಮಿಸೆಸ್ ರಾಮಾಚಾರಿ ವೆಡ್ಡಿಂಗ್ ಬಳಿಕ ಫ್ಯಾನ್ಸ್‌ಗಾಗಿ ಇದೇ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಸ್ಪೆಷಲ್ ರಿಸೆಪ್ಷನ್ ಆಯೋಜಿಸಿದ್ರು. ನಂತ್ರ ಅವ್ರ ರಾಯಲ್ ರಿಸೆಪ್ಷನ್ ಕೂಡ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ನೆರವೇರಿತ್ತು. ಹಾಗಾಗಿ ರಾಕಿಂಗ್ ಸ್ಟಾರ್ ಯಶ್‌ಗೆ ಪ್ಯಾಲೇಸ್ ಗ್ರೌಂಡ್ಸ್ ಕೂಡ ಫೇವರಿಟ್ ಪ್ಲೇಸ್.
ಒಟ್ಟಾರೆ ಇವೆರಡರಲ್ಲಿ ಒಂದು ಕಡೆ ಆಗಸ್ಟ್ 8, ಶನಿವಾರ ಸಂಜೆ 6 ಗಂಟೆಗೆ ಟಾಕ್ಸಿಕ್ ಗ್ರ್ಯಾಂಡ್ ಪ್ರೀ ರಿಲೀಸ್ ಕಮ್ ಟ್ರೈಲರ್ ಲಾಂಚ್ ಇವೆಂಟ್ ನಡೆಯಲಿದೆ. ಒಟ್ಟಾರೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಕನ್ನಡ ಸಿನಿಮಾವೊಂದನ್ನ ಗ್ಲೋಬಲ್ ಪ್ಲಾಟ್‌ಫಾರ್ಮ್‌ಗೆ ತೆಗೆದುಕೊಂಡು ಹೋಗ್ತಿರೋ ಪರಿ ಹೆಮ್ಮೆ ತರಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ಕೂಡ ಈ ಸಿನಿಮಾ ದಂಗಲ್, ಬಾಹುಬಲಿ, ಕೆಜಿಎಫ್, ಪುಸ್ಪ ರೆಕಾರ್ಡ್‌ಗಳನ್ನ ಧೂಳಿಪಟ ಮಾಡಲಿ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
