ಟಾಕ್ಸಿಕ್ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಟ್ರೈಲರ್ ಲಾಂಚ್ ಡೇಟ್ ಅನೌನ್ಸ್ ಮಾಡೋ ಮೂಲಕ ರಾಕಿಂಗ್ ಸ್ಟಾರ್ ಯಶ್ ರಾಕಿಂಗ್ ಖಬರ್ ಕೂಡ ನೀಡಿದ್ದಾರೆ. ವರ್ಲ್ಡ್ ವೈಡ್ ಫ್ಯಾನ್ ಫಾಲೋಯಿಂಗ್ ಹೆಚ್ಚಿಸಿಕೊಂಡಿರೋ ಹೆಮ್ಮೆಯ ಕನ್ನಡಿಗ ಯಶ್ ಒಡಿಶಾ ಡೈ ಹಾರ್ಡ್ ಫ್ಯಾನ್ ಮಾಡಿದ್ದೇನು? ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ…
- ಅಬ್ಬಬ್ಬಾ.. ನಮ್ಮ ಯಶ್ ಡೈ ಹಾರ್ಡ್ ಫ್ಯಾನ್ ಸಾಹಸ ನೋಡಿ
- 1500km ಸೈಕ್ಲಿಂಗ್.. ಒಡಿಶಾ ಟು ಮುಂಬೈ.. ಅಭಿಮಾನಿ ಆಸೆ
- ಭಟ್ರ ಮಾತು ನಿಜ.. ಮುಂಬೈನಲ್ಲಿ ಯಶ್ ಕನ್ನಡ ಸಾಮ್ರಾಜ್ಯ..!
- ಆ-8ಕ್ಕೆ ಟಾಕ್ಸಿಕ್ ಟ್ರೈಲರ್.. ರಾಕಿಂಗ್ ಸ್ಟಾರ್ ರಾಕಿಂಗ್ ಖಬರ್
ಯಶ್.. ಸದ್ಯ ವಿಶ್ವ ಸಿನಿದುನಿಯಾದ ಮೋಸ್ಟ್ ಸೆನ್ಸೇಷನಲ್ ಸೂಪರ್ ಸ್ಟಾರ್. ಟಾಕ್ಸಿಕ್ ಸಿನಿಮಾ ಇದೇ ಆಗಸ್ಟ್ 26ರಂದು ತೆರೆಗಪ್ಪಳಿಸುತ್ತಿದ್ದು, ಎಲ್ಲಡೆ ಟಾಕ್ ಆಫ್ ದಿ ಟೌನ್ ಆಗಿದೆ. ಅದ್ರಲ್ಲೂ ಗ್ಲೋಬಲ್ ಮಾರ್ಕೆಟ್‌ನಲ್ಲಿ ನೆಕ್ಸ್ಟ್ ಲೆವೆಲ್‌ನಲ್ಲಿ ಸದ್ದು ಮಾಡ್ತಿದೆ ಟಾಕ್ಸಿಕ್. ಇದೀಗ ಟ್ರೈಲರ್ ಲಾಂಚ್‌ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಇದೇ ಆಗಸ್ಟ್ 8ರಂದು ಟ್ರೈಲರ್ ಗ್ರ್ಯಾಂಡ್ ಇವೆಂಟ್ ಮೂಲಕ ಅನಾವರಣಗೊಳ್ಳಲಿದೆ.
ಅಂದಹಾಗೆ ಯಾವಾಗ ಕೆಜಿಎಫ್ ಸಿನಿಮಾ ಮಾಡಿದ್ರೋ ಆಗಲೇ ಯಶ್ ರೇಂಜ್ ಬದಲಾಗಿ ಹೋಯ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಫ್ಯಾನ್ಸ್ ಹುಟ್ಟಿಕೊಂಡರು. ಕೆಜಿಎಫ್ ಮೊದಲ ಭಾಗದ ನಂತರ ರಾಕಿಭಾಯ್ ಬರ್ತ್ ಡೇ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ನಡೆಯಿತು. ಆಗಲೇ ದೇಶದ ಮೂಲೆ ಮೂಲೆಯಿಂದ ಜನಸಾಗರ ಹರಿದು ಬಂದಿತ್ತು. ಅದು ಅಭಿಮಾನದ ಹೊಳೆಯೂ ಹೌದು. ಇದೀಗ ಯಶ್ ಡೈ ಹಾರ್ಡ್ ಫ್ಯಾನ್ ಒಬ್ಬ ತನ್ನ ನೆಚ್ಚಿನ ನಾಯಕನಟನನ್ನ ಕಾಣಲು ಬರೋಬ್ಬರಿ 1500 ಕಿಮೀ ಸೈಕಲ್ ಜಾಥಾ ಹೊರಟಿದ್ದಾನೆ.
ಯೆಸ್.. ಒಡಿಶಾ ಮೂಲದ ಅಭಿಮಾನಿಯೊಬ್ಬ ಸೈಕಲ್‌ಗೆ ಜೈ ಜಗನ್ನಾಥ ಒಡಿಶಾ ಟು ಮುಂಬೈ. ಟು ಮೀಟ್ ರಾಕಿಂಗ್ ಸ್ಟಾರ್ ಯಶ್ ಅಂತ ಬರೆದಿರೋ ಬ್ಯಾನರ್ ಕಟ್ಟಿಕೊಂಡು ನಿರಂತರವಾಗಿ ಸೈಕ್ಲಿಂಗ್ ಮಾಡ್ತಿರೋದು ವಿಶೇಷ. ಇದು ನಿಜಕ್ಕೂ ಗ್ರೇಟ್ ವಿಷಯ. ಇದನ್ನ ನೋಡ್ತಿದ್ರೆ ಯೋಗರಾಜ್ ಭಟ್ರು ಹೇಳಿದ ಮಾತು ನಿಜ ಅನಿಸ್ತಿದೆ. ಯಶ್ ಮುಂಬೈನಲ್ಲೊಂದು ಕನ್ನಡ ಸಾಮ್ರಾಜ್ಯ ಕಟ್ಟಿದ್ದಾರೆ. ಅದೇ ಕಾರಣದಿಂದ ಕನ್ನಡಿಗರಲ್ಲದೆ ಪರಭಾಷಿಗರೂ ಸಹ ನಮ್ಮ ಹೆಮ್ಮೆಯ ಕನ್ನಡಿಗನ ಬೆಳವಣಿಗೆ, ಸಿನಿಮಾ, ಸ್ವ್ಯಾಗ್‌ನ ಮೆಚ್ಚಿ ಬೇಷ್ ಅಂತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
