ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್‌ಗೆ ಎರಡು ತಿಂಗಳು ಕೂಡ ಉಳಿದಿಲ್ಲ. ಚಿತ್ರತಂಡ ಒಂದೊಂದೇ ಕಂಟೆಂಟ್‌ನ ರಿವೀಲ್ ಮಾಡ್ತಿದ್ದು.. ಯಶ್ ಯಾವಾಗ ಬೆಂಗಳೂರಿಗೆ ಬರ್ತಾರೆ..? ಕನ್ನಡದಲ್ಲಿ ಮಾತಾಡ್ತಾರೆ ಅಂತ ಕನ್ನಡಿಗರು ಕಾತರದಿಂದ ಕಾಯ್ತಿದ್ದಾರೆ. ಅಷ್ಟೇ ಅಲ್ಲ.. ಮಾತು ತಪ್ಪದ ಯಶ್, ಕರುನಾಡಿಗೆ ಬಾಲಿವುಡ್‌ನಿಂದ ಹಾಲಿವುಡ್ ತನಕ ಎಲ್ಲಾ ವುಡ್‌ಗಳ ಸ್ಟಾರ್ಸ್ ಹಾಗೂ ತಂತ್ರಜ್ಞರನ್ನ ಕರೆಸ್ತಿದ್ದಾರೆ. ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ…
- ಮಾತು ತಪ್ಪದ ಯಶ್.. ಕರುನಾಡಿನತ್ತ ‘ಟಾಕ್ಸಿಕ್’ ಟೀಂ ಯಾತ್ರೆ
- ಆಗಸ್ಟ್ 15ಕ್ಕೆ ಬೆಂಗಳೂರಲ್ಲಿ ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್..!
- ಕನ್ನಡ ಮಣ್ಣಿನತ್ತ ಬಾಲಿವುಡ್ to ಹಾಲಿವುಡ್ ಮಂದಿ ಪಯಣ
- ಕನ್ನಡದಿಂದಲೇ ತಯಾರಾಗಿರೋ ಹಾಲಿವುಡ್ ಚಿತ್ರ ಟಾಕ್ಸಿಕ್..!!
ಟಾಕ್ಸಿಕ್ ಟಾಕ್ಸಿಕ್ ಟಾಕ್ಸಿಕ್.. ಸದ್ಯ ವಿಶ್ವ ಸಿನಿದುನಿಯಾದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿಯಾಗಿ ರಾರಾಜಿಸ್ತಿರೋ ಕನ್ನಡದ ಗ್ಲೋಬಲ್ ಮೂವಿ. ಅದಕ್ಕೆ ಕಾರಣ ಯಶ್ ಸೆಂಟ್ರಿಕ್ ಟೀಸರ್‌ಗಳು ಹಾಗೂ ರೀಸೆಂಟ್ ರಿಲೀಸ್ ಆದ ಲೇಡಿಸ್ & ಲೇಡಿಸ್ ಲೇಟೆಸ್ಟ್ ಜಬರ್ದಸ್ತ್ ಟೀಸರ್. ಮಿಗಿಲಾಗಿ ಹೆಮ್ಮೆಯ ಕನ್ನಡಿಗ ಯಶ್ ನಟಿಸಿ, ಸಹ ನಿರ್ಮಾಣ ಮಾಡಿರೋ ಕನ್ನಡದ ಹಾಲಿವುಡ್ ಸಿನಿಮಾ ಅನ್ನೋ ಹೆಗ್ಗಳಿಕೆ.
ಈ ಚಿತ್ರದ ರನ್ ಟೈಂ ಬರೋಬ್ಬರಿ 3 ಗಂಟೆ 15 ನಿಮಿಷ ಅನ್ನೋ ಸುದ್ದಿಯನ್ನ ನಾವೇ ನಿಮಗೆ ನೀಡಿದ್ವಿ. ಇದೀಗ ಸಿನಿಮಾ ಇದೇ ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ಬಿಗ್ ಸ್ಕೇಲ್‌ನಲ್ಲಿ ತೆರೆಗಪ್ಪಳಿಸುತ್ತಿದ್ದು, ಬಿಡುಗಡೆಗೆ ಇನ್ನು ಎರಡು ತಿಂಗಳು ಕೂಡ ಉಳಿದಿಲ್ಲ. ಕನ್ನಡಿಗರಿಗೆ ಮಾತ್ರ ಯಶ್ ಯಾವಾಗ ಬೆಂಗಳೂರಿಗೆ ಬರ್ತಾರೆ..? ಕನ್ನಡದಲ್ಲಿ ಮಾತಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದ್ದು, ಆಗಸ್ಟ್ 15ಕ್ಕೆ ನಮ್ಮ ಬೆಂಗಳೂರಲ್ಲಿ ಗ್ರ್ಯಾಂಡ್ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಅಲ್ಲಿ ಟ್ರೈಲರ್ ಕೂಡ ಲಾಂಚ್ ಆಗಲಿದೆ ಎನ್ನಲಾಗ್ತಿದೆ.
ಹೌದು.. ಕೊಟ್ಟ ಮಾತು ತಪ್ಪದ ಯಶ್, ಆಗಸ್ಟ್ 15ಕ್ಕೆ ಬಾಲಿವುಡ್‌ನಿಂದ ಹಿಡಿದು ಹಾಲಿವುಡ್ ತನಕ ಎಲ್ಲರನ್ನೂ ನಮ್ಮೂರಿಗೇ ಕರೆಸುತ್ತಿದ್ದಾರೆ. ಟಾಕ್ಸಿಕ್‌ನಲ್ಲಿ ತಮಿಳು, ತೆಲುಗು, ಹಿಂದಿ ಹಾಗೂ ಹಾಲಿವುಡ್ ಆ್ಯಕ್ಟರ್‌ಗಳು, ತಂತ್ರಜ್ಞರು ಕೆಲಸ ಮಾಡಿದ್ದು, ಅವರೆಲ್ಲಾ ನಮ್ಮ ಕನ್ನಡದ ಮಣ್ಣಿಗೆ ಕಾಲಿಡ್ತಿದ್ದಾರೆ. ರಾಕಿಂಗ್ ಸ್ಟಾರ್ ಈ ಹಿಂದೆ ನುಡಿದಂತೆ ನಾನೆಲ್ಲೂ ಹೋಗಲ್ಲ. ಆದ್ರೆ ಎಲ್ಲರನ್ನ ಇಲ್ಲಿಗೇ ಕರೆಸುತ್ತೇನೆ ಅನ್ನೋ ಮಾತನ್ನ ನಿಜವಾಗಿಸ್ತಿರೋದು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡುವ ವಿಷಯ.
ಆ ವೇದಿಕೆಯಲ್ಲಿ ಸಿನಿಮಾದ ವಿಶೇಷತೆಗಳ ಬಗ್ಗೆ ಮಾತನಾಡಲಿದ್ದಾರೆ ಯಶ್ ಹಾಗೂ ಟೀಂ. ಸಿನಿಮಾಕಾನ್ ವೇದಿಕೆಯಿಂದ ಸಿನಿಮಾದ ಹುರುಪು ಹುಮ್ಮಸ್ಸು ಡಬಲ್ ಆಗಿದ್ದು, ಆ ನಿರೀಕ್ಷೆ ಹುಸಿಯಾಗಲ್ಲ ಅನ್ನೋ ಭರವಸೆ ಕೂಡ ಇದೆ. ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಯಶ್ ಬರೆದ ಕಥೆಗೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಸಿನಿಮಾಕಾನ್‌ನಲ್ಲಿ ಟಾಕ್ಸಿಕ್ ಗ್ಲಿಂಪ್ಸ್ ಪ್ರದರ್ಶನಗೊಂಡ ಹಿನ್ನೆಲೆ ಸಹಜವಾಗಿಯೇ ಯಶ್ ನಟನೆ & ಸ್ವ್ಯಾಗ್ ಕಣ್ತುಂಬಿಕೊಳ್ಳೋಕೆ ಇಡೀ ವಿಶ್ವ ಸಿನಿದುನಿಯಾ ಎದುರು ನೋಡ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
