ರಾಕಿಂಗ್ ಸ್ಟಾರ್ ಯಶ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಟಾಕ್ಸಿಕ್ ರಿಲೀಸ್ ಪೋಸ್ಟ್‌ಪೋನ್‌ಗೆ ಇರಾನ್-ಇಸ್ರೇಲ್ ವಾರ್ ಕಾರಣ ಎನ್ನಲಾಗಿತ್ತು. ಆದ್ರೆ ಅಸಲಿ ಮ್ಯಾಟರ್ ಬೇರೇನೇ ಇದೆ. ಕಳಪೆ ವಿಎಫ್‌ಎಕ್ಸ್ ಹಾಗೂ ಸೌಂಡ್ ಕ್ವಾಲಿಟಿ ನೋಡಿ ಯಶ್ ಅಕ್ಷರಶಃ ಶಾಕ್ ಆಗಿದ್ದಾರೆ.
ಇದೇ ಮಾರ್ಚ್ 19ಕ್ಕೆ ತೆರೆಗಪ್ಪಳಿಸಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ವರ್ಲ್ಡ್ ಕ್ಲಾಸ್ ವೆಂಚರ್ ಟಾಕ್ಸಿಕ್, ಕಾರಣಾಂತರಗಳಿಂದ ರಿಲೀಸ್ ಪೋಸ್ಟ್‌ಪೋನ್ ಆಗಿತ್ತು. ಜೂನ್ 4ಕ್ಕೆ ಬಿಡುಗಡೆ ಆಗಲಿದೆ ಅಂತ ಸ್ವತಃ ಟೀಂ ಅಫಿಶಿಯಲಿ ಅನೌನ್ಸ್ ಮಾಡಿತ್ತು. ಅದಕ್ಕೆ ಇರಾನ್-ಇಸ್ರೇಲ್ ನಡುವಿನ ಯುದ್ಧವೇ ಪ್ರಮುಖ ಕಾರಣ ಅಂದಿತ್ತು ಟೀಂ. ಆದ್ರೆ ಅಸಲಿ ರೀಸನ್ ಬೇರೇನೇ ಇದೆ. ಅದನ್ನ ಕೇಳಿದ್ರೆ ನೀವು ಅಕ್ಷರಶಃ ಬೆಚ್ಚಿ ಬೀಳ್ತೀರಾ.
ಯಶ್ ಟಾಕ್ಸಿಕ್ ಪೋಸ್ಟ್‌ಪೋನ್ ಹಿಂದಿದೆ ಬೆಚ್ಚಿ ಬೀಳುವ ಕಥೆ..!
ಕಳಪೆ VFX, ಸೌಂಡ್ ಕ್ವಾಲಿಟಿ ನೋಡಿ ಶಾಕ್ ಆದ ರಾಕಿಭಾಯ್
ಮಾ-4ರಂದು ನಡೆದ ಇಂಟರ್ನಲ್ ಸ್ಕ್ರೀನಿಂಗ್‌ನಲ್ಲಿ ಗುಟ್ಟು ರಟ್ಟು
ಟಾಕ್ಸಿಕ್ ಸಿನಿಮಾ ತಂಡ ಚಿತ್ರ ಬಿಡುಗಡೆಗೂ ಮುನ್ನ ಅಂದ್ರೆ ಇದೇ ಮಾರ್ಚ್ 4ರಂದು ತಂಡಕ್ಕಾಗಿ ಇಂಟರ್ನಲ್ ಸ್ಕ್ರೀನಿಂಗ್ ನಡೆಸಿದೆ. ಅಲ್ಲಿ ನಟ ಯಶ್ ಸಿನಿಮಾ ನೋಡಿದ ಬಳಿಕ ಸಿಕ್ಕಾಪಟ್ಟೆ ಶಾಕ್ ಆಗಿದ್ದಾರೆ. ಯಾಕಂದ್ರೆ ವಿಎಫ್‌ಎಕ್ಸ್ ತುಂಬಾ ಕಳಪೆ ಗುಣಮಟ್ಟದಿಂದ ಕೂಡಿದೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ ಚಿತ್ರದ ಆಡಿಯೋ ಗುಣಮಟ್ಟ ಕೂಡ ತುಂಬಾ ದುರ್ಬಲವಾಗಿದೆಯಂತೆ. ಆ ತಾಂತ್ರಿಕ ಸಮಸ್ಯೆ ನಿವಾರಿಸಿಕೊಂಡು ತೆರೆಗೆ ಬರೋಕೆ ಕಾಲಾವಕಾಶ ಬೇಕು. ಹಾಗಾಗಿ ದಿಢೀರ್ ಅಂತ ಯುದ್ಧದ ಕಾರಣ ನೀಡಿ ಚಿತ್ರದ ಬಿಡುಗಡೆ ಮುಂದೂಡಲಾಗಿದೆ.
ಟಾಕ್ಸಿಕ್ ಆಲ್ಬಮ್‌ನ ಮೊದಲ ಸಾಂಗ್ ತಬಾಹಿ ಕೂಡ ವಿಡಿಯೋ ಸಾಂಗ್ ರಿಲೀಸ್ ಮಾಡೋಕೆ ಪ್ಲ್ಯಾನ್ ಮಾಡಲಾಗಿತ್ತಂತೆ. ಆದ್ರೆ ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗದ ಯಶ್, ಎಡಿಟಿಂಗ್ ಪಕ್ವವಾಗಿಲ್ಲ ಅನ್ನೀ ಕಾರಣಕ್ಕೆ ಆ ಹಾಡನ್ನ ವಿಡಿಯೋ ಬದಲಿಗೆ ಆಡಿಯೋ ಬಿಡುವ ಮುಖೇನ, ಪ್ರೇಕ್ಷಕರ ಬಾಯಿಗೆ ತುಪ್ಪ ಸವರುವ ಕಾರ್ಯ ನಡೆದಿದೆ. ಚಿತ್ರತಂಡದಲ್ಲಿ ಪ್ರಮುಖ ತಂತ್ರಜ್ಞರ ಅಭಿಪ್ರಾಯ ಸಂಗ್ರಹಿಸಿ, ಸದ್ಯ ರೀ-ಎಡಿಟಿಂಗ್ ಕಾರ್ಯ ನಡೆಯುತ್ತಿದೆ ಎನ್ನಲಾಗ್ತಿದೆ. ಸೋ.. ಅದೇ ಕಾರಣಕ್ಕೆ ಟಾಕ್ಸಿಕ್ ಇನ್ನೂ ಮೂರು ತಿಂಗಳು ತಡವಾಗಿ ಬೆಳ್ಳಿತೆರೆಗೆ ಬರಲಿದೆ ಅನ್ನೋದು ಸದ್ಯದ ಟಾಕ್.
