ವಿಷ್ಣು, ಡಿಬಾಸ್ & ಅಪ್ಪು ಫ್ಯಾನ್ಸ್‌‌ನಿಂದ KD ಸೆಲೆಬ್ರೇಷನ್

KD ಸಿನಿಮಾ ನೋಡಲು 350 ಟಿಕೆಟ್ ಖರೀದಿಸಿದ ಫ್ಯಾನ್ಸ್

BeFunky collage (55)

ಕೆಡಿ..ಸ್ಯಾಂಡಲ್‌ವುಡ್‌ನ ಸದ್ಯದ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಮೂವಿ. ಧ್ರುವ-ಸುದೀಪ್, ಸಂಜಯ್ ದತ್-ಶಿಲ್ಪಾ ಶೆಟ್ಟಿ, ರವಿಚಂದ್ರನ್-ರಮೇಶ್ ಅರವಿಂದ್ ಫ್ಯಾನ್ಸ್ ಅಷ್ಟೇ ಅಲ್ಲ, ವಿಷ್ಣುದಾದಾ, ಡಿಬಾಸ್ ಹಾಗೂ ಅಪ್ಪು ಫ್ಯಾನ್ಸ್ ಕೂಡ ಸಖತ್ ಸೆಲೆಬ್ರೇಷನ್‌‌ಗೆ ಸಜ್ಜಾಗಿದ್ದಾರೆ. ಅದ್ಯಾಕೆ..? ಯಾವಾಗ..? ಹೇಗೆ ಅನ್ನೋದ್ರ ಜೊತೆಗೆ ಆನ್‌ಲೈನ್ ಟಿಕೆಟ್ಸ್ ಬುಕಿಂಗ್ ಹೇಗಿದೆ ಅನ್ನೋದ್ರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೊಂದು ಅಪರೂಪದ ಕ್ಷಣ. ಧ್ರುವ ಸರ್ಜಾ, ಪ್ರೇಮ್ ಕಾಂಬಿನೇಶನ್ ನ ‘ಕೆಡಿ’ ಚಿತ್ರಕ್ಕಾಗಿ ಕೇವಲ ಧ್ರುವ ಅಭಿಮಾನಿಗಳಷ್ಟೇ ಅಲ್ಲದೆ, ಅಭಿನಯ ಭಾರ್ಗವ ವಿಷ್ಣುವರ್ಧನ್, ಡಿ-ಬಾಸ್ ದರ್ಶನ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಕೈಜೋಡಿಸಿದ್ದಾರೆ. ಎಲ್ಲೂ ಕಾಣದ ಈ ‘ಫ್ಯಾನ್ಸ್ ಯೂನಿಟಿ’ ಈಗ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಸದ್ದು ಮಾಡುತ್ತಿದೆ. ಸಿನಿಮಾ ಅಂದ್ರೆ ಬರೀ ನಟರ ನಡುವಿನ ಪೈಪೋಟಿಯಲ್ಲ, ಇದು ಕನ್ನಡ ಸಿನಿಮಾದ ಶಕ್ತಿ ಎಂದು ಈ ಅಭಿಮಾನಿಗಳ ಒಕ್ಕೂಟ ಸಾಬೀತುಪಡಿಸಿದೆ.

ವಿಷ್ಣು, ಡಿಬಾಸ್ & ಅಪ್ಪು ಫ್ಯಾನ್ಸ್‌‌ನಿಂದ KD ಸೆಲೆಬ್ರೇಷನ್

ಫ್ಯಾನ್ಸ್ ವಾರ್‌ಗೆ ಬ್ರೇಕ್.. ಧ್ರುವ ಕೆಡಿ ಚಿತ್ರಕ್ಕೆ ಸಪೋರ್ಟ್..!

ಸಿನಿಮಾ ರಿಲೀಸ್‌ಗೂ ಮುನ್ನವೇ ಕೆಡಿ ಹವಾ ಹೇಗಿದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿಯೊಬ್ಬರು ಬರೋಬ್ಬರಿ 350 ಟಿಕೆಟ್‌ಗಳನ್ನು ಮುಂಗಡವಾಗಿ ಖರೀದಿಸಿದ್ದಾರೆ. ವಿಶೇಷವೆಂದರೆ, ಈ ಟಿಕೆಟ್‌ಗಳನ್ನು ಅವರು ಕೇವಲ ಧ್ರುವ ಫ್ಯಾನ್ಸ್‌ಗೆ ಮಾತ್ರವಲ್ಲದೆ, ವಿಷ್ಣು, ದರ್ಶನ್ ಮತ್ತು ಅಪ್ಪು ಅಭಿಮಾನಿಗಳಿಗೂ ಹಂಚುತ್ತಿದ್ದಾರೆ. ಏಪ್ರಿಲ್ 30 ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಈ ಚಿತ್ರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಬುಝ್ ಕ್ರಿಯೇಟ್ ಆಗಿದೆ. ಟಿಕೆಟ್ ವಿಂಡೋ ಓಪನ್ ಆಗ್ತಿದ್ದಂತೆ ಫ್ಯಾನ್ಸ್ ಮುಗಿಬಿದ್ದು ಬುಕ್ ಮಾಡ್ತಿದ್ದಾರೆ.

ಒಂದು ಕಾಲದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಧ್ರುವ ಸರ್ಜಾ ಮತ್ತು ದರ್ಶನ್ ಅಭಿಮಾನಿಗಳ ನಡುವೆ ದೊಡ್ಡ ಮಟ್ಟದ ಫ್ಯಾನ್ಸ್ ವಾರ್ ನಡೆದಿತ್ತು. ಪರಸ್ಪರ ಪೈಪೋಟಿ, ಮಾತಿನ ಚಕಮಕಿಗಳಿಂದಲೇ ಸುದ್ದಿಯಾಗುತ್ತಿದ್ದ ಈ ಎರಡು ದೊಡ್ಡ ಸೈನ್ಯಗಳು, ಈಗ ‘ಕೆಡಿ’ ಚಿತ್ರದ ವಿಚಾರದಲ್ಲಿ ಅಚ್ಚರಿಯ ಒಗ್ಗಟ್ಟು ಪ್ರದರ್ಶಿಸುತ್ತಿವೆ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಕನ್ನಡ ಚಿತ್ರರಂಗದ ಏಳಿಗೆಗಾಗಿ ಸ್ಟಾರ್ಸ್ ಅಭಿಮಾನಿಗಳು ಕೈಜೋಡಿಸಿರೋದು ಗಾಂಧಿನಗರದ ಪಂಡಿತರಿಗೂ ಅಚ್ಚರಿ ಮೂಡಿಸಿದೆ.

KD ಸಿನಿಮಾ ನೋಡಲು 350 ಟಿಕೆಟ್ ಖರೀದಿಸಿದ ಫ್ಯಾನ್ಸ್

ಅಪ್ಪು ರಾಜ್ ಡೈಲಾಗ್.. ದಚ್ಚು ಆಪ್ತ ಪ್ರೇಮ್.. KDಗೆ ಗಜಬಲ

ಸಿನಿಮಾದ ರಿಲೀಸ್ ಡೇಟ್ ಹತ್ತಿರ ಆಗ್ತಿದ್ದಂತೆ ಅಭಿಮಾನಿಗಳು ಕ್ರೇಜಿ ಆಗಿ ಸಂಭ್ರಮಿಸ್ತಿದ್ದಾರೆ. ಅಭಿಮಾನಿಯೊಬ್ಬರು ಧ್ರುವ ಸರ್ಜಾ ಅವರಿಗೆ ಮರದ ಗದೆಯನ್ನು ಉಡುಗೊರೆಯಾಗಿ ನೀಡಿ, ಸಿನಿಮಾ ಮೇಲಿರುವ ಪ್ರೀತಿ ತೋರಿದ್ದಾರೆ. ಇನ್ನೂ ಕೆಲವೆಡೆ ಅಭಿಮಾನಿಗಳು ‘ಕೆಡಿ’ ಚಿತ್ರದ ಸಂಭ್ರಮಕ್ಕಾಗಿ ಉಚಿತ ಆಟೋ ಪ್ರಯಾಣದ ವ್ಯವಸ್ಥೆ ಮಾಡಿರುವುದು ಚಿತ್ರದ ಮೇಲಿರುವ ಕ್ರೇಜ್‌ಗೆ ಹಿಡಿದ ಕನ್ನಡಿ. ಮಾಸ್ ಡೈಲಾಗ್‌ಗಳು, ಖಡಕ್ ಆ್ಯಕ್ಷನ್ ಮತ್ತು ಈ ಬಾರಿ ಫ್ಯಾನ್ಸ್ ತೋರಿಸುತ್ತಿರುವ ಈ ಅತೀವ ಪ್ರೀತಿ ನೋಡ್ತಿದ್ರೆ, ‘ಕೆಡಿ’ ಬಾಕ್ಸ್ ಆಫೀಸ್ ಧೂಳಿಪಟ ಮಾಡುತ್ತೆ ಅನಿಸ್ತಿದೆ. ಸೋ..ಏಪ್ರಿಲ್ 30ಕ್ಕೆ ಏನೆಲ್ಲಾ ಆಗುತ್ತೆ ಅಂತ ಕಾದು ನೋಡೋಣ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

 

 

Exit mobile version