ಟಾಕ್ಸಿಕ್‌‌ಗೆ ಕಥೆಗಾರನಾದ ಯಶ್.. ಟಾಪ್-1ನಲ್ಲಿ KGF 3

ಅಟೆನ್ಷನ್ ಪ್ಲೀಸ್.. ಸದ್ಯದಲ್ಲೇ ಡೈರೆಕ್ಟರ್ ಆಗ್ತಾರೆ ಯಶ್..!

Untitled design 2025 07 25t182025.912

ರಾಕಿಂಗ್ ಸ್ಟಾರ್ ಯಶ್ ರಾಕಿಭಾಯ್ ಆಗಿ ಬೆಳೆದು, ನ್ಯಾಷನಲ್- ಇಂಟರ್‌ನ್ಯಾಷನಲ್ ಲೆವೆಲ್‌‌ನಲ್ಲಿ ವರ್ಚಸ್ಸು ಹೆಚ್ಚಿಸಿಕೊಂಡಿರೋದು ಗೊತ್ತೇಯಿದೆ. ಬಾಲಿವುಡ್ ಅಂಗಳದಲ್ಲೂ ಚಿತ್ರ ನಿರ್ಮಾಣಕ್ಕೆ ಮುಂದಾಗಿರೋ ರಾಕಿಂಗ್ ಸ್ಟಾರ್, ಮತ್ತೊಂದು ಮಹತ್ವದ ಕೆಲಸಕ್ಕೆ ಕೈ ಹಾಕಿದ್ದಾರೆ. ಅದೇನು ಅನ್ನೋದ್ರ ಜೊತೆಗೆ ಯಶ್‌ರ ಟಾಕ್ಸಿಕ್ ಹಾಗೂ ರಾಮಾಯಣಕ್ಕಿಂತ ಕ್ಯೂರಿಯಾಸಿಟಿ ಹೆಚ್ಚಿಸಿರೋ ಕೆಜಿಎಫ್-3 ಅಪ್ಡೇಟ್ಸ್ ಇಲ್ಲಿದೆ ನೋಡಿ.

ಚಿತ್ರರಂಗದಲ್ಲಿ ಏನಾದ್ರು ಸಾಧಿಸಬೇಕು ಅಂತ ಬರೋರಿಗೆ ಯಶ್ ಅಲ್‌ಟೈಂ ರೋಲ್ ಮಾಡೆಲ್. ಹೌದು.. ಬರೀ ಗುರಿ ಇದ್ರೆ ಸಾಲಲ್ಲ. ಅದಕ್ಕೆ ಬೇಕಾಗುವ ಶ್ರಮ ಹಾಕಬೇಕು. ಬೆವರಷ್ಟೇ ಅಲ್ಲ, ರಕ್ತ ಕೂಡ ಹರಿಸಬೇಕಾಗುತ್ತೆ. ಅವಮಾನ, ಅಪಮಾನಗಳನ್ನು ಎದುರಿಸಬೇಕಾಗುತ್ತೆ. ನಿದ್ದೆ, ಹಸಿವನ್ನು ನೀಗಿ ನಿಲ್ಲಬೇಕಾಗುತ್ತೆ. ಅದೆಲ್ಲವನ್ನು ಯಶ್ ಮಾಡಿದ್ರು. ಹಾಗಾಗಿಯೇ ಇಂದು ನ್ಯಾಷನಲ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಇನ್‌ಫ್ಯಾಕ್ಟ್ ಅಭಿಮಾನಿಗಳು ಹಾಗೂ ಚಿತ್ರಪ್ರೇಮಿಗಳೇ ಮೆರೆಸುತ್ತಿದ್ದಾರೆ.

ಕೆಜಿಎಫ್ ಸಿನಿಮಾಗಳ ಬಳಿಕ ಯಶ್ ನಸೀಬು ಕಂಪ್ಲೀಟ್ ಬದಲಾಗಿ ಹೋಯ್ತು. ಲೈಫ್ ಸ್ಟೈಲ್ ಜೊತೆ ಸಿನಿಮಾ ಲೈಫ್ ಕೂಡ ಬದಲಾಯ್ತು. ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ರಾಕಿಭಾಯ್, ಸ್ಯಾಂಡಲ್‌ವುಡ್‌ನ ಅಂತಾರಾಷ್ಟ್ರೀಯ ಚಿತ್ರಗಳಿಗೆ ಸವಾಲೊಡ್ಡುವ ರೇಂಜ್‌ಗೆ ಕೊಂಡೊಯ್ಯುತ್ತಿದ್ದಾರೆ. ಅವುಗಳ ಪ್ರತಿಫಲವೇ ಸದ್ಯ ತಯಾರಾಗ್ತಿರೋ ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳು.

ಯೆಸ್.. ಮಲಯಾಳಂನ ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಹಾಗೂ ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳ್ತಿರೋ ರಾಮಾಯಣ ಸಿನಿಮಾಗಳಲ್ಲಿ ಯಶ್ ಬ್ಯುಸಿ ಆಗಿದ್ದಾರೆ. ಇವೆರಡೂ ಕೂಡ ಯಶ್ ಕರಿಯರ್‌ನ ಮಹತ್ವದ ಸಿನಿಮಾಗಳಾಗಿದ್ದು, ಇಲ್ಲಿ ಬರೀ ನಟನೆಗಷ್ಟೇ ಸೀಮಿತ ಆಗಿಲ್ಲ ರಾಕಿಭಾಯ್. ಇವೆರಡೂ ಚಿತ್ರಗಳಿಗೆ ಸಹ ನಿರ್ಮಾಪಕರೂ ಹೌದು. ಈ ಪ್ರಾಜೆಕ್ಟ್‌‌ಗಳಿಗಾಗಿ ಹಾಲಿವುಡ್ ತಂತ್ರಜ್ಞರು ಹಾಗೂ ಕಲಾವಿದರನ್ನೆಲ್ಲಾ ಕರೆಸಿರೋ ಯಶ್, ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

ಅಂದಹಾಗೆ ಟಾಕ್ಸಿಕ್ ಸಿನಿಮಾ ಗೋವಾ ಡ್ರಗ್ ಮಾಫಿಯಾ ಕುರಿತ ಬಿಗ್ ಸ್ಕೇಲ್ ಎಂಟರ್‌ಟೈನರ್ ಆಗಿದ್ದು, ಈ ಚಿತ್ರದ ಮೂಲಕ ಮತ್ತೊಂದು ಮಹತ್ವದ ಕೆಲಸಕ್ಕೆ ಕೈ ಹಾಕಿದ್ದಾರೆ ಯಶ್. ಅದೇನಪ್ಪಾ ಅಂದ್ರೆ ತೆರೆ ಮೇಲೆ ಹಾಗೂ ತೆರೆ ಹಿಂದೆ ನಿಂತು ಕೆಲಸ ಮಾಡ್ತಿದ್ದ ರಾಕಿ, ಇದೀಗ ಚಿತ್ರದ ಕಥೆಗಾರನಾಗಿಯೂ ಕೂಡ ಗುರ್ತಿಸಿಕೊಳ್ತಿದ್ದಾರೆ. ಯೆಸ್.. ಟಾಕ್ಸಿಕ್ ಚಿತ್ರಕ್ಕೆ ಗೀತು ಮೋಹನ್‌ದಾಸ್ ಜೊತೆ ಯಶ್ ಕೂಡ ಕಥೆ ಬರೆದಿದ್ದಾರೆ. ಸದ್ಯ ಅದೇ ಕಥೆ ಬೆಳ್ಳಿತೆರೆ ಬೆಳಗೋಕೆ ಸಿನಿಮಾ ರೂಪ ಪಡೆಯುತ್ತಿದೆ.

ನಟನೆ, ನಿರ್ಮಾಣದ ಹೊರತಾಗಿ ಕಥೆಗಾರನಾಗಿಯೂ ಗುರ್ತಿಸಿಕೊಳ್ತಿರೋ ಯಶ್, ಡೈರೆಕ್ಟರ್ ಕ್ಯಾಪ್ ತೊಟ್ಟು ಚಿತ್ರ ನಿರ್ದೇಶನಕ್ಕೂ ಎಂಟ್ರಿ ಕೊಡೋ ದಿನಗಳು ಬಾರಿ ದೂರ ಉಳಿದಿಲ್ಲ. ಅಂದಹಾಗೆ ಇತ್ತೀಚೆಗೆ ಒಂದು ಸರ್ವೆ ಪ್ರಕಾರ ಯಶ್‌ರ ಸದ್ಯದ ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳಿಗಿಂತ ಕೆಜಿಎಫ್-3 ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಅನಿಸಿಕೊಂಡಿದೆ. ಕೆಜಿಎಫ್ ಫ್ರಾಂಚೈಸ್‌‌ನ ನೆಕ್ಸ್ಟ್ ವೆಂಚರ್‌ಗಾಗಿ ಜನ ಕಾತರರಾಗಿರೋದು ಈ ಮೂಲಕ ಕಾತರಿ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version