‘ವೃತ್ತʼ ಒಂದು ಭಾವಪೂರ್ಣ ರೈಡ್‌

Web 2025 07 26t201728.326

ವೃತ್ತ ಅಂದರೆ ನಮಗೆ ಮೊದಲು ನೆನಪಾಗುವುದು ಸರ್ಕಲ್.‌ ಆದರೆ ವೃತ್ಯ ಒಂದು ಭಾವಪೂರ್ಣ ಪಯಣ ಎನ್ನುತ್ತಾರೆ ನಿರ್ದೇಶಕ ಲಿಖಿಲ್‌ ಕುಮಾರ್.‌ ಅಷ್ಟಕ್ಕೂ ಲಿಖಿಲ್‌ ವೃತ್ತದ ಬಗ್ಗೆ ಮಾತನಾಡೋದಿಕ್ಕೆ ಕಾರಣ ಅವರು ತಮ್ಮ ಹೊಸ ಕನಸು ಮಿಸ್ಟ್ರೀ ಥ್ರಿಲ್ಲರ್‌ ಚಿತ್ರಕ್ಕೆ ವೃತ್ತ ಎಂದು ಶೀರ್ಷಿಕೆ ಇಟ್ಟದ್ದಾರೆ. ಆಗಸ್ಟ್‌ 1ರಂದು ರಿಲೀಸ್‌ ಆಗಲಿರುವ ಈ ಚಿತ್ರ ಒಂದು ರಾತ್ರಿ ನಡೆಯುವ ಘಟನಾವಳಿಗಳನ್ನು ಒಳಗೊಂಡಿದೆ. ಇದು ಭಾವಪೂರ್ಣ ರೈಡ್‌ ಎನ್ನಬಹುದು. ಈ ಚಿತ್ರದ ಮೂಲಕ ನಿರ್ದೇಶಕ ಲಿಖಿತ್‌ ಕುಮಾರ್‌ ಡೈರೆಕ್ಟರ್‌ ಕುರ್ಚಿ ಅಲಂಕರಿಸಿದ್ದಾರೆ. ಈಗಾಗಲೇ ವೃತ್ತ ಸಿನಿಮಾದ ಚಿತ್ರೀಕರಣ ಹಾಗೂ ಪೋಸ್ಟ್‌ ಪ್ರೊಡಕ್ಷನ್ ಪೂರ್ಣಗೊಂಡಿದೆ. ಆಗಸ್ಟ್‌ 1ಕ್ಕೆ ಚಿತ್ರವನ್ನು ಚಿತ್ರತಂಡ ಬೆಳ್ಳಿತೆರೆ ಅಖಾಡಕ್ಕೆ ಇಳಿಸಲು ಸಜ್ಜಾಗಿದೆ.

ಸಿದ್ದಾರ್ಥ್‌ ಎಂಬ ಪಾತ್ರದ ಸುತ್ತ ನಡೆಯುವ ಕಥೆ ಇದರಲ್ಲಿದ್ದು, ಸಿದ್ದಾರ್ಥ್‌ ಗೆ ಆತನ ಮಸ್ಥಿತಿಯೇ ಶತ್ರು. ಒಂದು ರಾತ್ರಿ, ಒಂದು ಕರೆ ಹಾಗೂ ನಾಯಕ ದಾರಿಯಲ್ಲಿ ತೆಗೆದುಕೊಳ್ಳಬಹುದಾದ ರಾಂಗ್‌ ಟರ್ನ್‌ನಿಂದ ಏನೆಲ್ಲಾ ಸಂಭವಿಸಲಿದೆ ಎಂಬುವುದು ಚಿತ್ರದ ತಿರುಳು. ಯುವನಟ ಮೊಹಿಯುದ್ದೀನ್‌ ಅವರು ನಾಯಕ ಸಿದ್ದಾರ್ಥ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಯಣ್ಣ ಫಿಲ್ಮಸ್‌ ಚಿತ್ರದ ವಿತರಣೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಒಂದು ಚಾಲೆಂಜಿಂಗ್‌ ಕಥೆ ಇಟ್ಟುಕೊಂಡು ಕಥೆ ಮಾಡಬೇಕೆಂಬ ಆಸೆ ಇತ್ತು. ಎಡಿಟರ್‌ ಆಗಿ ಚಿತ್ರರಂಗಕ್ಕೆ ಅಡಿಯಿಟ್ಟ ನಾನು ನಂತರ ಒಂದೆರಡು ಕಿರುಚಿತ್ರಗಳನ್ನೂ ಸಹ ನಿರ್ದೇಶಿಸಿದೆ. ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಅದು ಯಾವ ಮಾಯೆಯೋ ಎಂಬ ಹಾಡಿನ ಲಿರಿಕಲ್ ವೀಡಿಯೋ ರೋ ಬಿಡುಗಡೆಂ ಬಿಡುಗಡೆಯಾಗಿದ್ದು, ಆ ಹಾಡು ಅತಿ ಹೆಚ್ಚು ವೀಕ್ಷಣೆಯಾಗುವ ಮೂಲಕ ವೈರಲ್ ಆಗಿದೆ. ನಮ್ಮ ಚಿತ್ರವನ್ನು ವೀಕ್ಷಿಸಿದ ನಟ ನೀನಾಸಂ ಸತೀಶ್ ಅವರು ಚಿತ್ರದ ಕಂಟೆಂಟ್ ಮೆಚ್ಚಿ ತಮ್ಮ ಬ್ಯಾನರ್ ಮೂಲಕ ಪ್ರೆಸೆಂಟ್ ಮಾಡುತ್ತಿದ್ದಾರೆ. ವೃತ್ತ ಚಿತ್ರವು ಸಿಂಕ್ ಸಿನಿಮಾ ಅವರ ಅದ್ಭುತವಾದ ಸೌಂಡ್ ಡಿಸೈನ್ ನೋಡುಗರ ಕಿವಿಗೆ ಅಪ್ಪಳಿಸುತ್ತದೆ ಎಂದು ನಿರ್ದೇಶಕ ಲಿಖಿತ್ ಕುಮಾರ್ ಹೇಳಿದರು.

ಚಿತ್ರದ ಕಥೆಯು ವಿವಿಧ ಶೈಲಿಗಳಲ್ಲಿ ತೆರೆದುಕೊಳ್ಳುತ್ತದೆ. ನಾಯಕ ಸಿದ್ದಾರ್ಥ ಚಿತ್ರದ ಪ್ರತಿ ಪಾತ್ರವೂ ಸಹ ವಿಶಿಷ್ಟವಾದ ದೃಷ್ಟಿಕೋನವನ್ನು ತೆರೆದಿಡುತ್ತದೆ ಅಲ್ಲದೆ ಸಾಕಷ್ಟು ನಿಗೂಢತೆಯನ್ನು ಹೊಂದಿರುವ ಮಿಸ್ಟ್ರಿ ಡ್ರಿಲ್ಲರ್ ಜಾನರ್ ಚಿತ್ರ ಇದಾಗಿದ್ದರೂ, ಅದರ ನಿರೂಪಣಾ ಶೈಲಿಯೇ ವಿಶಿಷ್ಟವಾಗಿದೆ ಎನ್ನುವುದು ಲಿಖಿತ್ ಕುಮಾರ್ ಅಭಿಪ್ರಾಯ.

ಲಕ್ಷಯ್ ಆರ್ಟ್ಸ್ ಬ್ಯಾನರ್ ಅಡಿ ಟಿ. ಶಿವಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ, ಯೋಗೇಶ್‌ಗೌಡ ಅವರ ಕಥೆ, ಶಂಕರ ರಾಮನ್ ಅವರ ಸಂಭಾಷಣೆ ಚಿತ್ರಕ್ಕಿದ್ದು, ಲಿಖಿತ್‌ ಕುಮಾರ್ ಅವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಹಿರ್ ಜತೆ ಹರಿಣಿ ಸುಂದರ ರಾಜನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರ ಕಥೆಗೆ ತಿರುವು ನೀಡುವ ಮತ್ತೊಂದು ಪ್ರಮುಖ ಪಾತ್ರ ಚಿತ್ರದಲ್ಲಿದ್ದು ಸದ್ಯ ಅದನ್ನು ನಿರ್ದೇಶಕರು ಗುಟ್ಟಾಗಿಯೇ ಇಟ್ಟಿದ್ದಾರೆ. ಈ ತಿಂಗಳ ಕೊನೆಯವಾರ ಚಿತ್ರದ ಟೈಲ‌ರ್ ಬಿಡುಗಡೆ ಮಾಡುವ ಯೋಜನೆ ನಿರ್ದೇಶಕರದ್ದು, ಈ ಚಿತ್ರದಲ್ಲಿ ಒಂದೇ ಒಂದು ಹಾಡಿದ್ದು ಆಂಟನಿ ಎಂಜಿ, ಹಾಗೂ ಹರಿ ಕೃಷಾಂತ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗೌತಮ್ ಕೃಷ್ಣ ಅವರ ಸಿನಿಮಾಟೋಗ್ರಫಿ ಹಾಗೂ ಸುರೇಶ್ ಆರ್ಮುಗಂ ಅವರ ಸಂಕಲನ ಈ ಚಿತ್ರಕ್ಕಿದೆ.

Exit mobile version