ಮಾನ್‌ಸ್ಟರ್ ಯಶ್ ಮಾಸ್ಟರ್‌ಮೈಂಡ್ ಅನ್ನೋದನ್ನ ಒನ್ಸ್ ಅಗೈನ್ ಪ್ರೂವ್ ಮಾಡಿದ್ದಾರೆ. ಗ್ಲೋಬಲ್ ಮೂವಿ ಮಾಡಿರೋ ಹೆಮ್ಮೆಯ ಕನ್ನಡಿಗ, ಅದ್ರ ಪ್ರಮೋಷನ್ಸ್ ಹಾಲಿವುಡ್‌ನಿಂದಲೇ ಕಿಕ್‌ಸ್ಟಾರ್ಟ್ ಮಾಡಿದ್ದಾರೆ. ಯೆಸ್.. ಟಾಕ್ಸಿಕ್ ಚಿತ್ರದ ಕಥೆ, ಪಾತ್ರಗಳು, ಬ್ಯಾಕ್‌ಡ್ರಾಪ್, ಜಾನರ್, ಮೇಕಿಂಗ್.. ಹೀಗೆ ಸಾಕಷ್ಟು ಟಾಪ್ ಸೀಕ್ರೆಟ್ಸ್‌ನ ರಿವೀಲ್ ಮಾಡಿದ್ದಾರೆ. ಅದಕ್ಕೆ ಬಾಲಿವುಡ್‌ನ ಸ್ಟಾರ್ ಅನುರಾಗ್ ಕಶ್ಯಪ್ ಕೂಡ ಕೈ ಜೋಡಿಸಿದ್ದಾರೆ. ಅದನ್ನ ನಾವು ಹೇಳೋದಕ್ಕಿಂತ ಅವರುಗಳ ಬಾಯಿಂದಲೇ ನೀವೊಮ್ಮೆ ಕೇಳಿ.
ಒಂದು ಮನೆ ಕಟ್ಟೋಕೆ ಅಂದ್ರೇನೇ ಸಾಕಷ್ಟು ಕಾಲಾವಕಾಶ ಹಿಡಿಯುತ್ತೆ. ಅಂಥದ್ರಲ್ಲಿ ಅರಮನೆ ಕಟ್ಬೇಕು ಅಂದ್ರೆ ಕೊಂಚ ಜಾಸ್ತಿನೇ ಟೈಮ್ ಹಿಡಿಯುತ್ತೆ. ಇದು ಕೆಜಿಎಫ್ ಸಿನಿಮಾದ ಸಮಯದಲ್ಲಿ ಸ್ವತಃ ಯಶ್ ಹೇಳಿದ್ದ ಮಾತು. ಅದೀಗ ಟಾಕ್ಸಿಕ್‌ಗೂ ಅನ್ವಯ ಆಗ್ತಿದೆ. ಮಾರ್ಚ್ 19ಕ್ಕೆ ಟಾಕ್ಸಿಕ್ ಬಿಡುಗಡೆ ಆಗದೆ ನಿಮಗೆಲ್ಲಾ ಬೇಸರ ಆಗಿರಬಹುದು. ಆದ್ರೆ ಸಿನಿಮಾ ಮಾತ್ರ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರಲಿದೆ ಅನ್ನೋದು ಮಾತ್ರ ಪಕ್ಕಾ ಆಗಿದೆ.
9 ನಿಮಿಷದ ಟಾಕ್ಸಿಕ್ ಸಿನಿಮಾ ಲೀಕ್.. ಹಾಲಿವುಡ್ ಥಂಡಾ
ರಾಕಿಂಗ್ ‘ರಾಯ’ ಬಿಟ್ಟುಕೊಟ್ರು ಟಾಕ್ಸಿಕ್ ಟಾಪ್ ಸೀಕ್ರೆಟ್ಸ್..!
ಟಾಕ್ಸಿಕ್ ಬರೀ ನಮ್ಮ ಪ್ಯಾನ್ ಇಂಡಿಯಾ ಮೂವಿ ಅಲ್ಲ. ಔಟ್ ಅಂಡ್ ಔಟ್ ಗ್ಲೋಬಲ್ ಎಂಟರ್‌ಟೈನರ್. ಅದೇ ಕಾರಣದಿಂದ ಅದನ್ನ ಎಲ್ಲಿ ಮುಟ್ಟಿಸಬೇಕೋ ಅಲ್ಲಿ ಮುಟ್ಟಿಸೋ ಕಾರ್ಯ ಮಾಡಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್. ಇತ್ತೀಚೆಗೆ ಹಾಲಿವುಡ್ ಅಂಗಳದಲ್ಲಿ ನಡೆದ ಸಿನಿಮಾಕಾನ್ ವೇದಿಕೆಯಲ್ಲಿ ಅಮೆರಿಕಾದ ಲಾಸ್ ವೇಗಾಸ್‌ನಲ್ಲಿ ಟಾಕ್ಸಿಕ್ ಚಿತ್ರದ 9 ನಿಮಿಷ ಗ್ಲಿಂಪ್ಸ್‌ನ ಪ್ರದರ್ಶನ ಮಾಡಲಾಗಿದೆ.
ಅರೇ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿಯ 9 ನಿಮಿಷ ದೃಶ್ಯ ತುಣುಕುಗಳು ರಿವೀಲ್ ಆಗಿಬಿಟ್ರೆ, ಸಿನಿಮಾದ ಸೀಕ್ರೆಟ್ ಬಿಟ್ಟುಕೊಟ್ಟಂತೆ ಆಗಲ್ವಾ..? ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತೆ. ಆದ್ರೆ ಅಲ್ಲೇ ಮಜಾ ಇರೋದು. ರುಚಿ ತೋರಿಸಿದ್ರೇನೇ ಅಲ್ವಾ ಟಾಕ್ಸಿಕ್ ಒಳಗಿನ ಗತ್ತು, ಗಮ್ಮತ್ತು ಎಂಥದ್ದು ಅನ್ನೋದು ಗ್ಲೋಬಲ್ ಮಾರ್ಕೆಟ್‌ಗೆ ಗೊತ್ತಾಗೋದು..? ಸೋ.. ಆ ನಿಟ್ಟಿನಲ್ಲಿ ಯಶ್ ಬೋಲ್ಡ್ ಸ್ಟೆಪ್ ತಗೊಂಡು ಅಲ್ಲಿ 9 ನಿಮಿಷದ ಸಿನಿಮಾನ ತೋರಿಸಿದ್ದಾರೆ. ಅಷ್ಟೇ ಅಲ್ಲ ಟಾಕ್ಸಿಕ್ ಟಾಪ್ ಸೀಕ್ರೆಟ್ಸ್ ಕೂಡ ಬಿಟ್ಟುಕೊಟ್ಟಿದ್ದಾರೆ ಯಶ್.
ತಂದೆ-ಮಗನ ರಿವೆಂಜ್ ಕಥೆ.. ಡಬಲ್ ರೋಲ್ ಕನ್ಫರ್ಮ್..!
ಪೋರ್ಚುಗಲ್ ಕಪಿಮುಷ್ಠಿಯ ಗೋವಾದ ರಕ್ತಸಿಕ್ತ ಅಧ್ಯಾಯ
ಟಾಕ್ಸಿಕ್ ಕಂಡಿತವಾಗಿಯೂ ಯಶ್-ರಣ್‌ಬೀರ್ ರಾಮಾಯಣ ಚಿತ್ರಕ್ಕಿಂತ ವಿಭಿನ್ನ ಸಿನಿಮಾ. ಇನ್‌ಫ್ಯಾಕ್ಟ್ ತದ್ವಿರುದ್ಧ ಸಿನಿಮಾ ಅಂತಲೇ ಹೇಳಬಹುದು. ಯಾಕಂದ್ರೆ ಇದೊಂದು ಪಕ್ಕಾ ಅಡಲ್ಟ್ ಮೂವಿ. ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ ಅನ್ನೋದು ಟೈಟಲ್ ಹೇಳ್ತಿದೆ. ಅದ್ರಂತೆ ಸದ್ಯ ರಿವೀಲ್ ಆಗಿರೋ ಟೀಸರ್ ದೃಶ್ಯಗಳು ಕೂಡ ಇರೋದು ಇಂಟರೆಸ್ಟಿಂಗ್. ಅದನ್ನ ಸಿನಿಮಾಕಾನ್ ವೇದಿಕೆಯಲ್ಲಿ ಸ್ವತಃ ಯಶ್ ರಿವೀಲ್ ಮಾಡಿದ್ದಾರೆ.
ಅಂದಹಾಗೆ ಇದು ತಂದೆ-ಮಗನ ಕುರಿತ ರಿವೆಂಜ್ ಡ್ರಾಮಾ ಅಂತೆ. ಅಲ್ಲಿಗೆ ಯಶ್ ಇಲ್ಲಿ ರಾಯ ಹಾಗೂ ಆತನ ಮಗ ಟಿಕೆಟ್ ಅನ್ನೋ ಎರಡು ಪಾತ್ರಗಳನ್ನ ಪೋಷಿಸಿರೋದು ಪಕ್ಕಾ ಆಗಿದೆ. ಹಂಡ್ರೆಡ್ ಪರ್ಸೆಂಟ್ ವೈಲ್ಡ್ ಮೂವಿ ಇದಾಗಿದ್ದು, ಗೋವಾ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯೋ ಕಥಾನಕ ಆಗಿರಲಿದೆ. 1947ರಲ್ಲಿ ಇಂಡಿಯಾ ಸ್ವಾತಂತ್ರ್ಯ ಪಡೆದಾಗ ನಂತರ 1961 ತನಕ ಗೋವಾ ಮಾತ್ರ ಪೋರ್ಚುಗೀಸರ ಕಪಿಮುಷ್ಠಿಯಲ್ಲೇ ಇತ್ತು.
‘ರಾಮಾಯಣ’ಕ್ಕೆ ತದ್ವಿರುದ್ಧ ಚಿತ್ರ.. 100% ವೈಲ್ಡ್ ಮೂವಿ..!
ಟಾಕ್ಸಿಕ್ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ ಅಂದ್ರು ಯಶ್
1940 ರಿಂದ 1970ರ ಕಾಲಘಟ್ಟದ ನೈಜ ಘಟನೆಗಳು ಹಾಗೂ ಕಾಲ್ಪನಿಕವಾದ ಸಿನಿಮ್ಯಾಟಿಕ್ ಎಕ್ಸ್‌ಪೀರಿಯೆನ್ಸ್ ಆಗಿರಲಿದೆ ಈ ಟಾಕ್ಸಿಕ್. ಇದು ಮೈಂಡ್ ಬ್ಲೋಯಿಂಗ್ ಗ್ಯಾಂಗ್‌ಸ್ಟರ್ ಮೂವಿಯಂತೆ. ಅದೇ ಕಾರಣದಿಂದ ಇದರಲ್ಲಿ ಕ್ರಿಶ್ಚಿಯಾನಿಟಿ, ಕಫಿನ್ ಬಾಕ್ಸ್, ಸೂಟು, ಬೂಟುಗಳು, ವಿಂಟೇಜ್ ಕಾರ್‌ಗಳು ಜೋರಿವೆ. ನಾಯಕನಟಿಯರ ಮಹಾ ದಂಡು ಇಲ್ಲಿದೆ. ಒಂದಷ್ಟು ಐತಿಹಾಸಿನ ಘಟನೆಗಳನ್ನ ಫಿಕ್ಷನ್ ರೂಪದಲ್ಲಿ ಗೀತು ಮೋಹನ್‌ದಾಸ್ ಪ್ರೆಸೆಂಟ್ ಮಾಡಿದ್ದಾರೆ ಎಂದಿದ್ದಾರೆ ಯಶ್.
ಬರೀ ಆ್ಯಕ್ಷನ್ ಅಲ್ಲ.. ಸೈಕಲಾಜಿಕಲ್ & ಎಮೋಷನಲ್..!
ರಿಯಲಿಸ್ಟಿಕ್ ಎಕ್ಸ್‌ಪೀರಿಯೆನ್ಸ್ ನೀಡ್ತಾನೆ ಟಾಕ್ಸಿಕ್ ರಾಯ
ಟಾಕ್ಸಿಕ್ ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ ಬಗ್ಗೆಯೂ ಮಾತನಾಡಿರೋ ರಾಕಿಂಗ್ ಸ್ಟಾರ್, ಇಲ್ಲಿ ಆ್ಯಕ್ಷನ್ ಇದೆ. ಆದ್ರೆ ಅದಕ್ಕಿಂತ ಹೆಚ್ಚಾಗಿ ಸೈಕಲಾಜಿಕಲ್ ಹಾಗೂ ಎಮೋಷನಲ್ ವಿಷಯಗಳು ತುಂಬಾ ಇರಲಿವೆ. ಅವು ಬಹಳ ರಿಯಲಿಸ್ಟಿಕ್ ಫೀಲ್ ನೀಡಲಿವೆ ಎಂದಿದ್ದಾರೆ ರಾಕಿಭಾಯ್.
ಯಶ್ ಅಷ್ಟೇ ಅಲ್ಲ.. ಬಾಲಿವುಡ್‌ನ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಅನುರಾಗ್ ಕಶ್ಯಪ್ ಕೂಡ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಟಾಕ್ಸಿಕ್ ಬಗ್ಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಯಶ್ ಬರೀ ನಟನಷ್ಟೇ ಅಲ್ಲ, ಅದ್ಭುತ ಬರಹಗಾರ ಅಂತ ಯಶ್ ಬರವಣಿಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಡಲ್ಟ್ ಮೂವಿ, ಹಸಿಬಿಸಿ ದೃಶ್ಯಗಳ ಕುರಿತು ತಮ್ಮ ನಿಲುವು ಹೊರಹಾಕಿದ್ದಾರೆ.
ಒಟ್ಟಾರೆ ಯಶ್ ಏನೇ ಮಾಡಿದ್ರೂ ಅದೆಲ್ಲಾ ಮಾರ್ಕೆಟಿಂಗ್ ಸ್ಟ್ರ್ಯಾಟಜಿಯ ಒಂದು ಭಾಗವಾಗಿರಲಿದೆ ಅನ್ನೋದು ಸ್ಪಷ್ಟ. ಯಾಕಂದ್ರೆ ಟಾಕ್ಸಿಕ್‌ನಂಹ ಬಿಗ್ ಸ್ಕೇಲ್, ಬಿಗ್ಗೆಸ್ಟ್ ಮೂವಿಯ ಕಥೆ, ಪಾತ್ರಗಳು, ಜಾನರ್, ಮೇಕಿಂಗ್ ಎಲ್ಲವನ್ನೂ ಮುಕ್ತವಾಗಿ ಮಾತಾಡಿದ್ದಾರೆ ಅಂದ್ರೆ ಸಿನಿಮಾ ವಿಶ್ಯುವಲಿ ಟ್ರೀಟ್ ಕೊಡೋದು ಪಕ್ಕಾ. ಜೂನ್ 4ಕ್ಕೆ ವಿಶ್ವದಾದ್ಯಂತ ಬೆಳ್ಳಿತೆರೆ ಬೆಳಗಲಿರೋ ಟಾಕ್ಸಿಕ್, ಹಾಲಿವುಡ್‌ನಲ್ಲಿ ಕೂಡ ಮೇಕಿಂಗ್ ಅಂದ್ರೆ ಹೇಗಿರಬೇಕು ಅನ್ನೋದಕ್ಕೆ ಎಕ್ಸಾಂಪಲ್ ಸೆಟ್ ಮಾಡೋದ್ರಲ್ಲಿ ಡೌಟೇ ಇಲ್ಲ.
