‘ಟಾಕ್ಸಿಕ್’ಗಾಗಿ ತಲೆ ಎತ್ತಿದ 15 ಬೃಹತ್ ಸೆಟ್‌ಗಳು; ಬರೋಬ್ಬರಿ 75 ಕೋಟಿ ಖರ್ಚು!

Untitled design (41)

ಟಾಕ್ಸಿಕ್ ಟಾಕ್ಸಿಕ್ ಟಾಕ್ಸಿಕ್.. ಸದ್ಯ ವಿಶ್ವ ಸಿನಿದುನಿಯಾದಲ್ಲಿ ಟ್ರೆಂಡಿಂಗ್‌‌ನಲ್ಲಿರೋ ಸಿನಿಮಾ ಟಾಕ್ಸಿಕ್. ಟ್ರೈಲರ್, ಸಾಂಗ್ಸ್ ಹಾಗೂ ಟೀಸರ್ಸ್ ಇಷ್ಟೆಲ್ಲಾ ಕಲರ್‌‌ಫುಲ್ ಆಗಿರೋದ್ರ ಹಿಂದೆ ಸಾವಿರಾರು ತಂತ್ರಜ್ಞರ ಕೈಚಳಕವಿದೆ. ಅದ್ರಲ್ಲೂ ಕೋಟ್ಯಂತರ ರೂಪಾಯಿಗಳಲ್ಲಿ ತಯಾರಾದ ಬೃಹತ್ ಸೆಟ್‌‌ಗಳಿವೆ. ಮೋಹನ್ ಬಿ ಕೆರೆ & ಟೀಂ ಕಲಾ ಕುಂಚದಲ್ಲಿ ಅರಳಿದ ಟಾಕ್ಸಿಕ್ ವರ್ಲ್ಡ್ ವರ್ಣನಾತೀತ. ಎಲ್ಲಿ ಫ್ರೇಮ್ ಇಟ್ರೂ ಸಹ ಅದ್ಭುತ, ಅಮೋಘ, ಅದ್ವಿತೀಯ. ಹಾಗಾದ್ರೆ ಟಾಕ್ಸಿಕ್‌ಗಾಗಿ ತಲೆ ಎತ್ತಿದ ಸೆಟ್‌‌ಗಳು ಎಷ್ಟು..? ಬಜೆಟ್ ಸಮೇತ ನಿಮ್ಮ ಮುಂದೆ ತೆರೆದಿಡ್ತೀವಿ.

ಕೆಜಿಎಫ್ ಬಳಿಕ ಯಶ್ ಗ್ಲೋಬಲ್ ಮಾರ್ಕೆಟ್ ಮೇಲೆ ಕಣ್ಣು ಹಾಕಿದ್ದು, ಅದನ್ನ ಟಾಕ್ಸಿಕ್ ಚಿತ್ರದಿಂದ ನನಸು ಮಾಡಿಕೊಳ್ಳಲು ಹೊರಟಿದ್ದಾರೆ. ಯೆಸ್.. ಟೀಸರ್‌‌ಗಳು ಹಾಗೂ ಸಾಂಗ್ಸ್‌ನಿಂದ ಹಲ್‌ಚಲ್ ಎಬ್ಬಿಸಿದ್ದ ಟಾಕ್ಸಿಕ್, ಇತ್ತೀಚೆಗೆ ಲಾಂಚ್ ಆದ ಟ್ರೈಲರ್‌‌ನಿಂದ ಹಾಲಿವುಡ್ ಮಂದಿಯ ಹುಬ್ಬೇರಿಸಿದೆ. ಅದಕ್ಕೆ ಕಾರಣ ಮೇಕಿಂಗ್. ಬರೀ ಮೇಕಿಂಗ್ ಅಷ್ಟೇ ಅಲ್ಲ.. ಪಾತ್ರಗಳು, ಕಥೆ, ಯಶ್ ಅವತಾರಗಳು ಕೂಡ ಪ್ಲಸ್ ಆಗಿದೆ.

ಯಶ್ ಅವರೇ ಕಥೆ ಬರೆದು, ಲೀಡ್‌‌ನಲ್ಲಿ ನಟಿಸಿ, ಸಹ ನಿರ್ಮಾಣ ಕೂಡ ಮಾಡಿರೋ ಟಾಕ್ಸಿಕ್ ಚಿತ್ರಕ್ಕೆ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣವಿದೆ. ಸಿನಿಮಾದ ಸ್ಯಾಂಪಲ್ಸ್ ಇಷ್ಟೆಲ್ಲಾ ಕಲರ್‌‌ಫುಲ್ ಹಾಗೂ ಬ್ಯೂಟಿಫುಲ್ ಆಗಿರೋದ್ರ ಹಿಂದೆ ಸಾಕಷ್ಟು ಮಂದಿ ತಂತ್ರಜ್ಞರ ಕೈಚಳಕವಿದೆ. ಸಿನಿಮಾಟೋಗ್ರಾಫರ್, ಆರ್ಟ್ ಡೈರೆಕ್ಟರ್‌‌ ಸೇರಿದಂತೆ ಹಗಲಿರುಳು ಸಿನಿಮಾಗಾಗಿ ದುಡಿದ ಸಾವಿರಾರು ಮಂದಿಯ ಶ್ರಮದ ಫಲ ಈ ಔಟ್‌ಪುಟ್ ಅಂದ್ರೆ ತಪ್ಪಾಗಲ್ಲ.

ಸದ್ಯ ಆರ್ಟ್ ಡೈರೆಕ್ಟರ್ ಮೋಹನ್ ಬಿ ಕೆರೆ ಟಾಕ್ಸಿಕ್ ಸಿನಿಮಾದ ಹಿಂದಿನ ಒನ್ ಆಫ್ ದಿ ಮಾಸ್ಟರ್‌‌ಮೈಂಡ್ ಟೆಕ್ನಿಷಿಯನ್. ಅವರು ಬೆಂಗಳೂರಿನ ಆರ್ಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದು, ಮುಂಬೈನಲ್ಲಿ ಅಬಿದ್ & ಟೀಂ ಕೆಲಸ ಮಾಡಿದೆ. ಆದ್ರೆ ಟಾಕ್ಸಿಕ್ ಚಿತ್ರದ ಸುಮಾರು ಶೇಕಡಾ 65 ರಿಂದ 70ರಷ್ಟು ಶೂಟಿಂಗ್ ಬೆಂಗಳೂರಿನಲ್ಲಿ ನಮ್ಮ ಕನ್ನಡದ ಯಶ್ ನೆಚ್ಚಿನ ಆರ್ಟ್ ಡೈರೆಕ್ಟರ್ ಮೋಹನ್ ಬಿ ಕೆರೆ ಕಲಾ ಕುಂಚದಲ್ಲಿ ಅರಳಿದ ಸೆಟ್‌‌ಗಳಲ್ಲೇ ಚಿತ್ರಿತವಾಗಿದೆ ಅನ್ನೋದು ವಿಶೇಷ.

ಟಾಕ್ಸಿಕ್ ಚಿತ್ರಕ್ಕಾಗಿ 8 ರಿಂದ 9 ಸೆಟ್‌‌ಗಳನ್ನ ನಿರ್ಮಿಸಿರೋ ಮೋಹನ್ ಬಿ ಕೆರೆ, ಸ್ವತಂತ್ರ ನಂತರದ ಆ ರೆಟ್ರೋ ವರ್ಲ್ಡ್‌ನ ರೀ-ಕ್ರಿಯೇಟ್ ಮಾಡಿದ್ದಾರೆ. ಹಾಗಾದ್ರೆ ಮೋಹನ್ ಅವ್ರು ನಿರ್ಮಿಸಿರೋ ಆ ಸೆಟ್‌‌ಗಳು ಯಾವ್ಯಾವು ಅಂದ್ರೆ.. ಸಿಮೆಟ್ರಿ, ರಾಯ ಅಪಾರ್ಟ್‌ಮೆಂಟ್, ಮದರ್ ಟೌನ್ ಸ್ಕ್ವೇರ್, ಪೋರ್ಟ್, ಜಾಝ್ ಕ್ಲಬ್, ಚಾಪಲ್ ಕ್ರಿಯೇಷನ್, ಓಪಿಯಮ್ ಡೆನ್, ವೆಡ್ಡಿಂಗ್ ಮ್ಯಾನ್ಷನ್, ರೈಲ್ವೇ ಟನಲ್.. ಹೀಗೆ ಚಿತ್ರದ ಪ್ರಮುಖ ದೃಶ್ಯಗಳನ್ನ ಚಿತ್ರಿಸೋ ಸೆಟ್‌‌ಗಳೆಲ್ಲಾ ಮೋಹನ್ ಬಿ ಕೆರೆ ಟೀಂನಿಂದಲೇ ತಲೆ ಎತ್ತಿವೆ.

ಟಾಕ್ಸಿಕ್ ಚಿತ್ರದ ಈ ಬೃಹತ್ ಸೆಟ್‌‌ಗಳ ನಿರ್ಮಾಣಕ್ಕಾಗಿ ಕರ್ನಾಟಕದ ಜೊತೆಗೆ ತಮಿಳುನಾಡು, ಕೇರಳ, ಹೈದ್ರಾಬಾದ್, ಮುಂಬೈ, ಉತ್ತರ ಪ್ರದೇಶ.. ಹೀಗೆ ಸುಮಾರು ಆರು ರಾಜ್ಯಗಳ 1200ಕ್ಕೂ ಅಧಿಕ ಆರ್ಟ್ ಡಿಪಾರ್ಟ್‌ಮೆಂಟ್ ಟೆಕ್ನಿಷಿಯನ್ಸ್ ಕೆಲಸ ಮಾಡಿದ್ದಾರೆ. ಬರೋಬ್ಬರಿ 16 ತಿಂಗಳ ಕಾಲ.. ಅಂದ್ರೆ ಒಂದು ವರ್ಷ 4 ತಿಂಗಳ ಕಾಲ ಮೋಹನ್ & ಟೀಂ ಕೆಲಸ ಮಾಡಿದೆ. ಬರೀ ಮೋಹನ್ ಅವರು ತಯಾರಿಸಿರೋ ಈ ಸೆಟ್‌‌ಗಳಿಗಾಗಿಯೇ 50ಕ್ಕೂ ಅಧಿಕ ಕೋಟಿ ವ್ಯಯಿಸಲಾಗಿದೆ ಅನ್ನೋದು ಅಚ್ಚರಿ.

ಮುಂಬೈನಲ್ಲಿ ಮತ್ತೊಬ್ಬ ಆರ್ಟ್ ಡೈರೆಕ್ಟರ್ ಅಬಿದ್ ಮೂರದಿಂದ 4 ಸೆಟ್‌‌ಗಳನ್ನ ನಿರ್ಮಿಸಿದ್ದು, ಕ್ಲೈಮ್ಯಾಕ್ಸ್ ಸೇರಿದಂತೆ ಒಳಾಂಗಣ ಶೂಟಿಂಗ್ ಎಲ್ಲಾ ಅದರಲ್ಲೇ ಆಗಿದೆ. ಒಟ್ಟಾರೆ ಸುಮಾರು 75 ಕೋಟಿಗೂ ಅಧಿಕ ಮೊತ್ತವನ್ನ ಟಾಕ್ಸಿಕ್ ಚಿತ್ರದ ಸೆಟ್‌‌ಗಳ ನಿರ್ಮಾಣಕ್ಕೆ ವ್ಯಯಿಸಿ, ಇಂತಹ ಅದ್ಭುತ ಔಟ್‌ಪುಟ್ ತೆಗೆದಿರೋದು ಗ್ರೇಟ್ ಅನಿಸಿದೆ. ಟಾಕ್ಸಿಕ್ ಬಜೆಟ್ 500ರಿಂದ 600 ಕೋಟಿ ಎನ್ನಲಾಗ್ತಿದ್ದು, ಆ ಪೈಕಿ ಹೆಚ್ಚು ಕಡಿಮೆ 100 ಕೋಟಿ ಸೆಟ್‌ ವರ್ಕ್‌‌ಗಳಿಗೇ ಖರ್ಚು ಮಾಡಿರೋದು ನ್ಯೂ ರೆಕಾರ್ಡ್.

ಒಟ್ಟಾರೆ ಮೋಹನ್ ಅವ್ರ ಸೆಟ್‌‌ಗಳು ಒಂದಕ್ಕಿಂತ ಒಂದು ಡಿಫರೆಂಟ್ ಆಗಿದ್ದು, ಗೀತು ಮೋಹನ್‌ದಾಸ್ ಹಾಗೂ ಯಶ್ ಕನಸುಗಳಿಗೆ ರೆಕ್ಕೆ ಕಟ್ಟಿದ ಮಹಾನ್ ತಂತ್ರಜ್ಞನಾಗಿ ಹೊರಹೊಮ್ಮಿದ್ದಾರೆ.

ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version