‘ಟಾಕ್ಸಿಕ್’ ಸುನಾಮಿ..1000Cr ಪ್ರೀ-ರಿಲೀಸ್ ಬ್ಯುಸಿನೆಸ್

ಭಾರತೀಯ ಚಿತ್ರರಂಗದ ಗೇಮ್ ಚೇಂಜರ್ ರಾಕಿಭಾಯ್

Untitled design 2026 02 14T134212.411

ಸ್ಯಾಂಡಲ್‌ವುಡ್‌‌ನ ದಿಕ್ಕು, ದೆಸೆ ಬದಲಿಸಿದ್ದ ರಾಕಿಭಾಯ್ ಯಶ್, ಇದೀಗ ಇಂಡಿಯನ್ ಸಿನಿಮಾದ ಪಾಲಿಗೆ ಗೇಮ್ ಚೇಂಜರ್ ಆಗ್ತಿದ್ದಾರೆ. ಟಾಕ್ಸಿಕ್ ರಿಲೀಸ್‌ಗೂ ಮೊದಲೇ ಸಾವಿರ ಕೋಟಿ ಬ್ಯುಸಿನೆಸ್ ಮಾಡೋ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಅಷ್ಟೇ ಅಲ್ಲ, ಕನ್ನಡವನ್ನ ಅಪಮಾನಿಸಿದವ್ರಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಕೂಡ ನೀಡಿದ್ದಾರೆ. ನೇರವಾಗಿ ದಿಲ್‌ರಾಜು ದಿಲ್‌ಗೆ ಹೊಡೆದ ಯಶ್ ರಾಕಿಂಗ್ ನ್ಯೂಸ್‌ನ ನೀವು ಓದಲೇಬೇಕು…

ಕೆಜಿಎಫ್ ಸಿನಿಮಾದ ಮೊದಲ ಭಾಗ ಬಂದಾಗಲೇ ದಿಸ್ ಈಸ್ ಜಸ್ಟ್ ಬಿಗಿನಿಂಗ್ ಗಾಯ್ಸ್ ಅಂದಿದ್ರು ರಾಕಿಂಗ್ ಸ್ಟಾರ್ ಯಶ್. ಆ ಮಾತಿನಂತೆ ಹಂತ ಹಂತವಾಗಿ ಕನ್ನಡ ಚಿತ್ರರಂಗದ ದಿಕ್ಕು ದೆಸೆ ಬದಲಿಸಿದ್ರು ರಾಕಿಭಾಯ್. ಸಿನಿಮಾ ಮೇಲಿರೋ ಭಕ್ತಿ, ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿ ಗೆದ್ದಿ ತೋರಿಸಿದ್ರು. ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಬಹುದು ಅನ್ನೋದನ್ನ ಪ್ರೂವ್ ಮಾಡಿದ್ರು. ಕನಸು ಕಾಣೋದು ಮುಖ್ಯವಲ್ಲ.. ಅದನ್ನ ದೊಡ್ಡದಾಗಿಯೇ ಕಾಣಿ. ಅಲ್ಲದೆ, ಆ ಕನಸಿನ ಬೆನ್ನು ಹತ್ತಿ ಸಾಧಿಸಿಯೇ ಬಿಡಿ ಅನ್ನೋದು ಯಶ್ ಆಂತರ್ಯ.

ಕೆಜಿಎಫ್‌‌-2ನಿಂದ ಸಾವಿರ ಕೋಟಿ ಸರದಾರನ ಪಟ್ಟಕ್ಕೇರಿದ ಯಶ್, ಇಡೀ ಬಾಲಿವುಡ್‌ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ರು. ಇದೀಗ ಟಾಕ್ಸಿಕ್ ಸರದಿ. ಇಡೀ ವಿಶ್ವ ಸಿನಿದುನಿಯಾ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಹಾಗೂ ಅವ್ರ ಟಾಕ್ಸಿಕ್‌‌ನತ್ತ ಹುಬ್ಬೇರಿಸಿ ನೋಡುವಂತೆ ಮಾಡ್ತಿದ್ದಾರೆ. 600 ಕೋಟಿ ದುಬಾರಿ ಬಜೆಟ್‌‌ನಲ್ಲಿ ತಯಾರಾದ ಕನ್ನಡದ ಅಥ್ವಾ ಇಂಡಿಯಾದ ಹಾಲಿವುಡ್ ಮೂವಿ ಈ ಟಾಕ್ಸಿಕ್. ಜಸ್ಟ್ ಟೀಸರ್ ಹಾಗೂ ಸ್ಟಾರ್‌ಕಾಸ್ಟ್‌‌ ನೋಡಿಯೇ ದಂಗಾಗಿದೆ ಇಂಡಸ್ಟ್ರಿ.

ಆಂಧ್ರ-ತೆಲಂಗಾಣ ಟಾಕ್ಸಿಕ್ ಡಿಸ್ಟ್ರಿಬ್ಯೂಷನ್ ರೈಟ್ಸ್ 120 ಕೋಟಿ, ಓವರ್‌ಸೀಸ್ ರೈಟ್ಸ್ 105 ಕೋಟಿ, ನಾರ್ತ್ ಇಂಡಿಯಾ ಹಾಗೂ ನೇಪಾಳ್ ರೈಟ್ಸ್ ಬರೋಬ್ಬರಿ 250 ಕೋಟಿ ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿದೆ. ಅಲ್ಲದೆ ತಮಿಳು ರೈಟ್ಸ್ 85 ಕೋಟಿ, ಮಲಯಾಳಂ ರೈಟ್ಸ್ 50 ಕೋಟಿ ಎನ್ನಲಾಗ್ತಿದೆ. ಇನ್ನೂ ಕರ್ನಾಟಕ ಡಿಸ್ಟ್ರಿಬ್ಯೂಷನ್ ಖುದ್ದು ಕೆವಿಎನ್ ಹಾಗೂ ಯಶ್ ಅವರೇ ಮಾಡ್ತಿದ್ದು, ಓವರ್ ಆಲ್ ಇಲ್ಲಿಯವರೆಗೆ ಸಾವಿರ ಕೋಟಿ ಬ್ಯುಸಿನೆಸ್ ಆಗಿದೆ ಎನ್ನಲಾಗ್ತಿದೆ. ಇದನ್ನ ನೋಡ್ತಿದ್ರೆ ಭಾರತೀಯ ಚಿತ್ರರಂಗದ ಪಾಲಿಗೆ ಯಶ್ ರಿಯಲ್ ಗೇಮ್ ಚೇಂಜರ್ ಆಗಿದ್ದಾರೆ.

ಸಾಮಾನ್ಯವಾಗಿ ಇಂಡಿಯನ್ ಸಿನಿಮಾಗಳು ಸಾವಿರ ಕೋಟಿ ಗಳಿಸೋದೇ ಕಷ್ಟಸಾಧ್ಯ. ಅಂಥದ್ದು ರಿಲೀಸ್‌ಗೂ ಮೊದಲೇ ಪ್ರೀ ಬ್ಯುಸಿನೆಸ್‌‌ನಲ್ಲಿ ಸಾವಿರ ಕೋಟಿ ಗಳಿಸಿ, ಮಗದೊಮ್ಮೆ ಸಾವಿರ ಕೋಟಿ ಸರದಾರ ಅನಿಸಿಕೊಂಡಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್.

ಯಶ್ ಬರೀ ಸ್ಟಾರ್ ಅಥ್ವಾ ಸೂಪರ್ ಸ್ಟಾರ್ ಮಾತ್ರವಲ್ಲ. ಅದಕ್ಕಿಂತ ಹೆಚ್ಚಾಗಿ ಆತ ಸ್ವಾಭಿಮಾನಿ ಕನ್ನಡಿಗ. ಪ್ರತಿಯೊಬ್ಬ ಕನ್ನಡಿಗ ಹೆಮ್ಮೆಯಿಂದ ಕಾಲರ್ ಮೇಲಕ್ಕೆ ಎತ್ತಿ ನಾನು ಕನ್ನಡಿಗ ಅಂತ ಹೇಳಿಕೊಳ್ಳುವಂತೆ ಮಾಡಿದವರು. ಅದ್ರಲ್ಲೂ ಕನ್ನಡಕ್ಕೆ ಅಪಮಾನ ಆದ್ರೆ, ಯಾರಾದ್ರೂ ಎಲ್ಲಾದ್ರೂ ಅವಮಾನಿಸಿದ್ರೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಅನ್ನೋ ರೀತಿ ಮಾತಿಗೆ ಮಾತು ತಿರುಗೇಟು ನೀಡಿ ಬಿಡ್ತಾರೆ ಯಶ್. ಅದಕ್ಕೆ ಕೆಜಿಎಫ್ ಸಿನಿಮಾದ ಪ್ರಮೋಷನ್ಸ್ ವೇಳೆ ಹೈದ್ರಾಬಾದ್‌‌ನಲ್ಲಿ ನಡೆದ ಇನ್ಸಿಟೆಂಡ್ ಪ್ರತ್ಯಕ್ಷ ಸಾಕ್ಷಿ.

ಹೌದು.. ಖ್ಯಾತ ನಿರ್ಮಾಪಕ ದಿಲ್‌ರಾಜು ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ಕೇವಲವಾಗಿ ಮಾತನಾಡಿದ್ರು. ಕನ್ನಡ ಇಂಡಸ್ಟ್ರಿ ಬಹಳ ಚಿಕ್ಕದು.. ಅಲ್ಲಿ ಐದು ಕೋಟಿ ಆರು ಕೋಟಿ ಬಜೆಟ್‌‌ನಲ್ಲಿ ಸಿನಿಮಾ ಮಾಡ್ತಾರೆ ಅಷ್ಟೇ ಅನ್ನೋ ಮಾತುಗಳನ್ನ ನಾವು ಕೇಳ್ತಿದ್ವಿ. ಆದ್ರೀಗ ದೊಡ್ಡ ಸಿನಿಮಾ ಮಾಡಿದ್ದಾರೆ ಅನ್ನೋ ಅರ್ಥದಲ್ಲಿ ಮಾತನಾಡಿದ್ರು. ಅದಕ್ಕೆ ಅಲ್ಲೇ ಇದ್ದ ಯಶ್ ನಮ್ಮ ಸಿನಿಮಾಗಳು 50 ಕೋಟಿ ಕಲೆಕ್ಷನ್ ಕೂಡ ಮಾಡಿವೆ ಅದು ಕೆಲವರಿಗೆ ಗೊತ್ತಿಲ್ಲವಷ್ಟೇ ಅಂತ ಕೌಂಟರ್ ಡೈಲಾಗ್ ಹೊಡೆದಿದ್ರು.

ಅದಾದ ಬಳಿಕ ಕೆಜಿಎಫ್ ಸಿನಿಮಾದಿಂದ ಟಾಲಿವುಡ್ ಬಾಕ್ಸ್ ಆಫೀಸ್ ಶೇಕ್ ಮಾಡಿದ್ರು ರಾಕಿಭಾಯ್ ಯಶ್. ಆ ಗತ್ತು, ಗಮ್ಮತ್ತಿನ ಪ್ರತಿಫಲವೇ ಈಗ ಅದೇ ದಿಲ್‌ರಾಜು ಒನ್ಸ್ ಅಗೈನ್ ಯಶ್ ಅವ್ರ ಟಾಕ್ಸಿಕ್ ಚಿತ್ರದ ಆಂಧ್ರ-ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್‌ನ ಬರೋಬ್ಬರಿ 120 ಕೋಟಿ ಕೊಟ್ಟು ಖರೀದಿಸಿದ್ದಾರೆ. ಇದಲ್ಲವೇ ನಿಜವಾಗಿಯೂ ರೂಲ್ ಮಾಡೋದು ಅಂದ್ರೆ..? ಅವಮಾನಿಸಿದವ್ರ ಮುಂದೆ ಸನ್ಮಾನ ಪಡೆಯೋದು ಯಶ್ ವ್ಯಕ್ತಿತ್ವ. ಈ ಮೂಲಕ ದಿಲ್‌ರಾಜು ದಿಲ್‌ಗೆ ನೇರವಾಗಿಯೇ ಹೊಡೆದಂತಿದೆ ಟಾಕ್ಸಿಕ್ ರಾಯ.

ಇತ್ತೀಚೆಗೆ ತೆಲುಗು ಸಿನಿಮಾದ ಸುದ್ದಿಗೋಷ್ಠಿವೊಂದಕ್ಕೆ ತೆರಳಿದ್ದ ದಿಲ್‌ರಾಜುಗೆ ಅಲ್ಲಿನ ಪತ್ರಕರ್ತರು 120 ಕೋಟಿ ದೊಡ್ಡ ಮೊತ್ತಕ್ಕೆ ಟಾಕ್ಸಿಕ್ ಖರೀದಿಸಿರೋದು ಜನ ಏನೇನೋ ಅಂದುಕೊಳ್ತಿದ್ದಾರೆ ಅಂತ ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿರೋ ದಿಲ್‌ರಾಜು, ನಾನು ಬ್ಯಾಂಕ್ ಸ್ಟೇಟ್ಮೆಂಟ್ ತೋರಿಸ್ಲಾ ಅಂತ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.

ದಿಲ್‌ರಾಜುಗೂ ಗೊತ್ತಾಗಿದೆ ನಮ್ಮ ಯಶ್ ಹಾಗೂ ಅವ್ರ ಸಿನಿಮಾಗಳ ಗಮ್ಮತ್ತು ಎಂಥದ್ದು ಅಂತ. ಹಾಗಾಗಿಯೇ ಈಗೀಗ ಕನ್ನಡ ಚಿತ್ರದ ಪರ ವಹಿಸಿಕೊಂಡು ಮಾತಾಡಿದ್ದಾರೆ. ಇದು ನಿಜಕ್ಕೂ ಸ್ವಾಭಿಮಾನಿ ಕನ್ನಡಿಗ ಯಶ್‌ರ ರಾಜಮಾರ್ಗವೇ ಸರಿ. ಒಟ್ಟಿನಲ್ಲಿ ಟಾಕ್ಸಿಕ್ ಸಿನಿಮಾದಿಂದ ಹಾಲಿವುಡ್ ಮೇಕರ್ಸ್ ಜೊತೆ ಅಲ್ಲಿನ ಆಡಿಯೆನ್ಸ್ ಕೂಡ ನಮ್ಮ ಕನ್ನಡ ಚಿತ್ರರಂಗಕ್ಕೆ ಫ್ಯಾನ್ಸ್ ಆದ್ರೂ ಅಚ್ಚರಿಯಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version