ಬಾಲಿವುಡ್‌ನ ಖಾನ್, ಕಪೂರ್‌ಗಳಷ್ಟೇ ಕ್ರೇಜ್ ಇರೋ ನಮ್ಮ ಕನ್ನಡದ ಸೂಪರ್ ಸ್ಟಾರ್ ಅಂದ್ರೆ ಅದು ರಾಕಿಂಗ್ ಸ್ಟಾರ್ ಯಶ್. ಯೆಸ್.. ಕೆಜಿಎಫ್‌ನಿಂದ ಎಲ್ಲರನ್ನ ಕ್ಲೀನ್ ಬೋಲ್ಡ್ ಆಗಿಸಿದ್ದ ರಾಕಿಭಾಯ್, ಇದೀಗ ಟಾಕ್ಸಿಕ್‌ನಿಂದ ತಮ್ಮ ಗತ್ತು, ಗೈರತ್ತು ಏನು ಅನ್ನೋದನ್ನ ಸಿನಿದುನಿಯಾಗೆ ತೋರಿಸೋಕೆ ಸಜ್ಜಾಗಿದ್ದಾರೆ. ಪ್ರೀ-ರಿಲೀಸ್ ಬ್ಯುಸಿನೆಸ್ ಜೋರಾಗಿ ನಡೀತಿದ್ದು, ಆಂಧ್ರ ಟ್ರೆಂಡ್ ಹೇಗಿದೆ ಅನ್ನೋದಕ್ಕೆ ಈ ಸ್ಟೋರಿ ನೋಡಿ.
ಕೆಜಿಎಫ್ ಸಿನಿಮಾ ಬರೀ ಯಶ್ ಅಥ್ವಾ ನಮ್ಮ ಕನ್ನಡ ಚಿತ್ರರಂಗದ ನಸೀಬು ಬದಲಿಸಲಿಲ್ಲ. ಇಡೀ ಭಾರತೀಯ ಚಿತ್ರರಂಗವನ್ನ ವರ್ಲ್ಡ್ ಸಿನಿದುನಿಯಾ ನೋಡುವ ವಿಧಾನವೇ ಬದಲಾಯ್ತು. ಅದಕ್ಕೆ 1250 ಕೋಟಿ ಕೆಜಿಎಫ್-2 ಬ್ಯುಸಿನೆಸ್. ಅಷ್ಟೇ ಅಲ್ಲ, ಯಶ್ ಅನ್ನೋ ಮಾನ್‌ಸ್ಟರ್ ಕೂಡ ಪ್ರಮುಖ ಪಾತ್ರ ವಹಿಸಿದ್ರು. ಅದೇ ಕಾರಣದಿಂದ ಕನ್ನಡಿದಿಂದಲೇ ಹಾಲಿವುಡ್ ಶೈಲಿಯ ಸಿನಿಮಾ ಮಾಡಿ, ಪ್ರೇಕ್ಷಕರಿಗೆ ಉಣಬಡಿಸೋಕೆ ಸಜ್ಜಾಗಿದ್ದಾರೆ ರಾಕಿಭಾಯ್.
ಕಥೆ, ಪಾತ್ರಗಳು, ಮೇಕಿಂಗ್, ಟೆಕ್ನಾಲಜಿ.. ಹೀಗೆ ಎಲ್ಲವನ್ನ ಸಮರ್ಪಕವಾಗಿ ಬಳಸಿಕೊಂಡೇ ವಿಶ್ವ ಸಿನಿದುನಿಯಾ ತಿರುಗಿ ನೋಡುವಂಯತಹ ಚಿತ್ರ ಕಟ್ಟಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ರಿವೀಲ್ ಆದ ಟೀಸರ್ 30 ಕೋಟಿಗೂ ಅಧಿಕ ವೀವ್ಸ್ ಪಡೆದು, ಸಖತ್ ಸೆನ್ಸೇಷನ್ ಆಗಿದೆ. ಆ ದೃಶ್ಯಗುಚ್ಚದಿಂದೇ ಚಿತ್ರದ ಆಳ, ಅಗಲ ಎಂಥದ್ದು ಅನ್ನೋದ್ರ ಹಿಂಟ್ ಸಿಕ್ಕಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹಾಕಿದೆ. ಯಶ್ ಕೂಡ ಸಹ ನಿರ್ಮಾಣಕ್ಕೆ ಕೈ ಜೋಡಿಸಿದ್ದು, ಬರೋಬ್ಬರಿ 600 ಕೋಟಿಯಷ್ಟು ಹಣ ಸುರಿದು ಟಾಕ್ಸಿಕ್ ತಯಾರಿಸಿದ್ದಾರೆ. ಅಂದಹಾಗೆ ರಿಲೀಸ್‌ಗೂ ಮೊದಲೇ ಹಾಕಿರೋ ಬಂಡವಾಳ ವಾಪಸ್ ಬರೋ ಸೂಚನೆ ಸಿಕ್ಕಿದೆ. ಹೌದು.. ಯಶ್ ಟ್ರೆಂಡ್‌ಗೆ ಎಲ್ಲೆಡೆ ಟಾಕ್ಸಿಕ್ ಬ್ಯಾಂಡ್ ಜೋರಿದೆ. ಹಾಕಿರೋ ಹಣವನ್ನ ಕಣ್ಮುಚ್ಚಿಕೊಂಡು ರಿಲೀಸ್‌ಗೂ ಮುನ್ನವೇ ಪಡೆಯಲಿದೆ ಅನ್ನೋದು ಸಿನಿಪಂಡಿತರ ಲೆಕ್ಕಾಚಾರವಾಗಿದೆ.
ಗ್ಲೋಬಲ್ ಮಾರ್ಕೆಟ್‌ನಲ್ಲಿ ರಾಕಿಭಾಯ್‌ಗೆ ಫುಲ್ ಡಿಮ್ಯಾಂಡ್
ಇದು ಇಂಡಿಯನ್ ಸಿನಿಮಾ ಅಲ್ಲ..ಕನ್ನಡದ ಹಾಲಿವುಡ್ ಚಿತ್ರ
ಸದ್ಯ ಟಾಕ್ಸಿಕ್ ಚಿತ್ರಕ್ಕೆ ಆಂಧ್ರ-ತೆಲಂಗಾಣದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದೆ. ಹೌದು.. ಆಂಧ್ರದಲ್ಲಿ ಖ್ಯಾತ ಪ್ರೊಡಕ್ಷನ್ ಹೌಸ್ ಎಸ್‌ವಿಸಿ ಬ್ಯಾನರ್ ಡಿಸ್ಟ್ರಿಬ್ಯೂಷನ್‌ಗೆ ಮುಂದಾಗಿದೆ. ಅದು ದಾಖಲೆ ಮೊತ್ತಕ್ಕೆ ವಿತರಣಾ ಹಕ್ಕುಗಳು ಮಾರಾಟವಾಗಿದ್ದು, ಆಂಧ್ರ ಹಾಗೂ ತೆಲಂಗಾಣ ಎರಡರಿಂದ 120 ಕೋಟಿ ಬೃಹತ್ ಮೊತ್ತಕ್ಕೆ ಸೋಲ್ಡ್ ಔಟ್ ಆಗಿರೋದು ಎಲ್ಲರ ಹುಬ್ಬೇರಿಸಿದೆ. ಒಟ್ಟಾರೆ ಕನ್ನಡ ಸಿನಿಮಾವೊಂದು ಹೀಗೆ ಆಂಧ್ರ ಒಂದರಲ್ಲೇ 120 ಕೋಟಿಗೂ ಅಧಿಕ ಮೊತ್ತಕ್ಕೆ ಡಿಸ್ಟ್ರಿಬ್ಯೂಷಬ್ ಮಾರಾಟ ಮಾಡಿರೋದು ರೆಕಾರ್ಡ್ ಬ್ರೇಕಿಂಗ್ ದಾಖಲೆಯೇ ಸರಿ. ಇದನ್ನ ನೋಡ್ತಿದ್ರೆ ಯಶ್‌ಗೆ ಯಶ್ ಮಾತ್ರ ಸರಿಸಾಟಿ ಅನಿಸ್ತಿದೆ.
ಒಂದ್ಕಡೆ ಧುರಂಧರ್-2 ಮಾರ್ಚ್ 19ರಂದು ಟಾಕ್ಸಿಕ್ ಜೊತೆಗೇ ತೆರೆಗೆ ಬರ್ತಿದೆ. ಮತ್ತೊಂದ್ಕಡೆ ಪವರ್ ಸ್ಟಾರ್ ಪವನ್ ಕಲ್ಯಾಣ್‌ರ ಉಸ್ತಾದ್ ಸಿನಿಮಾ ಕೂಡ ಟಾಕ್ಸಿಕ್ ಬಂದ ಮರು ವಾರವೇ ಬಿಗ್‌ಸ್ಕ್ರೀನ್‌ಗೆ ಬರ್ತಿದೆ. ಅವೆರಡರ ನಡುವೆ ಹೀಗೆ ಹೆಮ್ಮೆಯ ಕನ್ನಡಿಗ ಯಶ್‌ರ ಟಾಕ್ಸಿಕ್ ಸೌಂಡ್ ಮಾಡ್ತಿರೋದು ಕನ್ನಡಿಗರಾದ ನಾವುಗಳ ನಿಜಕ್ಕೂ ಹೆಮ್ಮೆ ಪಡುವ ವಿಷಯ.