ಚೇತನ್ ನಾಯ್ಕ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ನಿನ್ನೆ ನಡೆದ ಮನದ ಕಡಲು ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ನಟ ಯಶ್ ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜನ ಕನ್ನಡ ಸಿನಿಮಗಳನ್ನು ನೋಡೋದಿಲ್ಲ ಎಂಬುದು ಅನೇಕರ ದೂರು. ಒಬ್ಬೊಬ್ಬರದ್ದು ಒಂದೊಂದು ರೀತಿಯ ಅಭಿಪ್ರಾಯ ಇದೆ. ಕೆಲವರು ಉತ್ತಮ ಸಿನಿಮಾಗಳು ಬರುತ್ತಿಲ್ಲ ಎಂದು ಹೇಳಿದ್ರೆ, ಇನ್ನೂ ಕೆಲವರು ಜನರೇ ಸಿನಿಮಾ ನೋಡಲು ಹೋಗುತ್ತಿಲ್ಲ ಅನ್ನೋ ಮಾತುಗಳನ್ನು ಹೇಳಿದ್ದಾರೆ. ಈಗ ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಪ್ರೇಕ್ಷಕರ ಬಳಿ ಅವರು ಒಂದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ ಎಂದಾಗ ಬೇಸರ ಆಗೋದು ಏನು ಗೊತ್ತಾ? ‘ನಾವು ಗೋಳಾಡೋದಕ್ಕಿಂತ ಒಳ್ಳೆಯ ಸಿನಿಮಾ ಮಾಡಬೇಕು. ನಾನು ಕೂಡ ಒಮ್ಮೆ ಸಂದರ್ಶನದಲ್ಲಿ ಜನರು ಕನ್ನಡ ಸಿನಿಮಾಗಳನ್ನು ನೋಡಲ್ಲ ಎಂದು ಹೇಳಿದ್ದೆ. ನಂತರ ಕೂತು ಯೋಚನೆ ಮಾಡಿದಾಗ ನನಗೆ ಅನ್ನಿಸಿತು. ನಮ್ಮ ಕೆಲಸ ನಾವು ಮಾಡಿ, ಒಳ್ಳೆಯ ಸಿನಿಮಾ ಕೊಟ್ರೆ, ಕನ್ನಡಿಗರು ಯಾವಾಗಲೂ ಕೈ ಬಿಡಲ್ಲ’ ಎಂದಿದ್ದಾರೆ ಯಶ್.
‘ಅಭಿಮಾನಿಗಳು ಒಳ್ಳೆಯ ಚಿತ್ರಗಳಿಗೆ ಹರಸಿಯೇ ಹರಸುತ್ತಾರೆ. ಹೊಸಬರನ್ನು ಲಾಂಚ್ ಮಾಡಿ, ಹೊಸಬರ ಇವೆಂಟ್ ಗೆ ಹೋಗಿ ಎಂದು ಕೇಳಿ ಕೊಳ್ಳುತ್ತಾರೆ. ನಾನು ಬಂದೆ ಅಂತ ಸಿನಿಮಾ ಗೆಲ್ಲಲ್ಲ. ನಿಜವಾದ ಗೆಲುವು ಸಿಗೋದು ನೀವು ಮಾಡೋ ಕೆಲಸದಿಂದ. ಚಿತ್ರರಂಗದವರ ಬಳಿ ಕೇಳೋದು ಒಂದೇ.. ಒಳ್ಳೆಯ ಕೆಲಸ ಕಲಿಯೋಣ, ದೊಡ್ಡ ಗುರಿ ಇಟ್ಟಿಕೊಳ್ಳೋಣ, ಸ್ವಾಭಿಮಾನ ಇಟ್ಟಿಕೊಳ್ಳೋಣ. ಆದ್ರೆ ಬೇಡುವುದು ಬೇಡ. ಬೇರೆಯವರು ಗೌರವಿಸೋ ತರ ಕೆಲಸ ಮಾಡೋಣ. ನಟನೆ ಮಾತ್ರ ಸಿನಿಮಾ ಅಲ್ಲ. ಟ್ರೆಂಡ್ ಏನಾಗ್ತಿದೆ..? ನಿಮ್ಮ ಜವಾಬ್ದಾರಿ ಎನು ಅಂತ ತಿಳಿದುಕೊಳ್ಳಬೇಕು’ ಎಂದು ಹೊಸ ಜನರೇಶನ್ ಗೆ ಯಶ್ ಮನವರಿಕೆ ಮಾಡಿದರು.
ಯಶ್ ಮೇಲೆ ಡೈ ಹಾರ್ಡ್ ಫ್ಯಾನ್ಸ್ ಗೆ ವಿಶೇಷವಾದ ಪ್ರೀತಿ ಇದೆ. ಈ ಬಗ್ಗೆ ಅವರು ಮಾತನಾಡಿದ್ದು, ‘ನಮ್ಮ ಅಭಿಮಾನಿಗಳ ಋಣ ಹೇಗೆ ತೀರಿಸಬೇಕೋ ಗೊತ್ತಾಗುತ್ತಿಲ್ಲ. ನಿಮ್ಮ ಧ್ವನಿ ನನಗೆ ದೊಡ್ಡಸ್ತಿಕೆ ತಂದುಕೊಡಲ್ಲ. ಆದ್ರೆ ಜವಾಬ್ದಾರಿಯನ್ನಂತೂ ತಂದು ಕೊಡುತ್ತದೆ’ ಎಂದಿದ್ದಾರೆ. ಒಟ್ಟಾರೆ ನಟ ಯಶ್ ಅವರಿಗೆ ಒಂದು ಕ್ಲ್ಯಾರಿಟಿ ಇದೆ. ಮಾಡೋ ಕೆಲಸ ಬಗ್ಗೆ ಬದ್ಧತೆ ಇದೆ. ನಿಷ್ಠೆ & ಪ್ರಾಮಾಣಿಕವಾಗಿ ಇಟ್ಟ ಗುರಿಯತ್ತ ಹೆಜ್ಜೆ ಇಡೋ ಛಲದಂಕಮಲ್ಲ. ಹಾಗಾಗಿಯೇ ಅವರ ಕನಸುಗಳು ಸದಾ ದೊಡ್ಡದಾಗಿರುತ್ತೆ. ಸದ್ಯ ಇಂಡಸ್ಟ್ರಿ ಬಗ್ಗೆ ಯಶ್ ಅಡಿರೋ ಒಂದೊಂದು ಮಾತು ಅಕ್ಷರಶಃ ಸತ್ಯ. ಇದನ್ನ ಅರಿತರೆ ಚಿತ್ರರಂಗಕ್ಕೆ ಒಳ್ಳೆಯದಾಗಲಿದೆ.
ಚೇತನ್ ನಾಯ್ಕ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್