ಒಂದೇ ವಾರಕ್ಕೆ 1000ಕೋಟಿ..ಯಶ್ ರಾಮಾಯಣ ರಾಕಿಂಗ್

ಲಂಡನ್‌‌‌‌ನಲ್ಲಿ ಗಾಡ್ಜಿಲ್ಲಾ ರೆಕಾರ್ಡ್ ಬ್ರೇಕ್ ಮಾಡಿದ ರಾಮಾಯಣ

Untitled Design 2026 11 13T142513.691

ಕೆಜಿಎಫ್ ಚಾಪ್ಟರ್-2 ಬಳಿಕ ಬಾಕ್ಸ್ ಆಫೀಸ್‌‌ನಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ದಾಖಲೆ ಬರೆದಿದ್ದಾರೆ. ಒಂದೇ ವಾರದಲ್ಲಿ ರಾಮಾಯಣ ಚಿತ್ರ ಸಾವಿರ ಕೋಟಿ ಕ್ಲಬ್ ಸೇರಿದ್ದು.. ಎಲ್ಲೆಡೆ ರಾಮಜಪ ಶುರುವಾಗಿದೆ. ರಾವಣನ ಅಬ್ಬರ, ಆರ್ಭಟಕ್ಕೆ ವಿಶ್ವದ ಮೂಲೆ ಮೂಲೆಯಿಂದ ಪ್ರಶಂಸೆಗಳ ಸುರಿಮಳೆ ಆಗ್ತಿದ್ದು, ಕರ್ನಾಟಕದಲ್ಲಿ ಕೂಡ ದಾಖಲೆ ಮೊತ್ತ ಗಳಿಸೋ ಮೂಲಕ ರಾರಾಜಿಸ್ತಿದೆ. ವಿಶೇಷ ಅಂದ್ರೆ ಲಂಡನ್‌‌ನಲ್ಲಿ ಹಾಲಿವುಡ್ ಗಾಡ್ಜಿಲ್ಲಾ ದಾಖಲೆ ಧೂಳಿಪಟ ಮಾಡಿದೆ.

ರಾಮನಾಮಕ್ಕೆ ಇರೋ ಸಾಮರ್ಥ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾಕಂದ್ರೆ ರಾಮಾಯಣ ಸಿನಿಮಾ ಕೇವಲ ಒಂದೇ ಒಂದು ವಾರದಲ್ಲಿ ವರ್ಲ್ಡ್‌ವೈಡ್ ಒಂದು ಸಾವಿರ ಕೋಟಿಗೂ ಅಧಿಕ ಕೋಟಿ ಗಳಿಸೋ ಮೂಲಕ ಸಾವಿರ ಕೋಟಿ ಕ್ಲಬ್ ಸೇರಿದೆ. ಯೆಸ್.. ನಮ್ಮ ರಾಕಿಂಗ್ ಸ್ಟಾರ್ ಯಶ್, ರಣ್ಬೀರ್ ಕಪೂರ್, ಸಾಯಿ ಪಲ್ಲವಿ ನಟನೆಯ ರಾಮಾಯಣ ಚಿತ್ರ ವಿಶ್ವದ ಮೂಲೆ ಮೂಲೆಯಲ್ಲಿ ಪ್ರೇಕ್ಷಕರ ಹೃದಯ ಗೆಲ್ಲುತ್ತಿದೆ. ಡಿವೈನ್ ಫೀಲ್‌ ಜೊತೆ ಮಸ್ತ್ ಮೇಕಿಂಗ್‌ನಿಂದ ನೋಡುಗರಿಗೆ ನಿರೀಕ್ಷೆಗೂ ಮೀರಿದ ಮನರಂಜನೆ ನೀಡ್ತಿದೆ.

ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ನಿರ್ದೇಶನದಲ್ಲಿ ತಯಾರಾದ ಈ ಸಿನಿಮಾಗೆ ಪ್ರೈಮ್ ಫೋಕಸ್ ಸ್ಟುಡಿಯೋಸ್ ಬ್ಯಾನರ್‌‌ನಡಿ ನಮಿತ್ ಮಲ್ಹೋತ್ರಾ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌‌ನಡಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಬಂಡವಾಳ ಹೂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಾವಿರ ಕೋಟಿ ಗಳಿಸಿರೋ ರಾಮಾಯಣ, ಯಶ್ ಕರಿಯರ್‌‌‌ನಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿದೆ. ಕರ್ನಾಟಕದಲ್ಲಿಯೂ 100 ಕೋಟಿ ಗ್ರಾಸ್ ಗಳಿಕೆ ಮಾಡುವ ಮೂಲಕ ಕನ್ನಡಿಗರಿಗೆ ಹೆಮ್ಮೆ ತರಿಸಿದೆ.

ಈ ಮೂಲಕ ಹೆಮ್ಮೆಯ ಕನ್ನಡಿಗ ಯಶ್ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ವಿಶ್ವದಾದ್ಯಂತ ಗಳಿಸಿದ ಒಟ್ಟು ಮೊತ್ತದಲ್ಲಿ ಕರ್ನಾಟಕದ ಪಾಲು ಶೇ.10ರಷ್ಟಿರುವುದು ವಿಶೇಷ. ಕನ್ನಡದ ಮಣ್ಣಿನ ಪ್ರತಿಭೆಯೊಂದು ಜಾಗತಿಕ ಮಟ್ಟದಲ್ಲಿ ಈ ಪರಿಯ ಯಶಸ್ಸು ಸಾಧಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ವರ್ಲ್ಡ್‌‌ವೈಡ್ ಸಾವಿರ ಕೋಟಿ ಗಳಿಸಿದ ಯಶ್ ಅವರ 2ನೇ ಚಿತ್ರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ ರಾಮಾಯಣ. ಕರ್ನಾಟಕದಲ್ಲಿ 100 ಕೋಟಿ ಗ್ರಾಸ್ ಗಳಿಸಿದ ಅವರ 3ನೇ ಚಿತ್ರ ಎಂಬ ದಾಖಲೆಗೂ ಈ ಸಿನಿಮಾ ಸಾಕ್ಷಿಯಾಗಿದೆ. ಈ ಹಿಂದೆ ಕೆಜಿಎಫ್-2 ಮೂಲಕ ಗ್ಲೋಬಲ್ ಮಾರ್ಕೆಟ್‌‌ನಲ್ಲಿ ಕನ್ನಡ ಚಿತ್ರರಂಗದ ಶಕ್ತಿಯನ್ನು ತೋರಿಸಿದ್ದ ಯಶ್, ಇದೀಗ ರಾಮಾಯಣದ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನ ಇಡೀ ವಿಶ್ವ ಸಿನಿದುನಿಯಾಗೆ ಗೊತ್ತು ಮಾಡಿದ್ದಾರೆ.

ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಗುರ್ತಿಸುವಂತೆ ಮಾಡಬೇಕು. ಕರ್ನಾಟಕದ ಹೆಸರನ್ನು ವಿಶ್ವದ ಚಿತ್ರರಂಗದ ಭೂಪಟದಲ್ಲಿ ರಾರಾಜಿಸುವಂತೆ ಮಾಡ್ಬೇಕು ಅನ್ನೋ ತಮ್ಮ ಆಶಯ ಮತ್ತು ಭರವಸೆಯನ್ನು ಯಶ್ ಮತ್ತೊಮ್ಮೆ ಈಡೇರಿಸಿದ್ದಾರೆ. ಅವರ ಈ ಸಾಧನೆ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಹೊಸ ಆಯಾಮ ನೀಡಿದೆ. ಬ್ರಿಟನ್ ಮಾರ್ಕೆಟ್‌‌ನಲ್ಲಿ ಗಾಡ್ಜಿಲ್ಲಾ ಚಿತ್ರವನ್ನ ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿರುವುದು ಚಿತ್ರದ ಜಾಗತಿಕ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದು ಕೇವಲ ಯಶ್ ಯಶಸ್ಸಲ್ಲ.. ಕನ್ನಡ ಚಿತ್ರರಂಗದ ಸಾಮರ್ಥ್ಯ ಮತ್ತು ಕನ್ನಡಿಗರ ಹೆಮ್ಮೆಯ ಕೈಗನ್ನಡಿಯೂ ಹೌದು. ದಂಗಲ್ ದಾಖಲೆ ಸರಿಗಟ್ಟುತ್ತಾ ಇಲ್ವಾ ಅನ್ನೋದನ್ನ ಇನ್ನಷ್ಟೇ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version