ಕನ್ನಡಿಗನ ತಾಕತ್ತು..ಪುಷ್ಪ ಆಲ್ ಟೈಂ ರೆಕಾರ್ಡ್ ಧೂಳೀಪಟ..!

ಪುಷ್ಪ ಗಳಿಕೆ 1742 ಕೋಟಿ..ರಾಮಾಯಣ ಕಲೆಕ್ಷನ್ 1760Cr

Your paragraph text 2026 11 26T180730.562

ಅತಿಹೆಚ್ಚು ಬಾಕ್ಸ್ ಆಫೀಸ್ ಗಳಿಸಿದ ಟಾಪ್-5 ಇಂಡಿಯನ್ ಮೂವೀಸ್ ಲಿಸ್ಟ್‌‌ನಲ್ಲಿ ಪುಷ್ಪ-2 ಕೂಡ ಒಂದು. ಆದ್ರೀಗ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಆಲ್ ಟೈಂ ರೆಕಾರ್ಡ್‌‌ನ ರಾಮಾಯಣ ಧೂಳೀಪಟ ಮಾಡಿದೆ. ಇದು ಕನ್ನಡಿಗ ಯಶ್‌ಗಿರೋ ತಾಕತ್ತು ಅನ್ನೋದು ಈಗ ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತಾಗಿದೆ. ಈ ಕುರಿತ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ…

ರಾಮಾಯಣ ಸಿನಿಮಾದಿಂದ ಭಾರತೀಯ ಬಾಕ್ಸ್ ಆಫೀಸ್ ಸುಲ್ತಾನರಾಗಿ ಮಾರ್ಪಟ್ಟಿದ್ದಾರೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್‌ನ ರಣ್ಬೀರ್ ಕಪೂರ್. ಹೌದು.. ಕೇವಲ 19 ದಿನದಲ್ಲಿ 1760 ಕೋಟಿ ಗಳಿಸೋ ಮೂಲಕ ಭಾರತದ ಅತಿಹೆಚ್ಚು ಗಳಿಕೆಯ ಸಿನಿಮಾಗಳ ಪಟ್ಟಿ ಸೇರಿಕೊಂಡಿದೆ ರಾಮಾಯಣ ದೃಶ್ಯಕಾವ್ಯ. ಇದು ಕನ್ನಡಿಗ ಯಶ್ ಅವರ ದೂರದೃಷ್ಠಿ, ಬದ್ಧತೆ ಹಾಗೂ ಸಿನಿಮಾ ಪ್ಯಾಷನ್‌ನ ಕೈಗನ್ನಡಿಯೂ ಹೌದು.

ಅಂದಹಾಗೆ ಅಲ್ಲು ಅರ್ಜುನ್ ನಟನೆಯ, ಸುಕುಮಾರ್ ನಿರ್ದೇಶನದ ಪುಷ್ಪ-2 ಸಿನಿಮಾದ ಆಲ್ ಟೈಂ ರೆಕಾರ್ಡ್‌‌ನ ಕೇವಲ 19 ದಿನದಲ್ಲಿ ಸರಿಗಟ್ಟಿದೆ ರಾಮಾಯಣ. ಪುಷ್ಪ-2 ವರ್ಲ್ಡ್‌‌ವೈಡ್ 1742 ಕೋಟಿ ಕಲೆಕ್ಷನ್ ಮಾಡಿತ್ತು. ಆದ್ರೀಗ ರಾಮಾಯಣ ಅದನ್ನ ಮೀರಿಸಿ ಪಟ್ಟಿಯಲ್ಲಿ ಕೊಂಚ ಮೇಲೆ ಹೋಗಿ ಕೂತಿದೆ. ಇದನ್ನ ಕಂಡು ನೆಟ್ಟಿಗರು.. ಚಪ್ರಿ ಪುಷ್ಪನ ಬೀಟ್ ಮಾಡಿದೆ ರಾಮಾಯಣ. ಭಾರತೀಯ ಚಿತ್ರರಂಗ ಗೆದ್ದಿದೆ ಇಂದು ಅಂತೆಲ್ಲಾ ಪೋಸ್ಟ್‌‌ಗಳನ್ನ ಹಾಕ್ತಿದ್ದಾರೆ.

ಅತಿಹೆಚ್ಚು ಗಳಿಸಿದ ಇಂಡಿಯನ್ ಸಿನಿಮಾಗಳ ಲಿಸ್ಟ್‌ನಲ್ಲಿ ದಂಗಲ್, ಧುರಂಧರ್-2, ಬಾಹುಬಲಿ-2 ಕೂಡ ಇವೆ. ನಾಲ್ಕನೇ ಸ್ಥಾನದಲ್ಲಿ ರಾಮಾಯಣ ನಿಂತಿದೆ. ಆದ್ರೆ ರಾಮಾಯಣ ಆಟ ಇನ್ನೂ ಮುಗಿದಿಲ್ಲ. ಯಾಕಂದ್ರೆ ಚೀನಾ, ರಷ್ಯಾ, ಜಪಾನ್ ಹಾಗೂ ಸೌತ್ ಕೊರಿಯಾಗಳಲ್ಲೆಲ್ಲಾ ನಮ್ಮ ಯಶ್ ನಟನೆಯ ರಾಮಾಯಣ ಚಿತ್ರ ಇನ್ನೂ ರಿಲೀಸೇ ಆಗಿಲ್ಲ. 2027ರ ಆರಂಭದಲ್ಲಿ ಅಲ್ಲಿ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಸೋ.. ಅಲ್ಲೆಲ್ಲಾ ರಿಲೀಸ್ ಆದ್ರೆ ದಂಗಲ್ ದಾಖಲೆ ಮುರಿದರೂ ಅಚ್ಚರಿಯಿಲ್ಲ ಅನ್ನೋದು ಸ್ಪಷ್ಟ.

ಇಂಟರೆಸ್ಟಿಂಗ್ ಅಂದ್ರೆ ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ನಮ್ಮ ಯಶ್ ನಟನೆಯ ರಾಮಾಯಣ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ಪೋಸ್ಟ್ ಹಾಕೋ ಮೂಲಕ ಬೆಂಬಲಿಸಿ, ಮತ್ತಷ್ಟು ಮಂದಿ ಸಿನಿಮಾ ನೋಡುವಂತೆ ಮಾಡಿದ್ದಾರೆ. ಇದೊಂಥರಾ ಹೆಲ್ದಿ ಕಾಂಪಿಟೇಷನ್ ಅನ್ನಬಹುದು. ಅಲ್ಲು ಅರ್ಜುನ್‌‌ಗಿರೋ ಬ್ರಾಡ್ ಮೈಂಡ್‌‌ ನಿಜಕ್ಕೂ ಇತರೇ ಸ್ಟಾರ್‌‌ಗಳಲ್ಲಿ ಕೂಡ ಬರಬೇಕಾಗುತ್ತೆ. ನಮ್ಮ ಯಶ್ ಈ ಹಿಂದೆಯೇ ಹೇಳಿದಂತೆ ರೆಕಾರ್ಡ್‌‌ಗಳು ಇರೋದೇ ಮತ್ತೊಬ್ಬರು ಬ್ರೇಕ್ ಮಾಡೋಕೆ ಅನ್ನೋದು ನಿಜವಾಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version