ಕಿರಾತಕ ಸೀಕ್ವೆಲ್ ಸಿನಿಮಾ ಮತ್ತೆ ಟ್ರೆಂಡಿಂಗ್ನಲ್ಲಿದೆ. ಅದಕ್ಕೆ ಕಾರಣ ಒನ್ಸ್ ಅಗೈನ್ ರಾಕಿಂಗ್ ಸ್ಟಾರ್ ಯಶ್. ಯೆಸ್.. ಈಗಾಗ್ಲೇ ಶೂಟಿಂಗ್ ಶುರುವಾಗಿ.. ದುಬೈ ಶೆಡ್ಯೂಲ್ಗೆ ಹೋಗೋಕೆ ತುದಿಗಾಲಲ್ಲಿ ನಿಂತಿದ್ದ ಟೀಂ.. ದಿಢೀರ್ ಅಂತ ಶೂಟಿಂಗ್ ಜೊತೆ ಸಿನಿಮಾನೇ ನಿಲ್ಲಿಸಿತ್ತು. ಆದ್ರೀಗ ಅದೇ ಸಿನಿಮಾದ ಬಗ್ಗೆ ಖುದ್ದು ಮಾನ್ಸ್ಟರ್ ಯಶ್ ಮಾತನಾಡಿದ್ದಾರೆ. ನಾನು ಅದನ್ನ ಮಾಡೇ ಮಾಡ್ತೀನಿ ಅಂತ ಅಣ್ತಮ್ಮಾಸ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.
- ಅಣ್ತಮ್ಮಾಸ್ಗೆ ಗುಡ್ ನ್ಯೂಸ್.. ಬರಲಿದೆ ಯಶ್ ಕಿರಾತಕ-2
- ರಾಕಿಭಾಯ್ ಹೋಮ್ ಬ್ಯಾನರ್.. 100% ಜಾಕ್ಪಾಟ್..!!
- ರಾಮಾಯಣ ಪ್ರಮೋಷನ್ಸ್ ವೇಳೆ ಖುದ್ದು ಯಶ್ ರಿವೀಲ್..!
- ಮಂಡ್ಯ ಸ್ಲ್ಯಾಂಗ್ ಗೂಳಿ ಗ್ಯಾಂಗ್.. ಅನಿಲ್ ಆ್ಯಕ್ಷನ್ ಕಟ್ ಫಿಕ್ಸ್
ಕಿರಾತಕ.. ರಾಕಿಂಗ್ ಸ್ಟಾರ್ ಯಶ್ ಸಿನಿ ಕರಿಯರ್ನ ಆರಂಭದ ದಿನಗಳಲ್ಲಿ ತೆರೆಕಂಡ ಸಿನಿಮಾ. ಇದು ಮೊದಲಾಸಲ ಹಾಗೂ ರಾಜಾಹುಲಿ ಚಿತ್ರಗಳ ಬಿಗ್ಗೆಸ್ಟ್ ಹಿಟ್ ಬಳಿಕ.. ನಟ ಯಶ್ಗೆ ಹ್ಯಾಟ್ರಿಕ್ ಹಿಟ್ ತಂದುಕೊಟ್ಟ ಸಿನಿಮಾ ಕೂಡ ಹೌದು. ತಮಿಳು ಸಿನಿಮಾದ ರಿಮೇಕ್ ಆದ್ರೂ ಸಹ.. ನಮ್ಮ ಮಂಡ್ಯ ನೇಟಿವಿಟಿಗೆ ಹೇಳಿ ಮಾಡಿಸಿದ ಸಿನಿಮಾ ಆಗಿತ್ತು. 2011ರಲ್ಲಿ ಪ್ರದೀಪ್ ರಾಜ್ ನಿರ್ದೇಶನದ ಕಿರಾತಕ ಕೋಟಿ ಕೋಟಿ ಕಮಾಯಿ ಮಾಡಿ, ಥಿಯೇಟರ್ಗಳೆಲ್ಲಾ ಹೌಸ್ಫುಲ್ ಪ್ರದರ್ಶನ ಕಂಡಿತ್ತು.
ನಂದೀಶ ಅಲಿಯಾಸ್ ಗೂಳಿಯಾಗಿ ಯಶ್, ಗೂಳಿಯ ಆಪ್ತಮಿತ್ರನಾಗಿ ಚಿಕ್ಕಣ್ಣ ಮಿಂಚಿದ್ರು. ಅಲ್ಲದೆ ಯಶ್ ತಂದೆ-ತಾಯಿ ಪಾತ್ರಗಳಲ್ಲಿ ಟಿ ಎಸ್ ನಾಗಾಭರಣ ಹಾಗೂ ತಾರಾ ಕಮಾಲ್ ಮಾಡಿದ್ರು. ಸಂಕೇತ್ ಕಾಶಿ ಕಾಮಿಡಿ ಕೂಡ ಮಸ್ತ್ ಮಜಾ ಕೊಟ್ಟಿತ್ತು. ಎರಡು ಅಕ್ಕ-ಪಕ್ಕದ ಊರುಗಳ ಗ್ಯಾಂಗ್ಗಳ ನಡುವಿನ ರೈವಲ್ರಿ.. ಖಳನಾಯಕ ಡ್ಯಾನಿಯಲ್ ಬಾಲಾಜಿ ತಂಗಿ ಓವಿಯಾಳನ್ನೇ ಪ್ರೀತಿಸುವ ನಾಯಕನಟ ಯಶ್.. ನಂತ್ರ ನಡೆಯೋ ಪರಿಣಾಮಗಳ ಕಥಾಬಕ ಅದಾಗಿತ್ತು.
‘ಆಷಾಢ ಕಳೆದು ಶ್ರಾವಣ ಬಂದ್ರೆ.. ನನ್ ಮಗ ಟಾಪ್ ಅಲ್ಲಿ ಬರ್ತಾನೆ’ ಅನ್ನೋ ತಾರಮ್ಮನ ಡೈಲಾಗ್ ಕಿಕ್ ಕೊಟ್ಟಿತ್ತು. ವಿ ಮನೋಹರ್ ಸಂಗೀತ, ಈ ಸಿನಿಮಾನ ಮ್ಯೂಸಿಕಲಿ ಮ್ಯಾಜಿಕ್ ಮಾಡುವಂತೆ ಮಾಡಿತ್ತು. ಯಶ್-ಚಿಕ್ಕಣ್ಣ ಕಾಂಬಿನೇಷನ್ ಅಂತೂ ಟಾಪ್ ಲೆವೆಲ್ ವರ್ಕೌಟ್ ಆಗಿತ್ತು. 20ಕ್ಕೂ ಅಧಿಕ ಥಿಯೇಟರ್ಗಳಲ್ಲಿ 50 ಡೇಸ್.. ಹತ್ತಾರು ಥಿಯೇಟರ್ಗಳಲ್ಲಿ ಶತದಿನೋತ್ಸವ ಆಚರಿಸಿದ್ದ ಈ ಸಿನಿಮಾ.. 2018ರಲ್ಲಿ ಸೀಕ್ವೆಲ್ಗೆ ಮುನ್ನುಡಿ ಬರೆದಿತ್ತು. ಸ್ವತಃ ಯಶ್, ನಿರ್ಮಾಪಕ ಜಯಣ್ಣ ಜೊತೆಗೂಡಿ ದಿಲ್ವಾಲ ಅನಿಲ್ ನಿರ್ದೇಶನದಲ್ಲಿ ಈ ಚಿತ್ರ ಸೆಟ್ಟೇರಿತ್ತು.
ಟ್ರಬಲ್ ಮೇಕರ್ ಈಸ್ ಬ್ಯಾಕ್ ಇನ್ ಆ್ಯಕ್ಷನ್. ನಾನು ಯಾರು..? ಅಣ್ತಮ್ಮಾ ನನ್ನ ಹೆಸರು ಕಿರಾತಕ ಅಂತ ಯಶ್ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡು.. ಶೂಟಿಂಗ್ ಸಮಯದ ಸ್ಟಿಲ್ಫೋಟೋ ಕೂಡ ಹಂಚಿಕೊಂಡಿದ್ರು. ಚಿತ್ರ ಮುಹೂರ್ತ ಕಂಡು ಹದಿನೈದರಿಂದ 20 ದಿನ ಚಿತ್ರೀಕರಣ ಮುಗಿಸಿತ್ತು. ಮುಂದಿನ ಹಂತದ ಶೂಟಿಂಗ್ಗೆ ದುಬೈಗೆ ತೆರಳಲು ಪಾಸ್ಪೋರ್ಟ್, ವೀಸಾ ಎಲ್ಲಾ ಸಿದ್ದಗೊಳಿಸಿತ್ತು. ಅಷ್ಟರಲ್ಲಾಗಲೇ ಕೆಜಿಎಫ್ ಚಾಪ್ಟರ್-1 ಬಿಗ್ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಗಡ್ಡ ತೆಗೆದು.. ಮತ್ತೆ ಗೂಳಿಯಾಗಿ ಕಮಾಲ್ ಮಾಡೋಕೆ ಮುಂದಾಗಿದ್ದ ಯಶ್.. ದಿಢೀರ್ ಅಂತ ಕಿರಾತಕ-2 ನಿಲ್ಲಿಸಿ, ಕೆಜಿಎಫ್-2ಗೆ ಜೈ ಅಂದುಬಿಟ್ರು.
ಆ ಟೈಮ್ಗೆ ಯಶ್ ತೆಗೆದುಕೊಂಡ ನಿರ್ಧಾರ ಸರಿಯಾಗೇ ಇತ್ತು. ಆದ್ರೆ ಕಥೆ, ಚಿತ್ರಕಥೆ, ಡೈಲಾಗ್ಸ್ ಸಿದ್ದಗೊಳಿಸಿ ಕಾಯ್ತಿದ್ದ ಡೈರೆಕ್ಟರ್ ಅನಿಲ್ ಕುಮಾರ್ ಮಾತ್ರ ಇಂದಿಗೂ ಯಶ್ ಡೇಟ್ಸ್ ಅಥ್ವಾ ಅವ್ರ ಗ್ರೀನ್ ಸಿಗ್ನಲ್ಗಾಗಿ ಕಾಯ್ತಾನೇ ಇದ್ದಾರೆ. ಆ ಸಿನಿಮಾ ಹೆಚ್ಚೂ ಕಡಿಮೆ ಒಂದು ದಶಕದ ಆಗ್ತಾ ಬರ್ತಿದೆ.. ಈಗ ಮತ್ತೆ ಮುನ್ನೆಲೆಗೆ ಬಂದಿದೆ. ರಾಮಾಯಣ ಸಿನಿಮಾದ ಗ್ಲೋಬಲ್ ಪ್ರಮೋಷನ್ಸ್ ವೇಳೆ ಖುದ್ದು ಯಶ್ ಅವರೇ ಕಿರಾತಕ ಚಿತ್ರ ಹಾಗೂ ಅದ್ರ ಸೀಕ್ವೆಲ್ನ ನೆನೆದಿದ್ದಾರೆ.
ಹೌದು.. ಕಿರಾತಕ ಸಿನಿಮಾ ಯಶ್ ಅವ್ರ ಮನಸ್ಸಿಗೆ ಬಹಳ ಹತ್ತಿರವಾದ ಸಿನಿಮಾ. ಅವರು ಹೇಳಿದಂತೆ ಕಥೆ ರೆಡಿ ಇತ್ತು. ಶೂಟಿಂಗ್ ಕೂಡ ಶುರುವಾಗಿತ್ತು. ಅವರು ಅದನ್ನ ಮುಂದಿನ ದಿನಗಳಲ್ಲಿ ಮಾಡುವ ಇಂಗಿತ ಕೂಡ ವ್ಯಕ್ತಪಡಿಸಿದ್ದಾರೆ. ಕೆಜಿಎಫ್, ಟಾಕ್ಸಿಕ್, ರಾಮಾಯಣದಂತಹ ಚಿತ್ರಗಳಿಂದ ಹಾಲಿವುಡ್ ಲೆವೆಲ್ ರೀಚ್ ಆಗಿರೋ ನಮ್ಮ ಹೆಮ್ಮೆಯ ಕನ್ನಡಿಗ, ಆಲ್ ಟೈಂ ಅಣ್ತಮ್ಮ.. ಮತ್ತೆ ಅಣ್ತಮ್ಮನಾಗ್ತೀನಿ ಅಂದ್ರೆ ತಲೆ ಮೇಲೆ ಹೊತ್ತು ಮೆರೆಸಿಬಿಡ್ತಾರೆ ಕನ್ನಡಿಗರು. ಅದ್ರಲ್ಲೂ ಯಶ್ ತಮ್ಮದೇ ಹೋಮ್ ಬ್ಯಾನರ್ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ನಲ್ಲಿ ಕಿರಾತಾಕ-2 ಮಾಡಿದ್ರೆ ಬಾಕ್ಸ್ ಆಫೀಸ್ನಲ್ಲಿ ಜಾಕ್ಪಾಟ್ ಕನ್ಫರ್ಮ್. ಅಣ್ತಮ್ಮನ ಕ್ರೇಜ್ ಖದರ್.. ಆ ನೇಟಿವಿಟಿಗಿರೋ ಪವರ್ ಕಿಂಚಿತ್ತೂ ಕಮ್ಮಿ ಆಗಿಲ್ಲ. ಹಾಗಾಗಿ ಯಾವಾಗ ಕಿರಾತಕ-2 ಮತ್ತೆ ರೀ ಸ್ಟಾರ್ಟ್ ಆಗುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
